ಕಾಂಗ್ರೆಸ್ ಗೆ ಬೇಕಾಗಿರುವುದು ಒಗ್ಗಟ್ಟು, ಶಿಸ್ತು ಮತ್ತು ಸಂಕಲ್ಪ: ಮಲ್ಲಿಕಾರ್ಜು ಖರ್ಗೆ
ಪಕ್ಷವು ಹಲವಾರು ಸವಾಲುಗಳನ್ನು ಎದುರಿಸುತ್ತಿದೆ. ಅದನ್ನು ಎದುರಿಸಬಹುದು. ಆದರೆ ಪಕ್ಷಕ್ಕೆ ಬೇಕಾಗಿರುವುದು ಒಗ್ಗಟ್ಟು, ಶಿಸ್ತು ಮತ್ತು ಸಂಕಲ್ಪ ಎಂದು ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಭಾನುವಾರ ಹೇಳಿದ್ದಾರೆ.

ರಾಯಪುರ: ಪಕ್ಷವು ಹಲವಾರು ಸವಾಲುಗಳನ್ನು ಎದುರಿಸುತ್ತಿದೆ. ಅದನ್ನು ಎದುರಿಸಬಹುದು. ಆದರೆ ಪಕ್ಷಕ್ಕೆ ಬೇಕಾಗಿರುವುದು ಒಗ್ಗಟ್ಟು, ಶಿಸ್ತು ಮತ್ತು ಸಂಕಲ್ಪ ಎಂದು ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಭಾನುವಾರ ಹೇಳಿದ್ದಾರೆ.
ಛತ್ತೀಸ್‌ಗಢದ ನವ ರಾಯಪುರದಲ್ಲಿ ನಡೆದ ಪಕ್ಷದ 85ನೇ ಸರ್ವಸದಸ್ಯರ ಮಹಾಧಿವೇಶನದಲ್ಲಿ ಸಮಾರೋಪ ಭಾಷಣ ಮಾಡಿದ ಖರ್ಗೆ, ಅಧಿವೇಶನವು ಕೊನೆಗೊಳ್ಳಬಹುದು. ಆದರೆ ಇದು "ಹೊಸ ಕಾಂಗ್ರೆಸ್" ನ ಆರಂಭಕ್ಕೆ ನಾಂದಿ ಹಾಡುತ್ತದೆ ಎಂದು ಹೇಳಿದರು.
ಇಂದು ನಮ್ಮ ಮುಂದೆ ಹಲವು ಸವಾಲುಗಳಿವೆ. ಆದರೆ ಕಾಂಗ್ರೆಸ್‌ಗೆ ಯಾವುದನ್ನೂ ಎದುರಿಸಲು ಸಾಧ್ಯವಾಗುತ್ತಿಲ್ಲ. ಹೀಗಾಗಿ ಪಕ್ಷಕ್ಕೆ ಬೇಕಿರುವುದು ಒಗ್ಗಟ್ಟು, ಶಿಸ್ತು ಮತ್ತು ದೃಢಸಂಕಲ್ಪ. ಪಕ್ಷದ ಬಲದಲ್ಲಿ ನಮ್ಮ ಶಕ್ತಿ ಅಡಗಿದೆ ಎಂದರು.
"ರಾಷ್ಟ್ರಮಟ್ಟದಲ್ಲಿ ನಮ್ಮ ನಡವಳಿಕೆಯು ಪ್ರತಿ ಹಂತದಲ್ಲಿರುವ ಕೋಟಿಗಟ್ಟಲೆ ಪಕ್ಷದ ಸಹೋದ್ಯೋಗಿಗಳ ಮೇಲೆ ಪರಿಣಾಮ ಬೀರುತ್ತದೆ" ಎಂದು ಕಾಂಗ್ರೆಸ್ ಅಧ್ಯಕ್ಷರು ಹೇಳಿದ್ದಾರೆ.
ಕಾಲಾನಂತರದಲ್ಲಿ ಅನೇಕ ವಿಷಯಗಳು ಬದಲಾಗುತ್ತವೆ. ಜನರ ಆಕಾಂಕ್ಷೆಗಳು ಮತ್ತು ನಿರೀಕ್ಷೆಗಳು ಬದಲಾಗುತ್ತವೆ. ಹೊಸ ಸವಾಲುಗಳು ಹೊರಹೊಮ್ಮುತ್ತವೆ. ಅವುಗಳನ್ನು ಎದುರಿಸಲು ಹೊಸ ಮಾರ್ಗಗಳು ಸಹ ಕಂಡುಕೊಳ್ಳಬೇಕು ಎಂದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


