ತ್ರಿಪುರಾದಲ್ಲಿ ಆಪರೇಷನ್ ಲೋಟಸ್: ಮತ್ತೆ ಐಪಿಎಫ್ ಟಿ-ಬಿಜೆಪಿ ಮೈತ್ರಿ, ಟಿಐಪಿಆರ್ ಎ ಮೋತಾಗೆ ಚೆಕ್ ಮೇಟ್
ಬಿಜೆಪಿ ತ್ರಿಪುರಾದಲ್ಲಿ ಆಪರೇಷನ್ ಕಮಲಕ್ಕೆ ಮುಂದಾಗಿದ್ದು, ಐಪಿಎಫ್ ಟಿ ಜೊತೆ ಮತ್ತೆ ಮೈತ್ರಿ ಮಾಡಿಕೊಂಡಿದೆ. ಈ ಮೂಲಕ ಟಿಐಪಿಆರ್ ಎ ಮೋತಾ ಪಕ್ಷ ಐಪಿಎಫ್ ಟಿ ಜೊತೆ ಮೈತ್ರಿ ಮಾಡಿಕೊಳ್ಳುವುದನ್ನು ತಪ್ಪಿಸಿದೆ.

ಗುವಾಹಟಿ: ಬಿಜೆಪಿ ತ್ರಿಪುರಾದಲ್ಲಿ ಆಪರೇಷನ್ ಕಮಲಕ್ಕೆ ಮುಂದಾಗಿದ್ದು, ಐಪಿಎಫ್ ಟಿ ಜೊತೆ ಮತ್ತೆ ಮೈತ್ರಿ ಮಾಡಿಕೊಂಡಿದೆ. ಈ ಮೂಲಕ ಟಿಐಪಿಆರ್ ಎ ಮೋತಾ ಪಕ್ಷ ಐಪಿಎಫ್ ಟಿ ಜೊತೆ ಮೈತ್ರಿ ಮಾಡಿಕೊಳ್ಳುವುದನ್ನು ತಪ್ಪಿಸಿದೆ.
ಫೆ.16 ರಂದು ತ್ರಿಪುರಾ ವಿಧಾನಸಭೆಗೆ ಚುನಾವಣೆ ನಡೆಯಲಿದ್ದು, ಸ್ವರಾಜ್ಯ ಮ್ಯಾಗಜೀನ್ ನ ಮಾಹಿತಿಯ ಪ್ರಾಕರ, ಬಿಜೆಪಿ ಟಿಐಪಿಆರ್ ಪಕ್ಷವನ್ನು ಬದಿಗಿರಿಸಿ ನಾಟಕೀಯ ಬೆಳವಣಿಗೆಯಲ್ಲಿ ಇಂಡಿಜಿನಸ್ ಪೀಪಲ್ಸ್ ಫ್ರಂಟ್ ಆಫ್ ತ್ರಿಪುರಾ (ಐಪಿಎಫ್ ಟಿ) ಜೊತೆಗೆ ಮತ್ರಿಯನ್ನು ಮರು ಸ್ಥಾಪಿಸಿದೆ.
ಬುಡಕಟ್ಟು ಮತಗಳು ವಿಭಜನೆಯಾಗುವುದನ್ನು ತಡೆಗಟ್ಟಲು ಹಾಗೂ ಬಿಜೆಪಿಯನ್ನು ದೂರ ಇಡಲು ಟಿಐಪಿಆರ್ ಎ ಮುಖ್ಯಸ್ಥ ಹಾಗೂ ರಾಜವಂಶಸ್ಥ ಪ್ರದ್ಯೋತ್ ಮಾಣಿಕ್ಯ ದೆಬ್ಬರ್ಮ ಐಪಿಎಫ್ ಟಿ ತಮ್ಮ ಪಕ್ಷದೊಂದಿಗೆ ವಿಲೀನ ಮಾಡಿಕೊಳ್ಳಲು ಯತ್ನಿಸಿದ್ದರು. ಇದರ ಭಾಗವಾಗಿ ಆತ ಇತ್ತೀಚೆಗೆ ಐಪಿಎಫ್ ಟಿ ನಾಯಕರೊಂದಿಗೆ ಸಭೆ ನಡೆಸಿದ್ದರು.
ಈ ಸಭೆಯ ಬಳಿಕ ಹೊರಬಂದ ವೀಡಿಯೋ ಮೆಸೇಜ್ ನಲ್ಲಿ ಎರಡೂ ಪಕ್ಷಗಳು ವಿಲೀನಗೊಳ್ಳುವ ಪ್ರಕ್ರಿಯೆಗೆ ಚಾಲನೆ ನೀಡಲು ಎರಡೂ ಪಕ್ಷಗಳು ಒಪ್ಪಿಗೆ ಸೂಚಿಸಿವೆ. ಸಾಂವಿಧಾನಿಕ ಬೇಡಿಕೆಯ ವಿರುದ್ಧ ಇರುವವರ ವಿರುದ್ಧ ಚುನಾವಣೆ ಎದುರಿಸಲು ಈ ವಿಲೀನ ಪ್ರಕ್ರಿಯೆ ನಡೆಯುತ್ತಿದೆ ಎಂದು ಹೇಳಿದ್ದರು. ಬಿಜೆಪಿ ಈ ರಾಜ್ಯದಲ್ಲಿ ತೀವ್ರ ಪೈಪೋಟಿ ಎದುರಿಸುತ್ತಿದ್ದು ಚುನಾವಣಾ ಪೂರ್ವ ಮೈತ್ರಿಗೆ ಮುಂದಾಗಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


