ಅಬಕಾರಿ ನೀತಿ ಪ್ರಕರಣ: 2 ಆರೋಪಿಗಳಿಗೆ ದೆಹಲಿ ನ್ಯಾಯಾಲಯ ಜಾಮೀನು; ಕ್ಷಮೆಯಾಚಿಸುವಂತೆ ಬಿಜೆಪಿಗೆ ಎಎಪಿ ಒತ್ತಾಯ
ಅಬಕಾರಿ ನೀತಿ ಪ್ರಕರಣದಲ್ಲಿ ಇಬ್ಬರು ಆರೋಪಿಗಳಿಗೆ ನ್ಯಾಯಾಲಯ ಜಾಮೀನು ನೀಡಿದ ಬಳಿಕ ಪಕ್ಷದ ವಿರುದ್ಧ 'ಸುಳ್ಳು' ಆರೋಪ ಮಾಡಿದ್ದಕ್ಕಾಗಿ ಬಿಜೆಪಿ ನ್ಯಾಯಾಲಯದ ಕ್ಷಮೆಯಾಚಿಸಬೇಕು ಎಂದು ಆಮ್ ಆದ್ಮಿ ಪಕ್ಷ ಒತ್ತಾಯಿಸಿದೆ.

ನವದೆಹಲಿ: ಅಬಕಾರಿ ನೀತಿ ಪ್ರಕರಣದಲ್ಲಿ ಇಬ್ಬರು ಆರೋಪಿಗಳಿಗೆ ನ್ಯಾಯಾಲಯ ಜಾಮೀನು ನೀಡಿದ ಬಳಿಕ ಪಕ್ಷದ ವಿರುದ್ಧ 'ಸುಳ್ಳು' ಆರೋಪ ಮಾಡಿದ್ದಕ್ಕಾಗಿ ಬಿಜೆಪಿ ನ್ಯಾಯಾಲಯದ ಕ್ಷಮೆಯಾಚಿಸಬೇಕು ಎಂದು ಆಮ್ ಆದ್ಮಿ ಪಕ್ಷ ಒತ್ತಾಯಿಸಿದೆ.
ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಎಎಪಿಯ ಹಿರಿಯ ನಾಯಕ ಮತ್ತು ಕ್ಯಾಬಿನೆಟ್ ಸಚಿವ ಅತಿಶಿ, ಮದ್ಯದ ದೊರೆಗಳಿಂದ 100 ಕೋಟಿ ರೂಪಾಯಿ ಲಂಚ ಪಡೆದಿದ್ದಾರೆ. ಈ ಹಣವನ್ನು ಗೋವಾ ಚುನಾವಣೆಯಲ್ಲಿ ಬಳಸಲಾಗಿದೆ ಎಂದು ಜಾರಿ ನಿರ್ದೇಶನಾಲಯ (ಇಡಿ) ಎರಡು ಆರೋಪಗಳನ್ನು ಮಾಡಿದೆ.
ನಿನ್ನೆ, ರೌಸ್ ಅವೆನ್ಯೂ ನ್ಯಾಯಾಲಯವು ರಾಜೇಶ್ ಜೋಶಿ ಮತ್ತು ಗೌತಮ್ ಮಲ್ಹೋತ್ರಾ ಅವರಿಗೆ ಜಾಮೀನು ನೀಡಿದೆ. ಲಂಚ ಅಥವಾ ಕಿಕ್‌ಬ್ಯಾಕ್‌ಗಾಗಿ ಯಾವುದೇ ನಗದು ಪಾವತಿಯನ್ನು ತೋರಿಸಲು ಇಡಿ ಯಾವುದೇ ಪುರಾವೆಗಳನ್ನು ಕೊಟ್ಟಿಲ್ಲ ಎಂದು ನ್ಯಾಯಾಲಯದ ಆದೇಶದಲ್ಲಿ ತಿಳಿಸಲಾಗಿದೆ ಎಂದರು.
ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರು ಇಡೀ ವಿಷಯ "ನಕಲಿ" ಎಂದು ಒತ್ತಾಯಿಸಿದರು. ಅಲ್ಲದೆ ಇದು ಕೇವಲ ತಮ್ಮ ಪಕ್ಷದ ವಿರುದ್ಧ ಮಾನಹಾನಿಗಾಗಿ ಮಾಡಲಾಗಿದೆ ಎಂದು ಹೇಳುತ್ತಿದ್ದರು. ಈಗ ನ್ಯಾಯಾಲಯ ಕೂಡ ಲಂಚ ಅಥವಾ ಅಕ್ರಮ ಹಣ ವರ್ಗಾವಣೆಗೆ ಯಾವುದೇ ಭೌತಿಕ ಸಾಕ್ಷ್ಯಗಳಿಲ್ಲ ಎಂದು ಹೇಳಿದೆ. ನಾವು ಮೊದಲಿನಿಂದಲೂ ಇಡೀ ಮದ್ಯದ ಹಗರಣ ನಕಲಿ ಮತ್ತು ಕೇವಲ ನಮ್ಮ ಇಮೇಜ್ ಅನ್ನು ಹಾಳುಮಾಡುವ ಉದ್ದೇಶ ಎಂದು ಹೇಳುತ್ತಿದ್ದವು ಎಂದರು.
ಜೋಶಿ ಎಂಬ ಮಾರಾಟಗಾರ ಗೋವಾಕ್ಕೆ ಚುನಾವಣೆಗಾಗಿ 30 ಕೋಟಿ ರೂಪಾಯಿಗಳನ್ನು ಕೊಟ್ಟಿರುವುದನ್ನು ಖಚಿತಪಡಿಸಿದ್ದಾರೆ ಎಂದು ಇಡಿ ಹೇಳಿಕೊಂಡಿದೆ. ಆದರೆ ಈ ಸತ್ಯವನ್ನು ದೃಢೀಕರಿಸಲು ಯಾವುದೇ ಸ್ವತಂತ್ರ ಪುರಾವೆಗಳಿಲ್ಲ ಎಂದು ಆದೇಶದಲ್ಲಿ ಹೇಳಲಾಗಿದೆ.
"ಆಮ್ ಆದ್ಮಿ ಪಕ್ಷ (ಎಎಪಿ) ಅತ್ಯಂತ ಪ್ರಾಮಾಣಿಕ ಪಕ್ಷ ಎಂಬುದನ್ನು ಈ ಆದೇಶ ಸಾಬೀತುಪಡಿಸುತ್ತದೆ. ಬಿಜೆಪಿ ವಕ್ತಾರರು ಹಗರಣ ನಡೆದಿದೆ ಎಂದು ಹೇಳುತ್ತಿದ್ದರು. ಆದರೆ ಈಗ ಅವರು ಕ್ಷಮೆಯಾಚಿಸಿ ಯಾವುದೇ ಹಗರಣ ನಡೆದಿಲ್ಲ ಎಂದು ಒಪ್ಪಿಕೊಳ್ಳುತ್ತಾರೆಯೇ?" ನ್ಯಾಯಾಲಯದ ಆದೇಶವನ್ನು ಓದಿದ ಅತಿಶಿ ಅವರು "ಇಡಿ ಹೇಳಿಕೆಯಲ್ಲಿ ವಿರೋಧಾಭಾಸಗಳು ಮತ್ತು ವಿನಾಯಿತಿಗಳನ್ನು" ಕಂಡುಕೊಂಡಿದ್ದಾರೆ ಎಂದು ಹೇಳಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


