ಜೆಟ್-ಎತಿಹಾದ್ ಒಪ್ಪಂದ: 10 ವರ್ಷಗಳ ಬಳಿಕ ಸುಪ್ರೀಂ ಕೋರ್ಟ್ ನಿಂದ ಅರ್ಜಿ ಹಿಂಪಡೆದ ಸುಬ್ರಮಣಿಯನ್ ಸ್ವಾಮಿ
ಜೆಟ್ ಏರ್‌ವೇಸ್ ಮತ್ತು ಅಬುಧಾಬಿ ಮೂಲದ ಎತಿಹಾದ್ ಏರ್‌ವೇಸ್ ನಡುವಿನ ಒಪ್ಪಂದವನ್ನು ಕೊನೆಗೊಳಿಸುವಂತೆ ಕೋರಿ ಬಿಜೆಪಿ ನಾಯಕ ಸುಬ್ರಮಣಿಯನ್ ಸ್ವಾಮಿ ಅವರು ಸುಪ್ರೀಂ ಕೋರ್ಟ್ ಗೆ ಸಲ್ಲಿಸಿದ್ದ 2013 ರ ಅರ್ಜಿಯನ್ನು ಶುಕ್ರವಾರ ಹಿಂಪಡೆದಿದ್ದಾರೆ.

ನವದೆಹಲಿ: ಜೆಟ್ ಏರ್‌ವೇಸ್ ಮತ್ತು ಅಬುಧಾಬಿ ಮೂಲದ ಎತಿಹಾದ್ ಏರ್‌ವೇಸ್ ನಡುವಿನ ಒಪ್ಪಂದವನ್ನು ಕೊನೆಗೊಳಿಸುವಂತೆ ಕೋರಿ ಬಿಜೆಪಿ ನಾಯಕ ಸುಬ್ರಮಣಿಯನ್ ಸ್ವಾಮಿ ಅವರು ಸುಪ್ರೀಂ ಕೋರ್ಟ್ ಗೆ ಸಲ್ಲಿಸಿದ್ದ 2013 ರ ಅರ್ಜಿಯನ್ನು ಶುಕ್ರವಾರ ಹಿಂಪಡೆದಿದ್ದಾರೆ.
ಸುಬ್ರಮಣಿಯನ್ ಸ್ವಾಮಿ ಅವರು ನ್ಯಾಯಮೂರ್ತಿ ಎಂ.ಆರ್.ಶಾ ಮತ್ತು ನ್ಯಾಯಮೂರ್ತಿ ಸಿ.ಟಿ. ರವಿಕುಮಾರ್ ಅವರ ದ್ವಿಸದಸ್ಯ ಪೀಠಕ್ಕೆ, “ನಾನು ಆರ್ಜಿಯನ್ನು ಹಿಂಪಡೆಯಲು ಬಯಸುತ್ತೇನೆ.. ಇದು ಜೆಟ್-ಎತಿಹಾದ್ ವಿಷಯ. ಈಗ ಜೆಟ್ ಅಥವಾ ಎತಿಹಾದ್ ಎರಡೂ ಇಲ್ಲ ಎಂದು ಹೇಳಿದ್ದಾರೆ.
ಸ್ವಾಮಿ ಅವರ ವಾದಕ್ಕೆ ಉತ್ತರಿಸಿದ ಪೀಠವು, ‘ಇದಕ್ಕೆ ಯಾರು ಹೊಣೆ ಎಂದು ನಮಗೆ ಗೊತ್ತಿಲ್ಲ’ ಎಂದು ಹಗುರವಾದ ತಮಾಷೆ ಧಾಟಿಯಲ್ಲಿ ಹೇಳಿತು. ಅಲ್ಲದೆ ಅವರ ಸಲ್ಲಿಕೆಯನ್ನು ಪರಿಗಣಿಸಿದ ಪೀಠವು ಅರ್ಜಿಯನ್ನು ಹಿಂಪಡೆಯಲು ಸ್ವಾಮಿಗೆ ಅನುಮತಿ ನೀಡಿತು. ಅಗತ್ಯವಿದ್ದರೆ ಹೊಸ ಅರ್ಜಿಯನ್ನು ಸಲ್ಲಿಸಲು ಸ್ವಾಮಿ ಅವರಿಗೆ ಸ್ವಾತಂತ್ರ್ಯವನ್ನು ನೀಡಿದ ಪೀಠ, “ನಂತರದ ಬೆಳವಣಿಗೆಗಳನ್ನು ಗಮನದಲ್ಲಿಟ್ಟುಕೊಂಡು ಅರ್ಜಿದಾರರು ತಮ್ಮ ಅರ್ಜಿಯನ್ನು ಹಿಂಪಡೆಯಲು ಅನುಮತಿ ಕೋರಿದ್ದಾರೆ. ಅರ್ಜಿಯನ್ನು ಹಿಂಪಡೆಯಲಾಗಿದೆ ಎಂದು ಅರ್ಜಿ ವಜಾಗೊಳಿಸಿದೆ.
