ಮಹಾರಾಷ್ಟ್ರದ ಸಮೃದ್ಧಿ ಎಕ್ಸ್ ಪ್ರೆಸ್ ವೇ: ಆರು ತಿಂಗಳಲ್ಲಿ ಅಪಘಾತಗಳಿಂದ 88 ಜನರ ಸಾವು!
ಶನಿವಾರ ಡಿವೈಡರ್ ಗೆ ಡಿಕ್ಕಿ ಹೊಡೆದ ನಂತರ ಖಾಸಗಿ ಬಸ್ ಗೆ ಬೆಂಕಿ ಹೊತ್ತಿಕೊಂಡು ಮೃತಪಟ್ಟ 25 ಜನರು ಸೇರಿದಂತೆ ಕಳೆದ ಆರು ತಿಂಗಳಲ್ಲಿ ಮಹಾರಾಷ್ಟ್ರದ ಸಮೃದ್ಧಿ ಎಕ್ಸ್ ಪ್ರೆಸ್ ವೇ ನಲ್ಲಿ 88 ಜನರು ಸಾವನ್ನಪ್ಪಿದ್ದಾರೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಮುಂಬೈ: ಶನಿವಾರ ಡಿವೈಡರ್ ಗೆ ಡಿಕ್ಕಿ ಹೊಡೆದ ನಂತರ ಖಾಸಗಿ ಬಸ್ ಗೆ ಬೆಂಕಿ ಹೊತ್ತಿಕೊಂಡು ಮೃತಪಟ್ಟ 25 ಜನರು ಸೇರಿದಂತೆ ಕಳೆದ ಆರು ತಿಂಗಳಲ್ಲಿ ಮಹಾರಾಷ್ಟ್ರದ ಸಮೃದ್ಧಿ ಎಕ್ಸ್ ಪ್ರೆಸ್ ವೇ ನಲ್ಲಿ 88 ಜನರು ಸಾವನ್ನಪ್ಪಿದ್ದಾರೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಆರು ಪಥದ ಎಕ್ಸ್ ಪ್ರೆಸ್ ವೇನಲ್ಲಿ ಅಪಘಾತಗಳಿಗೆ ಹೈವೇ ಹಿಪ್ನಾಸಿಸ್ ಕೂಡಾ ಒಂದು ಕಾರಣ ಎಂದು ರಾಜ್ಯ ಹೆದ್ದಾರಿ ಪೊಲೀಸ್ ಅಧಿಕಾರಿ ಹೇಳಿದ್ದಾರೆ.
ಹೈವೇ ಹಿಪ್ನಾಸಿಸ್ ಎಂದರೆ ಚಾಲಕನು ಯಾವುದೇ ಟ್ರಾಫಿಕ್ ಅಥವಾ ಇತರೆ ಗಮನಹರಿಸಬೇಕಾದ ಅಂಶಗಳು ಇಲ್ಲದಾಗ ಹೆದ್ದಾರಿಯನ್ನೇ ನೋಡುತ್ತಾ ಸಂಮೋಹನ ಸ್ಥಿತಿಗೆ ತಲುಪುವುದಾಗಿದೆ. ಆ ಅವಧಿಯಲ್ಲಿ ಏನಾಯಿತು ಎಂಬುದು ಚಾಲಕನ ನೆನಪಿನಲ್ಲಿ ಇರುವುದಿಲ್ಲ.
ಕಳೆದ ವರ್ಷ ಡಿಸೆಂಬರ್ ನಿಂದ ನಾಗ್ಪುರ- ಮುಂಬೈ ಎಕ್ಸ್ ಪ್ರೆಸ್ ವೇ ಓಪನ್ ಆದ ಬಳಿಕ ಒಟ್ಟು 39 ಮಾರಣಾಂತಿಕ ಅಪಘಾತಗಳು ಸಂಭವಿಸಿವೆ. ಅಲ್ಲದೇ ಒಟ್ಟು 616 ಸಣ್ಣ ಮತ್ತು ದೊಡ್ಡ ಅಪಘಾತಗಳು ಸಂಭವಿಸಿದ್ದು, 656 ಜನರು ಗಂಭೀರ ಮತ್ತು ಸಣ್ಣ ಗಾಯಗಳಿಂದ ಬಳಲುತ್ತಿದ್ದಾರೆ ಎಂದು ಅವರು ತಿಳಿಸಿದ್ದಾರೆ.
ಇದನ್ನೂ ಓದಿ: ಮಹಾರಾಷ್ಟ್ರ ಬಸ್ ಅಗ್ನಿ ದುರಂತ, 25 ಮಂದಿ ಸಜೀವ ದಹನ: ನಿದ್ರೆಗೆ ಜಾರಿದ್ದ ಚಾಲಕ?, 'ಟೈರ್ ಸ್ಫೋಟದಿಂದ ಅಪಘಾತವಾಗಿಲ್ಲ'.. ಆರ್ ಟಿಒ ಹೇಳಿದ್ದೇನು?
ಬಹುತೇಕ ಅಪಘಾತಗಳುಅತಿಯಾದ ವೇಗ, ಚಾಲಕರು ನಿದ್ರಿಸುವುದು ಮತ್ತು ಟೈರ್ ಸ್ಫೋಟದಂತಹ ಕಾರಣಗಳಿಂದ ಉಂಟಾಗಿದೆ. ರಸ್ತೆ ಸಂಮೋಹನದ ಸಮಸ್ಯೆಯನ್ನು ನಿಭಾಯಿಸಲು ಹೆದ್ದಾರಿ ಪೊಲೀಸರು ಪ್ರಯತ್ನಿಸುತ್ತಿದ್ದಾರೆ. 2022 ರಲ್ಲಿ ಮಹಾರಾಷ್ಟ್ರದಾದ್ಯಂತ 15,224 ಜನರು ರಸ್ತೆ ಅಪಘಾತಗಳಲ್ಲಿ ಸಾವನ್ನಪ್ಪಿದ್ದಾರೆ ಎಂದು ಅವರು ಹೇಳಿದರು. 701-ಕಿಲೋಮೀಟರ್ ನಾಗ್ಪುರ-ಮುಂಬೈ ಸಮೃದ್ಧಿ ಮಹಾಮಾರ್ಗ್ ಸದ್ಯ ವಿದರ್ಭದಿಂದ ನಾಸಿಕ್‌ನ ಭರ್ವಿರ್‌ವರೆಗೆ 601ಕಿಮೀ ವ್ಯಾಪ್ತಿಯಲ್ಲಿ ಕಾರ್ಯನಿರ್ವಹಿಸುತ್ತಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


