ಆರ್ ಬಿಐ ಮಾಜಿ ಗವರ್ನರ್ ರಘುರಾಮ್ ರಾಜನ್ ವಿರುದ್ಧ ಉಪರಾಷ್ಟ್ರಪತಿ ಧನಕರ್ ವಾಗ್ದಾಳಿ
ಆರ್ ಬಿಐ ನಂತಹ ಪ್ರಮುಖ ಹುದ್ದೆಗಳಲ್ಲಿ ಭಾರತದಲ್ಲಿ ಅಲ್ಪಾವಧಿಗೆ ಕೆಲಸ ಮಾಡಿರುವ ಕೆಲವು ವಿದೇಶಿ ತಜ್ಞರು, ತಮ್ಮ ದೇಶಕ್ಕೆ ಮರಳಿದ ನಂತರ ನೀಡುವ ಹೇಳಿಕೆಯನ್ನು ದೇಶದ ಜನರು ಗಂಭೀರವಾಗಿ ಪರಿಗಣಿಸಬಾರದು ಎಂದು ಉಪ ರಾಷ್ಟ್ರಪತಿ ಜಗದೀಪ್ ಧನಕರ್ ಹೇಳಿದ್ದಾರೆ.

ನವದೆಹಲಿ: ಆರ್ ಬಿಐ ನಂತಹ ಪ್ರಮುಖ ಹುದ್ದೆಗಳಲ್ಲಿ ಭಾರತದಲ್ಲಿ ಅಲ್ಪಾವಧಿಗೆ ಕೆಲಸ ಮಾಡಿರುವ ಕೆಲವು ವಿದೇಶಿ ತಜ್ಞರು, ತಮ್ಮ ದೇಶಕ್ಕೆ ಮರಳಿದ ನಂತರ ನೀಡುವ ಹೇಳಿಕೆಯನ್ನು ದೇಶದ ಜನರು ಗಂಭೀರವಾಗಿ ಪರಿಗಣಿಸಬಾರದು ಎಂದು ಉಪ ರಾಷ್ಟ್ರಪತಿ ಜಗದೀಪ್ ಧನಕರ್ ಹೇಳಿದ್ದಾರೆ.
ಭಾರತೀಯ ಕೃಷಿ ಸಂಶೋಧನಾ ಸಂಸ್ಥೆಯ 61 ನೇ ಘಟಿಕೋತ್ಸವ ಉದ್ಘಾಟಿಸಿ ಮಾತನಾಡಿದ ಧನಕರ್, ಸತತ ಪ್ರಯತ್ನಗಳ ನಂತರ ಭಾರತ ವಿಶ್ವದ ಐದನೇ ಅತಿದೊಡ್ಡ ಆರ್ಥಿಕತೆಯಾಗಿದೆ.ಆದರೂ, ಕೆಲವು ಜನರು ಭಾರತದ ಆರ್ಥಿಕತೆ ಬಗ್ಗೆ ತಪ್ಪು ಕಲ್ಪನೆ ಹರಡುತ್ತಿದ್ದಾರೆ ಎಂದು ಅವರು ಹೇಳುವ ಮೂಲಕ ರಘುರಾಮ್ ರಾಜನ್ ವಿರುದ್ಧ ವಾಗ್ದಾಳಿ ನಡೆಸಿದರು.
ಈ ರಾಷ್ಟ್ರಕ್ಕಾಗಿ ಬೆವರು ಹರಿಸುವವರ ಸಾಧನೆಗಳನ್ನು ಕುಗ್ಗಿಸಲು, ಕಳಂಕ ತರಲು ಪ್ರಯತ್ನಿಸುವ ಯಾರೊಬ್ಬರಿಗೂ ಅವಕಾಶ ನೀಡುವುದಿಲ್ಲ ಎಂದು ಅವರು ಹೇಳಿದರು. ಕೆಲವರು ಆರ್ ಬಿಐ ನಂತಹ ಪ್ರಮುಖ ಸಂಸ್ಥೆಯಲ್ಲಿ ಕೆಲಸ ಮಾಡಿರುತ್ತಾರೆ. ಹೊರ ದೇಶದಿಂದ ಬಂದು, ಪ್ರಮುಖ ಸ್ಥಾನ ಅಲಂಕರಿಸಿದ್ದವರು ತಮ್ಮ ಸ್ವದೇಶಕ್ಕೆ ಮರಳಿದಾಗ ಭಾರತ ಆಹಾರ ಬಿಕ್ಕಟ್ಟು ಎದುರಿಸುತ್ತಿದೆ ಎಂದು ಟೀಕಿಸುತ್ತಾರೆ.
ಇಂತಹ ಜನರು 2020 ರಿಂದ 80 ಕೋಟಿ ಜನರಿಗೆ ಸರ್ಕಾರ ಉಚಿತ ಆಹಾರ ಧಾನ್ಯ ವಿತರಣೆ ಮಾಡಿರುವುದನ್ನು ತಿಳಿದಿಲ್ಲ, ಅಂತವರ ಹೇಳಿಕೆಯನ್ನು ವಿಶೇಷವಾಗಿ ಯುವ ಜನತೆ ಗಂಭೀರವಾಗಿ ತೆಗೆದುಕೊಳ್ಳಬಾರದು ಎಂದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


