ಯೂಟ್ಯೂಬ್ ನೋಡಿ ಹೆರಿಗೆ; ಶಿಶುವನ್ನು ಕೊಂದ ಹದಿಹರೆಯದ ಬಾಲಕಿ!
ಲೈಂಗಿಕ ಶೋಷಣೆಗೆ ಒಳಗಾದ 15 ವರ್ಷದ ಹದಿಹರೆಯದ ಬಾಲಕಿಯೊಬ್ಬಳು, ಯುಟ್ಯೂಬ್ ವಿಡಿಯೋ ನೋಡಿ ಮನೆಯಲ್ಲಿಯೇ ಹೆಣ್ಣು ಮಗುವೊಂದಕ್ಕೆ ಜನ್ಮ ನೀಡಿದ್ದು, ಬಳಿಕ ಶಿಶುವನ್ನು ಹತ್ಯೆ ಮಾಡಿರುವ ಘಟನೆ ಮಹಾರಾಷ್ಟ್ರದ ನಾಗಪುರದಲ್ಲಿ ನಡೆದಿದೆ.

ನಾಗಪುರ: ಲೈಂಗಿಕ ಶೋಷಣೆಗೆ ಒಳಗಾದ 15 ವರ್ಷದ ಹದಿಹರೆಯದ ಬಾಲಕಿಯೊಬ್ಬಳು, ಯುಟ್ಯೂಬ್ ವಿಡಿಯೋ ನೋಡಿ ಮನೆಯಲ್ಲಿಯೇ ಹೆಣ್ಣು ಮಗುವೊಂದಕ್ಕೆ ಜನ್ಮ ನೀಡಿದ್ದು, ಬಳಿಕ ಶಿಶುವನ್ನು ಹತ್ಯೆ ಮಾಡಿರುವ ಘಟನೆ ಮಹಾರಾಷ್ಟ್ರದ ನಾಗಪುರದಲ್ಲಿ ನಡೆದಿದೆ. ಸೋಶಿಯಲ್ ಮಿಡಿಯಾದಲ್ಲಿ ಪರಿಚಿತವಾದ ವ್ಯಕ್ತಿಯೊಬ್ಬನಿಂದ ಹದಿಹರೆಯದ ಯುವತಿ ಲೈಂಗಿಕ ಶೋಷಣೆಗೆ ಒಳಗಾಗಿದ್ದಳು ಎಂದು ಪೊಲೀಸರು ತಿಳಿಸಿದ್ದಾರೆ.
ಕೆಲವು ಆರೋಗ್ಯ ಸಮಸ್ಯೆಯಿರುವುದಾಗಿ ತನ್ನ ತಾಯಿಯೊಂದಿಗೆ ಹೇಳಿದ್ದ ಆ ಬಾಲಕಿ, ಬೇಬಿ ಬಂಪ್ ವಿಚಾರವನ್ನು ಮರೆ ಮಾಚಿದ್ದಳು. ಇದೇ ರೀತಿ ರಹಸ್ಯ ಕಾಪಾಡಿದ್ದ ಅಂಬಾಜಾರಿ ಏರಿಯಾದ ಯುವತಿಗೆ ಮನೆಯಲ್ಲಿಯೇ ಡೆಲಿವರಿ ಹೇಗೆ ಎಂಬ ಐಡಿಯಾ ಹೊಳೆದಿದ್ದು, ಯೂ ಟ್ಯೂಬ್ ವಿಡಿಯೋ ವೀಕ್ಷಿಸಿ, ಮಾರ್ಚ್ 2 ರಂದು, ಮನೆಯಲ್ಲಿಯೇ ಆಕೆ ಹೆಣ್ಣು ಮಗುವೊಂದಕ್ಕೆ ಜನ್ಮ ನೀಡಿದ್ದಾಳೆ.
ಕೂಡಲೇ ಆ ಮಗುವನ್ನು ಕತ್ತು ಹಿಸುಕಿ ಕೊಂದಿದ್ದು, ಮನೆಯಲ್ಲಿಯೇ ಪೆಟ್ಟಿಗೆಯೊಂದರಲ್ಲಿ ಮಗುವಿನ ಶವ ಹಾಕಿದ್ದಳು ಎಂದು ಅಧಿಕಾರಿಗಳು ಹೇಳಿದ್ದಾರೆ. ತಾಯಿ ಮನೆಗೆ ಬಂದು ತನ್ನ ಪುತ್ರಿಯ ಆರೋಗ್ಯ ಪರಿಸ್ಥಿತಿ ಬಗ್ಗೆ ವಿಚಾರಿಸಿದ್ದಾಗ ಎಲ್ಲಾ ವಿಷಯ ತಿಳಿದು ಆಸ್ಪತ್ರೆಗೆ ಕರೆದೊಯ್ಯಲಾಗಿದೆ.
ಶಿಶುವಿನ ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿತ್ತು ಎಂದು ಅವರು ತಿಳಿಸಿದ್ದಾರೆ. ಈ ಸಂಬಂಧ ಬಾಲಕಿ ಐಪಿಸಿ ಸೆಕ್ಷನ್ ಹಾಗೂ ಲೈಂಗಿಕ ಅಪರಾಧಗಳಿಂದ ಮಕ್ಕಳ ತಡೆ ಕಾಯ್ದೆಯಡಿ ಕೇಸ್ ದಾಖಲಾಗಿದೆ. ಮರಣೋತ್ತರ ಪರೀಕ್ಷೆ ವರದಿ ಬಳಿಕ ಕೊಲೆ ಕೇಸ್ ದಾಖಲಿಸಲಾಗುವುದು ಎಂದು ಅಧಿಕಾರಿ ಮಾಹಿತಿ ನೀಡಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