ಅಂತೆಯೇ ಕೇಂದ್ರ, ವಾಣಿಜ್ಯ ಸಚಿವಾಲಯ, ವಿದೇಶಾಂಗ ಸಚಿವಾಲಯ, ವಿದೇಶಿ ಹೂಡಿಕೆ ಉತ್ತೇಜನ ಮಂಡಳಿ (ಎಫ್‌ಐಪಿಬಿ), ಕೈಗಾರಿಕಾ ನೀತಿ ಮತ್ತು ಉತ್ತೇಜನ ಇಲಾಖೆ, ನಾಗರಿಕ ವಿಮಾನಯಾನ ಮಹಾನಿರ್ದೇಶನಾಲಯ ಮತ್ತು ಇತರರಿಗೆ ಸುಪ್ರೀಂ ಕೋರ್ಟ್ ನೋಟಿಸ್ ಜಾರಿ ಮಾಡಿದೆ. ಆಕಾಶ, ವಾಯುಪ್ರದೇಶದಂತಹ ನೈಸರ್ಗಿಕ ಸಂಪನ್ಮೂಲಗಳು ವ್ಯರ್ಥವಾಗುತ್ತಿರುವುದರಿಂದ ಸಾರ್ವಜನಿಕ ಹಿತಾಸಕ್ತಿ ವಿರುದ್ಧ ಒಪ್ಪಂದವಾಗಿದೆ ಎಂದು ಸ್ವಾಮಿ ಅರ್ಜಿಯಲ್ಲಿ ಹೇಳಿದ್ದರು. ಜೆಟ್ ಏರ್‌ವೇಸ್ 24 ಏಪ್ರಿಲ್ 2013 ರಂದು ತಮ್ಮ ಜಾಗತಿಕ ನೆಟ್‌ವರ್ಕ್‌ನ ಪ್ರಮುಖ ವಿಸ್ತರಣೆಗೆ ಕಾರಣವಾಗುವ ಕಾರ್ಯತಂತ್ರದ ಮೈತ್ರಿಯ ಭಾಗವಾಗಿ ಎತಿಹಾದ್ ಏರ್‌ವೇಸ್‌ಗೆ ಸುಮಾರು 2,058 ಕೋಟಿ ರೂ.ಗಳಿಗೆ 24 ಪ್ರತಿಶತ ಈಕ್ವಿಟಿಯನ್ನು ಮಾರಾಟ ಮಾಡುವ ಯೋಜನೆಯನ್ನು ಪ್ರಕಟಿಸಿತ್ತು.
ಸ್ವಾಮಿ ಆರೋಪವೇನು?
ನೈಸರ್ಗಿಕ ಸಂಪನ್ಮೂಲ ಅಂದರೆ ಆಕಾಶ ಮತ್ತು ವಾಯುಪ್ರದೇಶದ ದುರುಪಯೋಗವಾಗಿರುವುದರಿಂದ ಈ ಒಪ್ಪಂದ ಸಾರ್ವಜನಿಕ ಹಿತಾಸಕ್ತಿಗೆ ವಿರುದ್ಧವಾಗಿದೆ ಎಂದು ಸ್ವಾಮಿ ಆರೋಪಿಸಿದ್ದರು. ಸಂಸತ್ತಿನ ಆಯ್ಕೆ ಸಮಿತಿ ಮತ್ತು ಇತರ ಸಲಹಾ ಸಂಸ್ಥೆಗಳ ಸಲಹೆಯ ವಿರುದ್ಧ ಒಪ್ಪಂದವನ್ನು ತೆರವುಗೊಳಿಸಲಾಗಿದೆ ಎಂದೂ ಅವರು ಹೇಳಿದ್ದರು. ವಿದೇಶಿ ವಿಮಾನಯಾನ ಸಂಸ್ಥೆಗಳಿಗೆ ಅಜಾಗರೂಕತೆಯಿಂದ ಏರ್ ಸ್ಪೇಸ್ ಹಂಚಿಕೆ ಮಾಡಿರುವುದನ್ನು ಸಿಎಜಿ ಕೂಡ ಪತ್ತೆ ಮಾಡಿದೆ ಎಂದು ಸ್ವಾಮಿ ಆರೋಪದಲ್ಲಿ ಉಲ್ಲೇಖಿಸಿದ್ದರು.
