ದೇಶ

ಮನೆ ಕಟ್ಟೋಕೆ, ಮಗನ ಮದುವೆಗೆ ಸಂಸದರ ನಿಧಿ ಬಳಕೆ: ಬಿಜೆಪಿ ಸಂಸದನ ಹೇಳಿಕೆಯ ವಿಡಿಯೋ ವೈರಲ್

ಸಂಸದರ ಸ್ಥಳೀಯ ಪ್ರದೇಶಾಭಿವೃದ್ಧಿ ನಿಧಿಯನ್ನು ಮನೆ ಕಟ್ಟೋಕೆ, ಮಗನ ಮದುವೆಗೆ ಬಳಸಿಕೊಂಡೆ ಎಂಬ ಬಿಜೆಪಿ ಸಂಸದರೊಬ್ಬರ ವಿಡಿಯೋವೊಂದು ವೈರಲ್ ಆಗಿದೆ. ಸಂಸದ ಸೋಯಂ ಬಾಪು ರಾವ್ ಅವರದ್ದು ಎನ್ನಲಾದ ವಿಡಿಯೋ ವಿವಾದಕ್ಕೆ ಎಡೆಮಾಡಿಕೊಟ್ಟಿದೆ.

ಮನೆ ಕಟ್ಟೋಕೆ, ಮಗನ ಮದುವೆಗೆ ಸಂಸದರ ನಿಧಿ ಬಳಕೆ: ಬಿಜೆಪಿ ಸಂಸದನ ಹೇಳಿಕೆಯ ವಿಡಿಯೋ ವೈರಲ್
ಬಿಜೆಪಿ ಸಂಸದ ಸೋಯಂ ಬಾಪುರಾವ್
Published On :

ಹೈದ್ರಾಬಾದ್: ಸಂಸದರ ಸ್ಥಳೀಯ ಪ್ರದೇಶಾಭಿವೃದ್ಧಿ ನಿಧಿಯನ್ನು ಮನೆ ಕಟ್ಟೋಕೆ, ಮಗನ ಮದುವೆಗೆ ಬಳಸಿಕೊಂಡೆ ಎಂಬ ಬಿಜೆಪಿ ಸಂಸದರೊಬ್ಬರ ವಿಡಿಯೋವೊಂದು ವೈರಲ್ ಆಗಿದೆ. ಸಂಸದ ಸೋಯಂ ಬಾಪು ರಾವ್ ಅವರದ್ದು ಎನ್ನಲಾದ ವಿಡಿಯೋ ವಿವಾದಕ್ಕೆ ಎಡೆಮಾಡಿಕೊಟ್ಟಿದೆ.

ತೆಲಂಗಾಣದ ಆದಿಲಾಬಾದ್ ನಲ್ಲಿ ಬಿಜೆಪಿ ಸ್ಥಳೀಯ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿರುವ ಬಾಪುರಾವ್, ಸಂಸದರ ಸ್ಥಳೀಯ ಪ್ರದೇಶಾಭಿವೃದ್ಧಿ ಯೋಜನಾ ನಿಧಿಯಲ್ಲಿ ಎರಡನೇ ಬಾರಿಗೆ ನನಗೆ 2.5 ಕೋಟಿ ರೂ. ಬಂದಿತ್ತು. ಅದರಲ್ಲೊಂದಿಷ್ಟು ಹಣವನ್ನು ಗ್ರಾಮ ಪಂಚಾಯಿತಿಗಳಿಗೆ ನೀಡಿ ಉಳಿದಿದ್ದನ್ನು ಮನೆ ಕಟೋಕೆ ಮತ್ತು ಮಗನ ಮದುವೆ ಮಾಡುವುದಕ್ಕೆ ಬಳಸಿಕೊಂಡೆ ಎಂದು ಹೇಳಿರುವುದು ವಿಡಿಯೋದಲ್ಲಿದೆ.

'ಕ್ಷೇತ್ರದಲ್ಲಿ ನನಗೆ ಮನೆ ಇಲ್ಲದ ಕಾರಣ ಸ್ವಲ್ಪ ಹಣವನ್ನು ಮನೆ ನಿರ್ಮಾಣಕ್ಕೆ ಬಳಸಿದ್ದೇನೆ. ಬೇರೆ ಯಾವ ನಾಯಕರೂ ಇದನ್ನು ಒಪ್ಪಿಕೊಳ್ಳುವುದಿಲ್ಲ, ಆದರೆ ನಾನು ಒಪ್ಪಿಕೊಳ್ಳುತ್ತೇನೆ. ನನ್ನ ಮಗನ ಮದುವೆಗೂ ಆ ಹಣವನ್ನು ಬಳಸಿದ್ದೇನೆ" ಎಂದು ಅವರು ಹೇಳಿದ್ದಾರೆ. ಈ ಹಿಂದೆ ಬಾಪುರಾವ್ ಬುಡಕಟ್ಟು ಸಮುದಾಯದ ಹೆಣ್ಣುಮಕ್ಕಳನ್ನು ಹಿಂಬಾಲಿಸುವ ಮುಸ್ಲಿಂ ಯುವಕರ ತಲೆ ಕತ್ತರಿಸಬೇಕು ಎಂದು ಹೇಳಿ ಸುದ್ದಿಯಾಗಿದ್ದರು. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.