ಟಿಎಂಸಿಯಲ್ಲಿದ್ದ ಪತ್ನಿಗೆ ಚುನಾವಣೆಯಲ್ಲಿ ಸೋಲು; ಬಿಜೆಪಿಯಲ್ಲಿದ್ದ ತಂದೆಯನ್ನೆ ಹತ್ಯೆ ಮಾಡಿದ ಯುವಕ?!
ಇತ್ತೀಚಿನ ಪಂಚಾಯತ್ ಚುನಾವಣೆಯಲ್ಲಿ ಹಿನ್ನಡೆಯಾಗಿದ್ದಕ್ಕಾಗಿ ಬಿಜೆಪಿಯಲ್ಲಿದ್ದ ತನ್ನ ತಂದೆಯನ್ನೇ ಹತ್ಯೆ ಮಾಡಿದ್ದಾನೆ ಎಂಬ ಆರೋಪ ಕೇಳಿಬಂದಿದೆ.

ಕೋಲ್ಕತ್ತ: ಪಶ್ಚಿಮ ಬಂಗಾಳದಲ್ಲಿ ಕುಟುಂಬದಲ್ಲಿ ರಾಜಕೀಯ ವೈಷಮ್ಯ ತಲೆದೋರಿದ್ದು, ಯುವಕನೋರ್ವ, ಟಿಎಂಸಿಯಲ್ಲಿದ್ದ ತನ್ನ ಪತ್ನಿಗೆ, ಇತ್ತೀಚಿನ ಪಂಚಾಯತ್ ಚುನಾವಣೆಯಲ್ಲಿ ಹಿನ್ನಡೆಯಾಗಿದ್ದಕ್ಕಾಗಿ ಬಿಜೆಪಿಯಲ್ಲಿದ್ದ ತನ್ನ ತಂದೆಯನ್ನೇ ಹತ್ಯೆ ಮಾಡಿದ್ದಾನೆ ಎಂಬ ಆರೋಪ ಕೇಳಿಬಂದಿದೆ.
ಮಾಲ್ಡಾ ಗ್ರಾಮದಲ್ಲಿ ಈ ಘಟನೆ ನಡೆದಿದೆ. ಬಿಜೆಪಿಯಲ್ಲಿ ಯುವಕನ ತಂದೆ ಸಕ್ರಿಯರಾಗಿದ್ದರು. ಆದರೆ ಟಿಎಂಸಿಯಿಂದ ಚುನಾವಣೆಗೆ ಸ್ಪರ್ಧಿಸಿದ್ದ ಯುವಕನ ಪತ್ನಿ ಬಿಜೆಪಿಯ ಅಭ್ಯರ್ಥಿ ವಿರುದ್ಧ ಪರಾಭವಗೊಂಡಿದ್ದರು.
52 ವರ್ಷದ ಬುರಾನ್ ಮುರ್ಮು (ಬಿಜೆಪಿ ಕಾರ್ಯಕರ್ತ) ತನ್ನ ಪುತ್ರ ಬಿಪ್ಲಬ್ ಮುರ್ಮು ಹಾಗೂ ಸೊಸೆ ಶರ್ಮಿಳಾ ಮುರ್ಮು ಅವರೊಂದಿಗೆ ಒಂದೇ ಮನೆಯಲ್ಲಿ ವಾಸಿಸುತ್ತಿದ್ದರು. ಬುರಾನ್ ಮುರ್ಮು ಅವರ ಮೃತ ದೇಹ- ಹಲವು ಗಾಯಗಳೊಂದಿಗೆ ಅವರ ಕೊಠಡಿಯಲ್ಲಿ ಸೀಲಿಂಗ್ ಗೆ ನೇಣುಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿತ್ತು. ಈ ಘಟನೆ ಗ್ರಾಮದಲ್ಲಿ ಕೋಲಾಹಲ ಸೃಷ್ಟಿಸಿದ್ದು, ಟಿಎಂಸಿ ನಾಯಕರೇ ಈ ಸಾವಿಗೆ ಕಾರಣ ಎಂಬ ಆರೋಪ ಕೇಳಿಬಂದಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