ಜೆಟ್ ಏರ್‌ವೇಸ್ ಏಪ್ರಿಲ್ 24, 2013 ರಂದು ತಮ್ಮ ಜಾಗತಿಕ ನೆಟ್‌ವರ್ಕ್‌ನಲ್ಲಿ ಪ್ರಮುಖ ವಿಸ್ತರಣೆಗೆ ಕಾರಣವಾಗುವ ಕಾರ್ಯತಂತ್ರದ ಮೈತ್ರಿಯ ಭಾಗವಾಗಿ ಎತಿಹಾದ್ ಏರ್‌ವೇಸ್‌ಗೆ ಸುಮಾರು 2,058 ಕೋಟಿ ರೂಪಾಯಿಗಳಿಗೆ 24 ಪ್ರತಿಶತ ಈಕ್ವಿಟಿಯನ್ನು ಮಾರಾಟ ಮಾಡುವ ಯೋಜನೆಯನ್ನು ಪ್ರಕಟಿಸಿತು. ಸ್ವಾಮಿ ಅವರು ತಮ್ಮ ಪಿಐಎಲ್‌ನಲ್ಲಿ "ಯಾವುದೇ ಕ್ರಮ ಅಥವಾ ನಿರ್ಧಾರ ಅಥವಾ ಯಾವುದೇ ಹೆಚ್ಚಿನ ಅನುಮೋದನೆಗಳು/ಅನುಮತಿಗಳು/ಪರವಾನಗಿಗಳು ಇತ್ಯಾದಿಗಳ ಅನುದಾನವನ್ನು ಬದಿಗಿರಿಸಲು ಮತ್ತು ಹಿಂತೆಗೆದುಕೊಳ್ಳಲು ನಿರ್ದೇಶನವನ್ನು ಕೋರಿದ್ದರು. ಪ್ರತಿವಾದಿ(ಸರ್ಕಾರ) ಅಧಿಕಾರಿಗಳಿಂದ, ಏಪ್ರಿಲ್ 24 ರ ದ್ವಿಪಕ್ಷೀಯ ಒಪ್ಪಂದದ ಆಧಾರದ ಮೇಲೆ ಅವಲಂಬಿತವಾಗಿದೆ.
ಸಂಸತ್ತಿನ ಆಯ್ಕೆ ಸಮಿತಿ ಮತ್ತು ಇತರ ಸಲಹಾ ಸಂಸ್ಥೆಗಳ ಸಲಹೆಯ ವಿರುದ್ಧ ಒಪ್ಪಂದವನ್ನು ತೆರವುಗೊಳಿಸಲಾಗಿದೆ. ವಿದೇಶಿ ವಿಮಾನಯಾನ ಸಂಸ್ಥೆಗಳಿಗೆ ಅಜಾಗರೂಕತೆಯಿಂದ ಏರ್ ಸ್ಪೇಸ್ ಹಂಚಿಕೆ ಮಾಡಿರುವುದನ್ನು ಸಿಎಜಿ ಕೂಡ ಪತ್ತೆ ಮಾಡಿದೆ. ಜೆಟ್ ಏರ್‌ವೇಸ್ ಏಪ್ರಿಲ್ 24, 2013 ರಂದು ತಮ್ಮ ಜಾಗತಿಕ ನೆಟ್‌ವರ್ಕ್‌ನಲ್ಲಿ ಪ್ರಮುಖ ವಿಸ್ತರಣೆಗೆ ಕಾರಣವಾಗುವ ಕಾರ್ಯತಂತ್ರದ ಮೈತ್ರಿಯ ಭಾಗವಾಗಿ ಎತಿಹಾದ್ ಏರ್‌ವೇಸ್‌ಗೆ ಸುಮಾರು 2,058 ಕೋಟಿ ರೂಪಾಯಿಗಳಿಗೆ 24 ಪ್ರತಿಶತ ಈಕ್ವಿಟಿಯನ್ನು ಮಾರಾಟ ಮಾಡುವ ಯೋಜನೆಯನ್ನು ಪ್ರಕಟಿಸಿತು. ಸ್ವಾಮಿ ಅವರು ತಮ್ಮ ಪಿಐಎಲ್‌ನಲ್ಲಿ "ಯಾವುದೇ ಕ್ರಮ ಅಥವಾ ನಿರ್ಧಾರ ಅಥವಾ ಯಾವುದೇ ಹೆಚ್ಚಿನ ಅನುಮೋದನೆಗಳು/ಅನುಮತಿಗಳು/ಪರವಾನಗಿಗಳು ಇತ್ಯಾದಿಗಳ ಅನುದಾನವನ್ನು ಬದಿಗಿರಿಸಲು ಮತ್ತು ಹಿಂತೆಗೆದುಕೊಳ್ಳಲು ನಿರ್ದೇಶನವನ್ನು ಕೋರಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


