ಶಿವಸೇನೆಯ 40 ಶಾಸಕರನ್ನು ಅನರ್ಹಗೊಳಿಸುವ ಮೂಲಕ ಪ್ರಧಾನಿ ಯುಸಿಸಿ ಯನ್ನು ಗೌರವಿಸಲಿ: ಉದ್ಧವ್ ಠಾಕ್ರೆ ಬಣ
ಶಿವಸೇನೆಯ ಉದ್ಧವ್ ಠಾಕ್ರೆ ಬಣ ಏಕರೂಪ ನಾಗರಿಕ ಸಂಹಿತೆ ಜಾರಿಯ ಕುರಿತು ಮಾತನಾಡಿದ್ದು, ಷರಿಯಾಗೆ ವಿರುದ್ಧವಾಗಿರುವುದೇ ಯುಸಿಸಿಯ ಆಧಾರವಾಗಿರಬಾರದು ಎಂದು ಹೇಳಿದೆ.

ಮುಂಬೈ: ಶಿವಸೇನೆಯ ಉದ್ಧವ್ ಠಾಕ್ರೆ ಬಣ ಏಕರೂಪ ನಾಗರಿಕ ಸಂಹಿತೆ ಜಾರಿಯ ಕುರಿತು ಮಾತನಾಡಿದ್ದು, ಷರಿಯಾಗೆ ವಿರುದ್ಧವಾಗಿರುವುದೇ ಯುಸಿಸಿಯ ಆಧಾರವಾಗಿರಬಾರದು, ಯುಸಿಸಿ ಎಂದರೆ ಎಲ್ಲರಿಗೂ ಸಮಾನವಾದ ಕಾನೂನು ಮತ್ತು ನ್ಯಾಯ ಆಗಿರಬೇಕು ಎಂದು ಅಭಿಪ್ರಾಯಪಟ್ಟಿದೆ.
ಷರಿಯಾ ಇಸ್ಲಾಮಿಕ್ ಧಾರ್ಮಿಕ ಕಾನೂನಾಗಿದ್ದು, ಕುರಾನ್ ಹಾಗೂ ಮೊಹಮ್ಮದ್ ಅವರ ಸಾಂಪ್ರದಾಯಿಕ ಬೋಧನೆಗಳನ್ನು ಆಧರಿಸಿದೆ.
ಶಿವಸೇನೆ ಉದ್ಧವ್ ಬಣದ ಮುಖವಾಣಿ ಸಾಮ್ನಾದಲ್ಲಿ ಪ್ರಕಟವಾಗಿರುವ ಸಂಪಾದಕೀಯದಲ್ಲಿ, ಪ್ರಧಾನಿ ನರೇಂದ್ರ ಮೋದಿ, ಶಿವಸೇನೆಯ 40 ಶಾಸಕರನ್ನು ಅನರ್ಹಗೊಳಿಸುವ ಮೂಲಕ ಏಕರೂಪ ನಾಗರಿಕ ಸಂಹಿತೆಯನ್ನು ಗೌರವಿಸಲಿ ಎಂದು ಹೇಳಿದೆ.
ಭಿವಾಂಡಿ ನಿಜಾಮ್ ಪುರ ಸಿಟಿ ಮುನ್ಸಿಪಲ್ ಕಾರ್ಪೊರೇಷನ್ (ಬಿಎನ್ ಸಿಎಂಸಿ) ಯ 18 ಮಾಜಿ ಕಾರ್ಪೊರೇಟರ್ ಗಳನ್ನು, 2019 ರ ಮೇಯರ್ ಚುನಾವಣೆಯಲ್ಲಿ ಪಕ್ಷದ ವಿರುದ್ಧ ಮತ ಚಲಾಯಿಸಿದ್ದಕ್ಕಾಗಿ ಅನರ್ಹಗೊಳಿಸಿ, 6 ವರ್ಷಗಳ ಕಾಲ ಚುನಾವಣೆಗೆ ಸ್ಪರ್ಧಿಸದಂತೆ ಮಾಡಲಾಗಿದೆ.
ಒಂದು ವೇಳೆ ಆಡಳಿತಾರೂಢ ಪಕ್ಷದ ಭ್ರಷ್ಟ ಸಚಿವರು, ಉದ್ಯಮಿಗಳು, ಜನರನ್ನು ರಕ್ಷಿಸಿ, ವಿಪಕ್ಷಗಳ ನಾಯಕರನ್ನು ಭ್ರಷ್ಟಾಚಾರ ವಿರೋಧಿ ಕಾರಣ ಇಟ್ಟುಕೊಂಡು ಹಣಿಯುವುದಾದರೆ ಅದೆಂತಹ ಕಾನೂನು? ಎಂದು ಉದ್ಧವ್ ಬಣ ಸಾಮ್ನಾದಲ್ಲಿ ಪ್ರಶ್ನಿಸಿದೆ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


