ರಾಜಸ್ಥಾನ ವಿಧಾನಸಭೆ ಚುನಾವಣೆ: 15 ಅಭ್ಯರ್ಥಿಗಳಿರುವ ಐದನೇ ಪಟ್ಟಿ ಬಿಡುಗಡೆ ಮಾಡಿದ ಬಿಜೆಪಿ!
ನವೆಂಬರ್ 25 ರಂದು ನಡೆಯಲಿರುವ ರಾಜಸ್ಥಾನ ವಿಧಾನಸಭಾ ಚುನಾವಣೆಗೆ ಕೆಲವು ಹೊಸ ಮುಖಗಳನ್ನು ಒಳಗೊಂಡಿರುವ 15 ಅಭ್ಯರ್ಥಿಗಳ ಪಟ್ಟಿಯನ್ನು ಬಿಜೆಪಿ ಭಾನುವಾರ ಬಿಡುಗಡೆ ಮಾಡಿದೆ. ಪಕ್ಷವು ಮಾವ್ಲಿ (ಉದಯಪುರ) ಕ್ಷೇತ್ರದ ಹಾಲಿ ಶಾಸಕ ಧರ್ಮನಾರಾಯಣ ಜೋಶಿ ಅವರನ್ನು ಕೈಬಿಟ್ಟು ಬದಲಿಗೆ ಕೆಜಿ ಪಲಿವಾಲ್ ಅವರನ್ನು ಕಣಕ್ಕಿಳಿಸಿದೆ.

ಜೈಪುರ: ನವೆಂಬರ್ 25 ರಂದು ನಡೆಯಲಿರುವ ರಾಜಸ್ಥಾನ ವಿಧಾನಸಭಾ ಚುನಾವಣೆಗೆ ಕೆಲವು ಹೊಸ ಮುಖಗಳನ್ನು ಒಳಗೊಂಡಿರುವ 15 ಅಭ್ಯರ್ಥಿಗಳ ಪಟ್ಟಿಯನ್ನು ಬಿಜೆಪಿ ಭಾನುವಾರ ಬಿಡುಗಡೆ ಮಾಡಿದೆ.
ಪಕ್ಷವು ಮಾವ್ಲಿ (ಉದಯಪುರ) ಕ್ಷೇತ್ರದ ಹಾಲಿ ಶಾಸಕ ಧರ್ಮನಾರಾಯಣ ಜೋಶಿ ಅವರನ್ನು ಕೈಬಿಟ್ಟು ಬದಲಿಗೆ ಕೆಜಿ ಪಲಿವಾಲ್ ಅವರನ್ನು ಕಣಕ್ಕಿಳಿಸಿದೆ.
ಪಕ್ಷದಿಂದ ಕಣಕ್ಕಿಳಿದಿರುವ ಹೊಸ ಮುಖಗಳಲ್ಲಿ ಸಿವಿಲ್ ಲೈನ್ಸ್ನಿಂದ ಗೋಪಾಲ್ ಶರ್ಮಾ ಮತ್ತು ಆದರ್ಶ ನಗರದಿಂದ ರವಿ ನಯ್ಯರ್ ಸೇರಿದ್ದಾರೆ.
ನವೆಂಬರ್ 2 ರಂದು ಬಿಡುಗಡೆಯಾದ ಮೂರನೇ ಪಟ್ಟಿಯಲ್ಲಿ ಮಾಜಿ ಸಚಿವ ದೇವಿ ಸಿಂಗ್ ಭಾಟಿ ಅವರ ಸೊಸೆ ಪೂನಂ ಕನ್ವರ್ ಭಾಟಿ ಹೆಸರನ್ನು ಪಕ್ಷ ಘೋಷಿಸಿತ್ತು.
ಇದನ್ನೂ ಓದಿ: ರಾಜಸ್ಥಾನ ಚುನಾವಣೆ: ನಾಮಪತ್ರ ಸಲ್ಲಿಸಿದ ವಸುಂಧರಾ ರಾಜೆ, ನಿವೃತ್ತಿಯಾಗುವ ಉದ್ದೇಶವಿಲ್ಲ ಎಂದು ಸ್ಪಷ್ಟನೆ
ಆದಾಗ್ಯೂ, ಹೊಸ ಪಟ್ಟಿಯಲ್ಲಿ, ಪೂನಂ ಕನ್ವರ್ ಭಾಟಿ ಬದಲಿಗೆ ಅವರ ಮಗ ಅಂಶುಮಾನ್ ಸಿಂಗ್ ಭಾಟಿ ಅವರನ್ನು ಕೊಲಾಯತ್ ಕ್ಷೇತ್ರದಿಂದ ಕಣಕ್ಕಿಳಿಸಲಾಗಿದೆ.
ಅಮಿತ್ ಚೌಧರಿ ಹನುಮಾನ್ಗಢದಿಂದ, ಚಂದ್ರಮೋಹನ್ ಬಟ್ವಾಡ ಅವರು ಕಿಶನ್ಪೋಲ್ನಿಂದ, ವಿಜಯ್ ಬನ್ಸಾಲ್ ಭರತ್ಪುರದಿಂದ, ಮಾಜಿ ಶಾಸಕರಾದ ರಾಜ್ಕುಮಾರ್ ರಿನ್ವಾ ಸರ್ದರ್ಶಹರ್ನಿಂದ, ಪ್ರಹ್ಲಾದ್ ಗುಂಜಾಲ್ ಕೋಟಾ ಉತ್ತರದಿಂದ ಮತ್ತು ಬಾಬು ಸಿಂಗ್ ರಾಥೋಡ್ ಶೇರ್ಗಢದಿಂದ ಕಣಕ್ಕಿಳಿದಿದ್ದಾರೆ. ಶಹಪುರ, ರಾಜಖೇರಾ, ಮಸುದಾ, ಪಿಪಾಲ್ಡಾ ಮತ್ತು ಬರನ್-ಅಟ್ರು ಸ್ಥಾನಗಳಿಗೆ ಕೂಡ ಅಭ್ಯರ್ಥಿಗಳನ್ನು ಘೋಷಿಸಲಾಗಿದೆ.
ಈ ಐದನೇ ಪಟ್ಟಿಯೊಂದಿಗೆ ಪಕ್ಷವು ಇದುವರೆಗೆ ರಾಜ್ಯದ 200 ಸ್ಥಾನಗಳ ಪೈಕಿ 198 ಸ್ಥಾನಗಳಿಗೆ ಅಭ್ಯರ್ಥಿಗಳನ್ನು ಘೋಷಿಸಿದೆ. ನಾಮಪತ್ರ ಸಲ್ಲಿಸಲು ನವೆಂಬರ್ 6 ಕೊನೆಯ ದಿನವಾಗಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


