ಹಸು ಉಳಿಸಲು ಸಿಂಹಿಣಿಯನ್ನು ಹೆದರಿಸಿ ಓಡಿಸಿದ ರೈತ, ವಿಡಿಯೋ ವೈರಲ್!
ಸಿಂಹಿಣಿಯು ರೈತನ ಹಸುವಿನ ಮೇಲೆ ದಾಳಿ ಮಾಡಿದ್ದು ಹಸುವನ್ನು ಉಳಿಸಿಕೊಳ್ಳಲು ರೈತ ಬಹಳ ಹತ್ತಿರ ಹೋಗಿ ಸಿಂಹಿಣಿಯನ್ನು ಹೆದರಿಸಿ ಓಡಿಸಿದ್ದು ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.

ಅಹಮದಾಬಾದ್: ಸಿಂಹಿಣಿಯು ರೈತನ ಹಸುವಿನ ಮೇಲೆ ದಾಳಿ ಮಾಡಿದ್ದು ಹಸುವನ್ನು ಉಳಿಸಿಕೊಳ್ಳಲು ರೈತ ಬಹಳ ಹತ್ತಿರ ಹೋಗಿ ಸಿಂಹಿಣಿಯನ್ನು ಹೆದರಿಸಿ ಓಡಿಸಿದ್ದು ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.
ಈ ವಿಡಿಯೋವನ್ನು ಗುಜರಾತ್‌ನ ಜುನಾಗಢ್‌ನ ಕೇಶೋಡ್‌ನ ಕಾರ್ಪೊರೇಟರ್ ವಿವೇಕ್ ಕೊಟಾಡಿಯಾ ಅವರು ಟ್ವಿಟರ್‌ನಲ್ಲಿ ಪೋಸ್ಟ್ ಮಾಡಿದ್ದಾರೆ. ಈ ಘಟನೆ ನಡೆದಿದ್ದು ಗಿರ್ ಸೋಮನಾಥ್ ಜಿಲ್ಲೆಯಲ್ಲಿ ಸಿಂಹಿಣಿಯು ಹಸುವಿನ ಮೇಲೆ ದಾಳಿ ಮಾಡಿತ್ತು. ರೈತ ತನ್ನ ಹಸುವಿನ ಬಳಿಗೆ ಹೋಗಿ ಸಿಂಹಿಣಿಯನ್ನು ಹೆದರಿಸಿ ಓಡಿಸಲು ಪ್ರಯತ್ನಿಸುತ್ತಾನೆ. ಈ ಕ್ಲಿಪ್ ಅನ್ನು ದಾರಿಹೋಕರೊಬ್ಬರು ರೆಕಾರ್ಡ್ ಮಾಡಿದ್ದಾರೆ.
ವೀಡಿಯೋ ಕ್ಲಿಪ್‌ನ ಆರಂಭದಲ್ಲಿ ಸಿಂಹಿಣಿ ಹಸುವಿನ ಕುತ್ತಿಗೆಗೆ ಬಾಯಿ ಹಾಕಿ ಹಿಡಿದುಕೊಂಡಿರುವುದು ಕಂಡುಬರುತ್ತದೆ. ಸಿಂಹಿಣಿಯ ಹಿಡಿತದಿಂದ ಹೊರಬರಲು ಹಸು ತನ್ನ ಕೈಲಾದಷ್ಟು ಪ್ರಯತ್ನಿಸುತ್ತಿರುವುದನ್ನು ಕಾಣಬಹುದು ಆದರೆ ಅದರ ಪ್ರಯತ್ನಗಳು ವಿಫಲವಾಗುತ್ತವೆ. ಹೋರಾಟದ ಸಮಯದಲ್ಲಿ, ಎರಡೂ ಪ್ರಾಣಿಗಳು ಸಹ ರಸ್ತೆಯ ಬದಿಗೆ ಹೋಗುತ್ತವೆ. ಇದೇ ವೇಳೆ ಹಸುವಿನ ಒಡೆಯನಾದ ರೈತ ನಿರ್ಭಯವಾಗಿ ಕೈ ಎತ್ತಿ ಸಿಂಹಿಣಿಯನ್ನು ಓಡಿಸಲು ಯತ್ನಿಸುತ್ತಿರುವುದು ಕಂಡು ಬರುತ್ತಿದೆ.
ರೈತ ಸಾಕಷ್ಟು ಪ್ರಯತ್ನ ಮಾಡಿದರೂ ಸಿಂಹಿಣಿಯು ಹಸುವಿನ ಕೊರಳನ್ನು ಬಿಡದಿದ್ದಾಗ, ರೈತನು ರಸ್ತೆಯ ಬದಿಯಲ್ಲಿ ಬಿದ್ದಿದ್ದ ದೊಡ್ಡ ಇಟ್ಟಿಗೆಯನ್ನು ಅದರ ಕಡೆಗೆ ವೇಗವಾಗಿ ಎಸೆಯುತ್ತಾನೆ. ಈ ಸಮಯದಲ್ಲಿ, ರೈತನು ಜೋರಾಗಿ ಕೂಗಿಕೊಂಡು ಸಿಂಹಿಣಿಯ ಬಳಿಕ ಬರುತ್ತಾನೆ. ಇದನ್ನು ಕಂಡ ಸಿಂಹಿಣಿ ಹಸುವಿನ ಕುತ್ತಿಗೆಯನ್ನು ಬಿಟ್ಟು ಓಡಿಹೋಗುತ್ತದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


