ನಗ್ನವಾಗಿ ನೋಡುವಂತ ಕನ್ನಡಕ ಕೊಡುವ ನೆಪದಲ್ಲಿ ಜನರಿಗೆ ವಂಚನೆ: ನಾಲ್ವರ ಬಂಧನ
ರೈಸ್ ಪುಲ್ಲಿಂಗ್ ದಂದೆ ನಡೆಸುತ್ತಿದ್ದ ನಾಲ್ಕು ಪುರುಷರನ್ನು ಚೆನ್ನೈ ಪೊಲೀಸರು ಬಂಧಿಸಿದ್ದಾರೆ. ಇವರು ನಕಲಿ ಕನ್ನಡಕವನ್ನು (ಮುಂದೆ ನಿಂತಿರುವವರು ನಗ್ನವಾಗಿ ಕಾಣುವಂತ) ಮಾರಾಟ ಮಾಡಲು ಪ್ರಯತ್ನಿಸಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.

ಚೆನ್ನೈ: ರೈಸ್ ಪುಲ್ಲಿಂಗ್ ದಂದೆ ನಡೆಸುತ್ತಿದ್ದ ನಾಲ್ಕು ಪುರುಷರನ್ನು ಚೆನ್ನೈ ಪೊಲೀಸರು ಬಂಧಿಸಿದ್ದಾರೆ. ಇವರು ನಕಲಿ ಕನ್ನಡಕವನ್ನು (ಮುಂದೆ ನಿಂತಿರುವವರು ನಗ್ನವಾಗಿ ಕಾಣುವಂತ) ಮಾರಾಟ ಮಾಡಲು ಪ್ರಯತ್ನಿಸಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.
ಖಚಿತ ಮಾಹಿತಿ ಮೇರೆಗೆ ಸಿಎಮ್‌ಬಿಟಿ ಪೊಲೀಸರು ಕೋಯಂಬೇಡು ಬಸ್ ನಿಲ್ದಾಣದ ಬಳಿಯ ಲಾಡ್ಜ್‌ನಲ್ಲಿ ಶೋಧ ಕಾರ್ಯ ನಡೆಸಿದ್ದಾರೆ. ಸಹಾಯಕ ಕಮಿಷನರ್ ರಮೇಶ್ ಬಾಬು ನೇತೃತ್ವದ ತಂಡ ಶೋಧ ನಡೆಸಿದಾಗ ಕೊಠಡಿಯೊಂದರಲ್ಲಿ ನಾಲ್ವರು ಪಿಸ್ತೂಲ್, ಗುಂಡುಗಳು, ಕೆಲವು ಲೋಟಗಳು ಮತ್ತು ರೈಸ್ ಪುಲ್ಲಿಂಗ್ ಯಂತ್ರಗಳು ಪತ್ತೆಯಾಗಿವೆ.
ತನಿಖೆಯ ನಂತರ, ಬೆಂಗಳೂರಿನ ನಿವಾಸಿಗಳಾದ ಶಿವ ಅಲಿಯಾಸ್ ಸೂರ್ಯ (39), ಕುಗೈಪ್ (37), ಜಿತು (24) ಮತ್ತು ಇರ್ಷಾದ್ (21) ಎಂಬ ನಾಲ್ವರು ಜನರಿಗೆ ದೊಡ್ಡ ಮೊತ್ತದ ಹಣವನ್ನು ವಂಚಿಸುತ್ತಿದ್ದರು ಎಂದು ತಿಳಿದುಬಂದಿದೆ.
ಈ ನಾಲ್ವರು ರೈಸ್ ಪುಲ್ಲಿಂಗ್ ಮಾಡುವ ಪುರಾತನ ಕಾಲದ ಕೋಟ್ಯಂತರ ರೂಪಾಯಿ ಬೆಲೆ ಬಾಳು ವಸ್ತುವನ್ನು ಕೊಡುವುದಾಗಿ ನಂಬಿಸಿ ಸಾರ್ವಜನಿರಿಗೆ ಮಾರಾಟ ಮಾಡಿ ವಂಚಿಸಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ. ಸಿಡಿಲು ಬಡಿದ ಚೆಂಬಿನಿಂದ ರೈಸ್ ಪುಲ್ಲಿಂಗ್ ಮಾಡಲು ಸಾಧ್ಯ ಎಂದು ಜನರನ್ನು ನಂಬಿಸುತ್ತಿದ್ದರು.
ತಮ್ಮ ಎದುರಿಗಿರುವವರನ್ನು ಬೆತ್ತಲೆಯಾಗಿ ಕಾಣಲು ಸಹಾಯ ಮಾಡುವ ಕನ್ನಡಕವನ್ನು ಮಾರಾಟ ಮಾಡುವ ನೆಪದಲ್ಲಿ ಸಾರ್ವಜನಿಕರಿಗೆ ಆಮಿಷವೊಡ್ಡುತ್ತಿದ್ದಾರೆ ಎಂದು ಪೊಲೀಸರು ಗ್ಯಾಂಗ್ ನಿರ್ದಿಷ್ಟವಾಗಿ ಆರೋಪಿಸಿದ್ದಾರೆ. ಅನೇಕ ಸಂತ್ರಸ್ತರು ಈ ಕನ್ನಡಕವನ್ನು ಪಡೆಯಲು ಲಾಡ್ಜ್‌ನಲ್ಲಿ ಮುಗಿಬಿದ್ದಾಗ ಗ್ಯಾಂಗ್ ನಕಲಿ ಪಿಸ್ತೂಲ್‌ನಿಂದ ಬೆದರಿಸಿ ಹಣವನ್ನು ದೋಚಿದ್ದಾರೆ ಎಂದು ಮೂಲಗಳು ತಿಳಿಸಿವೆ. ಸಿಎಮ್‌ಬಿಟಿ ಪೊಲೀಸರು ಪ್ರಕರಣದ ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


