ದೇಶ

ವಿವಾಹ ರದ್ದುಗೊಂಡ ಕಾರಣ, ಯುವತಿಯನ್ನು ಇರಿದು ಕೊಂದ ವ್ಯಕ್ತಿ! 

ನಿಶ್ಚಿತಾರ್ಥದ ಬಳಿಕ ವಿವಾಹ ರದ್ದುಗೊಂಡ ಕಾರಣ ಆಕ್ರೋಶಗೊಂಡ ವ್ಯಕ್ತಿಯೋರ್ವ ತನ್ನ ಪ್ರೇಯಸಿಯನ್ನು ಇರಿದು ಹತ್ಯೆ ಮಾಡಿರುವ ಘಟನೆ ಗುರುಗ್ರಾಮದಲ್ಲಿ ಜು.10 ರಂದು ನಡೆದಿದೆ.

ವಿವಾಹ ರದ್ದುಗೊಂಡ ಕಾರಣ, ಯುವತಿಯನ್ನು ಇರಿದು ಕೊಂದ ವ್ಯಕ್ತಿ! 
ವಿವಾಹ ರದ್ದುಗೊಂಡ ಕಾರಣ, ಯುವತಿಯನ್ನು ಇರಿದು ಕೊಂದ ವ್ಯಕ್ತಿ!
Published On :

ಗುರುಗ್ರಾಮ: ನಿಶ್ಚಿತಾರ್ಥದ ಬಳಿಕ ವಿವಾಹ ರದ್ದುಗೊಂಡ ಕಾರಣ ಆಕ್ರೋಶಗೊಂಡ ವ್ಯಕ್ತಿಯೋರ್ವ ತನ್ನ ಪ್ರೇಯಸಿಯನ್ನು ಇರಿದು ಹತ್ಯೆ ಮಾಡಿರುವ ಘಟನೆ ಗುರುಗ್ರಾಮದಲ್ಲಿ ಜು.10 ರಂದು ನಡೆದಿದೆ.
 
19 ವರ್ಷದ ಯುವತಿ ಸಾವಿಗೀಡಾಗಿದ್ದು, ದೃಶ್ಯಗಳು ಸಿಸಿಟಿವಿ ಕ್ಯಾಮರಾದಲ್ಲಿ ಸೆರೆಯಾಗಿವೆ. ಮತ್ತೋರ್ವ ಮಹಿಳೆ ಜೊತೆ ಆರೋಪಿ ವ್ಯಕ್ತಿ ಯುವತಿಯ ಬಳಿ ತೆರಳುತ್ತಿರುವ ದೃಶ್ಯಗಳು ಸಿಸಿಟಿವಿ ಕ್ಯಾಮರಾದಲ್ಲಿ ಸೆರೆಯಾಗಿದೆ. ಮಾತನಾಡುತ್ತಿದ್ದಾಗಲೇ, ವ್ಯಕ್ತಿ ತನ್ನ ಪ್ರೇಯಸಿಗೆ ಹಲವು ಬಾರಿ ಇರಿದಿದ್ದು ಆತನೊಂದಿಗೆ ಇದ್ದ ಮತ್ತೋರ್ವ ಮಹಿಳೆ ಆಕೆಯನ್ನು ರಕ್ಷಿಸಲು ಯತ್ನಿಸುತ್ತಾಳೆ. ಇರಿತದಿಂದ ತೀವ್ರವಾಗಿ ಘಾಸಿಗೊಂಡ ಯುವತಿ, ಕುಸುದು ಬಿದ್ದಿದ್ದಳು. ಘಟನಾ ಸ್ಥಳದಲ್ಲಿದ್ದ ಹಲವು ಮಂದಿ ಘಟನೆಯನ್ನು ವೀಡಿಯೋ ಮಾಡುವುದರಲ್ಲಿ ವ್ಯಸ್ತರಾಗಿದ್ದರು. ಆತ ಮಾರಕಾಸ್ತ್ರಗಳಿಂದ ದಾಳಿ ಮಾಡುತ್ತಿದ್ದಂತೆಯೇ ಜನರು ಪರಾರಿಯಾದರು. ಆರೋಪಿಯನ್ನು ಈಗ ಬಂಧಿಸಲಾಗಿದೆ.

ಪೊಲೀಸರ ಪ್ರಕಾರ, ಪುರುಷ ಮತ್ತು ಮಹಿಳೆ ಇಬ್ಬರೂ ಉತ್ತರ ಪ್ರದೇಶದ ಬದೌನ್ ಮೂಲದವರು. ಮಹಿಳೆ ಮನೆಗೆ ಸಹಾಯಕಿಯಾಗಿ ಕೆಲಸ ಮಾಡುತ್ತಿದ್ದರು. ನಾಲ್ಕು ತಿಂಗಳ ಹಿಂದೆ ಇಬ್ಬರ ನಿಶ್ಚಿತಾರ್ಥ ನಡೆದಿತ್ತು, ಆದರೆ ಕೆಲವು ದಿನಗಳ ಹಿಂದೆ ನಿಶ್ಚಿತಾರ್ಥವನ್ನು ರದ್ದುಗೊಳಿಸಲಾಯಿತು. ಇದರಿಂದ ವ್ಯಕ್ತಿ ಅಸಮಾಧಾನಗೊಂಡಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.