ನನ್ನ ಪರಿಕಲ್ಪನೆಯನ್ನು ಟ್ವಿಟರ್ ಕದ್ದಿದೆ: ಪತ್ರಕರ್ತನ ಗಂಭೀರ ಆರೋಪ
ಟ್ವಿಟರ್ ಹಾಗೂ ಅದರ ಮುಖ್ಯಸ್ಥ ಎಲಾನ್ ಮಸ್ಕ್ ವಿರುದ್ಧ ಮುಂಬೈ ಮೂಲದ ಪತ್ರಕರ್ತರೊಬ್ಬರು ತಮ್ಮ ಪರಿಕಲ್ಪನೆಯನ್ನು ಕದ್ದಿರುವ ಬಗ್ಗೆ ಗಂಭೀರ ಆರೋಪ ಮಾಡಿದ್ದಾರೆ.

ಮುಂಬೈ:ಟ್ವಿಟರ್ ಹಾಗೂ ಅದರ ಮುಖ್ಯಸ್ಥ ಎಲಾನ್ ಮಸ್ಕ್ ವಿರುದ್ಧ ಮುಂಬೈ ಮೂಲದ ಪತ್ರಕರ್ತರೊಬ್ಬರು ತಮ್ಮ ಪರಿಕಲ್ಪನೆಯನ್ನು ಕದ್ದಿರುವ ಬಗ್ಗೆ ಗಂಭೀರ ಆರೋಪ ಮಾಡಿದ್ದಾರೆ.
ಆಡಳಿತದ ಮುಖ್ಯಸ್ಥರು ಸೇರಿದಂತೆ ಪ್ರಮುಖ ವ್ಯಕ್ತಿಗಳಿಗೆ ಹೊಸ ಲೇಬಲ್ ಅಥವಾ ಹೊಸ ಟಿಕ್ ನೀಡುವುದು ತಮ್ಮ ಪರಿಕಲ್ಪನೆಯಾಗಿತ್ತು ಎಂದು ಮ್ಯಾಜಿಸ್ಟ್ರೇಟ್ ಕೋರ್ಟ್ ಗೆ ನೀಡಿರುವ ದೂರಿನಲ್ಲಿ ಪತ್ರಕರ್ತ ರೂಪೇಶ್ ಸಿಂಗ್ ಆರೋಪಿಸಿದ್ದು, ಭಾರತೀಯ ದಂಡ ಸಂಹಿತೆ ವಿಭಾಗ 420 (ವಂಚನೆ), 406 (ಕ್ರಿಮಿನಲ್ ನಂಬಿಕೆಯ ಉಲ್ಲಂಘನೆ), 120B (ಅಪರಾಧದ ಪಿತೂರಿ) ಮತ್ತು ಹಕ್ಕುಸ್ವಾಮ್ಯ ಕಾಯಿದೆ ಅಡಿಯಲ್ಲಿ ಪ್ರಕರಣ ದಾಖಲಿಸಿದ್ದಾರೆ.
ದೃಢಪಡಿಸಿದ ಸಾಮಾನ್ಯವಾದ ಖಾತೆಗಳಿಗೆ ಟ್ವಿಟರ್ ಬ್ಲೂ ಟಿಕ್ ನ್ನು ನೀಡುತ್ತಿದ್ದು, ಪ್ರಧಾನಿ ಮೋದಿ, ಅಮೇರಿಕ ಅಧ್ಯಕ್ಷರಾದ ಜೋ ಬೈಡನ್ ಅವರಂತಹ ಪ್ರಮುಖ ವ್ಯಕ್ತಿಗಳಿಗೆ ಕಂದು ಬಣ್ಣದ ಟಿಕ್ ನೀಡಲು ಆರಂಭಿಸಿದೆ.
ಮಾ.01 ರಂದು ಪತ್ರಕರ್ತ ರೂಪೇಶ್ ಸಿಂಗ್ ದೂರು ನೀಡಿದ್ದು, ಎಲಾನ್ ಮಸ್ಕ್ ಜೊತೆಗೆ ಟ್ವಿಟರ್ ನ ಮಾಜಿ ಭಾರತದ ಮುಖ್ಯಸ್ಥ ಮನೀಷ್ ಮಹೇಶ್ವರಿ ವಿರುದ್ಧವೂ ದೂರು ದಾಖಲಿಸಿದ್ದಾರೆ. ಪತ್ರಕರ್ತ, ಲೇಖಕ ಹಾಗೂ ನಿರ್ದೇಶಕರೂ ಆಗಿರುವ ಸಿಂಗ್, ಟ್ವಿಟರ್ ನಲ್ಲಿ ಸಕ್ರಿಯವಾಗಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


