20 ನೇ ಮಹಡಿಯಿಂದ ಬಿದ್ದು ಓಯೋ ಸ್ಥಾಪಕ ರಿತೇಶ್ ಅಗರ್ವಾಲ್ ತಂದೆ ಸಾವು!
ಓಯೋ ರೂಮ್ಸ್ ನ ಸ್ಥಾಪಕ ರಿತೇಶ್ ಅಗರ್ವಾಲ್ ತಂದೆ ರಮೇಶ್ ಅಗರ್ವಾಲ್ ಅವರ ತಂದೆ 20 ನೇ ಮಹಡಿಯಿಂದ ಬಿದ್ದು ಸಾವನ್ನಪ್ಪಿದ್ದಾರೆ.

ಗುರುಗ್ರಾಮ: ಓಯೋ ರೂಮ್ಸ್ ನ ಸ್ಥಾಪಕ ರಿತೇಶ್ ಅಗರ್ವಾಲ್ ತಂದೆ ರಮೇಶ್ ಅಗರ್ವಾಲ್ ಅವರ ತಂದೆ 20 ನೇ ಮಹಡಿಯಿಂದ ಬಿದ್ದು ಸಾವನ್ನಪ್ಪಿದ್ದಾರೆ.
ಗುರುಗ್ರಾಮದ ಹೈರೈಸ್ ಬಿಲ್ಡಿಂಗ್ ನಲ್ಲಿ ಈ ಘಟನೆ ನಡೆದಿದ್ದು, ರಿತೇಶ್ ಅಗರ್ವಾಲ್ ವಿವಾಹವಾದ ಕೆಲವೇ ದಿನಗಳ ಅಂತರದಲ್ಲಿ ಈ ದುರ್ಘಟನೆ ನಡೆದಿದೆ. ದುಃಖದ ಸಂದರ್ಭದಲ್ಲಿ ತಮ್ಮನ್ನು ತಮ್ಮಪಾಡಿಗೆ ಇರಲು ಬಿಡುವಂತೆ ಅಗರ್ವಾಲ್ ಮನವಿ ಮಾಡಿದ್ದಾರೆ.
ನನ್ನ ದಾರಿ ದೀಪ, ಶಕ್ತಿಯಾಗಿದ್ದ ನನ್ನ ತಂದೆ ಶ್ರೀ ರಮೇಶ್ ಅಗರ್ವಾಲ್ ಮಾ.10 ರಂದು ಮೃತಪಟ್ಟಿದ್ದಾರೆ. ಅವರು ತುಂಬು ಜೀವನ ನಡೆಸಿದ ವ್ಯಕ್ತಿಯಾಗಿದ್ದು, ನನ್ನನ್ನೂ ಸೇರಿದಂತೆ ಹಲವರಿಗೆ ಪ್ರೇರಕ ಶಕ್ತಿಯಾಗಿದ್ದರು. ಅವರ ನಿಧನ ನಮ್ಮ ಕುಟುಂಬಕ್ಕೆ ಅಗಾಧ ನಷ್ಟ ಉಂಟುಮಾಡಿದೆ. ನನ್ನ ಮಾತುಗಳು ನಮ್ಮ ಹೃದಯದಲ್ಲಿ ಆಳವಾಗಿ ಅನುರಣಿಸುತ್ತವೆ. ಈ ದುಃಖದ ಸಮಯದಲ್ಲಿ ನಮ್ಮ ಖಾಸಗಿತನವನ್ನು ಗೌರವಿಸಲು ನಾವು ಪ್ರತಿಯೊಬ್ಬರನ್ನು ವಿನಂತಿಸುತ್ತೇವೆ" ಎಂದು ರಿತೇಶ್ ಅಗರ್ವಾಲ್ ಹೇಳಿದ್ದಾರೆ.
ಗುರುಗ್ರಾಮ ಈಸ್ಟ್ ನ ಡಿಸಿಪಿ ಈ ಬಗ್ಗೆ ಮಾತನಾಡಿದ್ದು, ಘಟನೆಯ ಬಗ್ಗೆ ಮಧ್ಯಾಹ್ನ 1 ಗಂಟೆಗೆ ಮಾಹಿತಿ ತಲುಪಿತು. ರಮೇಶ್ ಅಗರ್ವಾಲ್ ಅವರು ಡಿಎಫ್ಎಲ್ ದಿ ಕ್ರೆಸ್ಟ್ ನ 20 ನೇ ಮಹಡಿಯಲ್ಲಿರುವ ತಮ್ಮ ಅಪಾರ್ಟ್ಮೆಂಟ್ ನ ಬಾಲ್ಕನಿಯಿಂದ ಬಿದ್ದು ಸಾವನ್ನಪ್ಪಿದ್ದಾರೆ. ಘಟನೆ ನಡೆದಾಗ ಅವರ ಪುತ್ರ ರಿತೇಶ್ ಹಾಗೂ ರಿತೇಶ್ ಪತ್ನಿ ಇದ್ದರು. ಆತ್ಮಹತ್ಯೆ ಚೀಟಿ ಸಿಕ್ಕಿಲ್ಲ. ಸಾವು ಸಂಭವಿಸಿರುವ ಸಂದರ್ಭದ ಬಗ್ಗೆ ಈ ವರೆಗೂ ಕುಟುಂಬದವರಿಂದ ದೂರು ಬಂದಿಲ್ಲ ಎಂದು ಹೇಳಿದ್ದಾರೆ. ಶವಪರೀಕ್ಷೆ ನಡೆಸಲಾಗಿದ್ದು, ಪಾರ್ಥಿವಶರೀರವನ್ನು ಕುಟುಂಬ ಸದಸ್ಯರಿಗೆ ಹಸ್ತಾಂತರಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


