ಮುಂಬೈ: 24 ಕೋಟಿ ರೂ. ಮೌಲ್ಯದ ವಿದೇಶಿ ಸಿಗರೇಟ್ ಜಪ್ತಿ, ಐವರ ಬಂಧನ
ಮುಂಬೈನ ಕಂದಾಯ ಗುಪ್ತಚರ ನಿರ್ದೇಶನಾಲಯ(ಡಿಆರ್ ಐ ) ಅಂದಾಜು 24 ಕೋಟಿ ರೂಪಾಯಿ ಮೌಲ್ಯದ 1.2 ಕೋಟಿ ವಿದೇಶಿ ಮೂಲದ ಸಿಗರೇಟ್‌ಗಳನ್ನು ಜಪ್ತಿ ಮಾಡಿದೆ ಮತ್ತು ಅವುಗಳ ಕಳ್ಳಸಾಗಣೆ ಮಾಡಲು ಯತ್ನಿಸಿದ ಆರೋಪದ ಮೇಲೆ...

ಮುಂಬೈ: ಮುಂಬೈನ ಕಂದಾಯ ಗುಪ್ತಚರ ನಿರ್ದೇಶನಾಲಯ(ಡಿಆರ್ ಐ ) ಅಂದಾಜು 24 ಕೋಟಿ ರೂಪಾಯಿ ಮೌಲ್ಯದ 1.2 ಕೋಟಿ ವಿದೇಶಿ ಮೂಲದ ಸಿಗರೇಟ್‌ಗಳನ್ನು ಜಪ್ತಿ ಮಾಡಿದೆ ಮತ್ತು ಅವುಗಳ ಕಳ್ಳಸಾಗಣೆ ಮಾಡಲು ಯತ್ನಿಸಿದ ಆರೋಪದ ಮೇಲೆ ಆಮದುದಾರ ಸೇರಿದಂತೆ ಐವರನ್ನು ಬಂಧಿಸಿದೆ.
ಈ ಸಿಗರೇಟ್‌ಗಳು ಭಾರತೀಯ ಮಾನದಂಡಗಳನ್ನು ಅನುಸರಿಸದ ಕಾರಣ ಭಾರತಕ್ಕೆ ಆಮದು ಮಾಡಿಕೊಳ್ಳುವುದನ್ನು ನಿಷೇಧಿಸಲಾಗಿದೆ ಎಂದು ಡಿಆರ್‌ಐ ಭಾನುವಾರ ಪ್ರಕಟಣೆಯಲ್ಲಿ ತಿಳಿಸಿದೆ.
ನಿರ್ದಿಷ್ಟ ಗುಪ್ತಚರ ಮಾಹಿತಿ ಆಧರಿಸಿ, ಕಂಟೇನರ್‌ನಿಂದ ನಿಷೇಧಿತ ವಿದೇಶಿ ಸಿಗರೇಟ್ ಗಳನ್ನು ವಶಪಡಿಸಿಕೊಳ್ಳಲಾಗಿದೆ. ಅದನ್ನು ಹೆಚ್ಚಿನ ಕ್ಲಿಯರೆನ್ಸ್‌ಗಾಗಿ ಅರ್ಷಿಯಾ ಮುಕ್ತ ವ್ಯಾಪಾರ ಉಗ್ರಾಣ ವಲಯಕ್ಕೆ(ಎಫ್‌ಟಿಡಬ್ಲ್ಯೂಜೆಡ್) ರವಾನಿಸಲಾಗಿದೆ ಎಂದು ಡಿಆರ್ ಐ ಹೇಳಿದೆ.
ಕಂಟೈನರ್ ಚಲನವಲನದ ಮೇಲೆ ಡಿಆರ್ ಐ ಅಧಿಕಾರಿಗಳು ಪ್ರತ್ಯೇಕ ನಿಗಾ ವಹಿಸಿದ್ದರು.
ಕಂಟೇನರ್ ನವಿ ಮುಂಬೈನ ನ್ಹವಾ ಶೇವಾ ಬಂದರಿನಿಂದ ಹೊರಟ ನಂತರ, ಅದರ ಗಮ್ಯಸ್ಥಾನವನ್ನು ತಲುಪುವ ಮುನ್ನ ಡಿಆರ್ ಐ ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ.
40 ಅಡಿ ಕಂಟೇನರ್‌ನಲ್ಲಿ ಸಂಪೂರ್ಣ ವಿದೇಶಿ ಮೂಲದ ಸಿಗರೇಟ್‌ಗಳನ್ನು ತುಂಬಿರುವುದು ಕಂಡುಬಂದಿದೆ. ಇವು ಭಾರತೀಯ ಮಾನದಂಡಗಳನ್ನು ಅನುಸರಿಸದ ಕಾರಣ ಭಾರತಕ್ಕೆ ಆಮದು ಮಾಡಿಕೊಳ್ಳಲು ನಿಷೇಧಿಸಲಾಗಿದೆ ಎಂದು ಪ್ರಕಟಣೆ ತಿಳಿಸಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


