ದೇಶ

Deepfake: ರಶ್ಮಿಕಾ ಬಳಿಕ ಕತ್ರಿನಾ ಫೋಟೋ Morph! 

ನಟಿ ರಶ್ಮಿಕಾ ಮಂದಣ್ಣ ಅವರ ಡೀಪ್‌ಫೇಕ್ ವಿಡಿಯೋ ವ್ಯಾಪಕ ವೈರಲ್ ಆಗುತ್ತಿದ್ದಂತೆಯೇ ನಟಿ ಕತ್ರಿನಾ ಅವರ ಸಿನಿಮಾ ದೃಶ್ಯವೊಂದರ ಫೋಟೋವನ್ನೂ ತಿರುಚಿ ವೈರಲ್ ಮಾಡಲಾಗುತ್ತಿದೆ.

Deepfake: ರಶ್ಮಿಕಾ ಬಳಿಕ ಕತ್ರಿನಾ ಫೋಟೋ Morph! 
ಸಿನಿಮಾದ ನೈಜ ದೃಶ್ಯ (ಎಡಭಾಗದ ಚಿತ್ರ) ಡೀಫೇಕ್ ಮೂಲಕ ತಿರುಚಲಾದ ದೃಶ್ಯ (ಬಲಭಾಗದ ಚಿತ್ರ)
Published On :

ನವದೆಹಲಿ: ನಟಿ ರಶ್ಮಿಕಾ ಮಂದಣ್ಣ ಅವರ ಡೀಪ್‌ಫೇಕ್ ವಿಡಿಯೋ ವ್ಯಾಪಕ ವೈರಲ್ ಆಗುತ್ತಿದ್ದಂತೆಯೇ ನಟಿ ಕತ್ರಿನಾ ಅವರ ಸಿನಿಮಾ ದೃಶ್ಯವೊಂದರ ಫೋಟೋವನ್ನೂ ತಿರುಚಿ ವೈರಲ್ ಮಾಡಲಾಗುತ್ತಿದೆ.

ಟೈಗರ್ 3 ಸಿನಿಮಾದ ಹಾಡೊಂದರ ದೃಶ್ಯವನ್ನು Deepfake ಮೂಲಕ ತಿರುಚಲಾಗಿದೆ. ಕತ್ರಿನಾ ಟವಲ್ ಧರಿಸಿ ಆಕ್ಷನ್ ಸ್ಟಂಟ್ ಮಾಡಿರುವ ದೃಶ್ಯ ಇದಾಗಿದೆ. ಆದರೆ ಡೀಪ್ ಫೇಕ್ ಚಿತ್ರದಲ್ಲಿ ಒಂದೇ ಭಂಗಿಯಾಗಿದ್ದರೂ, ವಿಭಿನ್ನ ಮತ್ತು ಬದಲಾದ ಉಡುಪಿನೊಂದಿಗೆ, ಇದು ತಿರುಚಿದ ಚಿತ್ರ ಎಂಬುದನ್ನು  ಸ್ಪಷ್ಟ ಮಾಡುತ್ತದೆ.

ಇದನ್ನೂ ಓದಿ: Deepfake Technology: ಏನಿದು ಡೀಪ್ ಫೇಕ್ ತಂತ್ರಜ್ಞಾನ? ರಶ್ಮಿಕಾ ವೈರಲ್ ವಿಡಿಯೋ ನಂತರ ಸುದ್ದಿಯಲ್ಲಿ AI!

ಕೆಲವೇ ಕೆಲವು ದಿನಗಳ ಹಿಂದೆ ಇದೇ ಮಾದರಿಯಲ್ಲಿ ನಟಿ ರಶ್ಮಿಕಾ ಅವರ ವೀಡಿಯೋ ಸಹ ವೈರಲ್ ಆಗತೊಡಗಿತ್ತು. ಡೀಪ್ ಫೇಕ್ ನಲ್ಲಿ ಕೃತಕ ಬುದ್ದಿಮತ್ತೆಯ ಸಹಾಯದಿಂದ ವಿಡಿಯೋ ಸೃಷ್ಟಿ ಮಾಡಲಾಗುತ್ತದೆ ವ್ಯಕ್ತಿಯ ದೇಹಕ್ಕೂ ಮತ್ತು ಮುಖಕ್ಕೆ ನೇರ ಸಂಬಂಧ ಇದ್ದಂತೆಯೇ ಒಬ್ಬರ ದೇಹಕ್ಕೆ ಮತ್ತೊಬ್ಬರ ಮುಖವನ್ನು ಜೋಡಿಸಲಾಗುತ್ತದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.