ತೆಲಂಗಾಣ: ಮೀಸಲು ಅರಣ್ಯದಲ್ಲಿ ಬಿಯರ್ ಬಾಟಲಿಯೊಳಗೆ ಐಇಡಿ, ಪೊಲೀಸರ ವಶಕ್ಕೆ
ತೆಲಂಗಾಣದ ಮುಲುಗು ಜಿಲ್ಲೆಯ ಪೊಲೀಸರು ಕೂಂಬಿಂಗ್ ಕಾರ್ಯಾಚರಣೆಯ ವೇಳೆ ಮೀಸಲು ಅರಣ್ಯ ಪ್ರದೇಶದಲ್ಲಿ ಬಿಯರ್ ಬಾಟಲಿ ಒಳಗೆ ಸುಧಾರಿತ ಸ್ಫೋಟಕ ಹಾಕಿರುವುದನ್ನು ಪತ್ತೆ ಮಾಡಿದ್ದಾರೆ.

ಮುಲುಗು: ತೆಲಂಗಾಣದ ಮುಲುಗು ಜಿಲ್ಲೆಯ ಪೊಲೀಸರು ಕೂಂಬಿಂಗ್ ಕಾರ್ಯಾಚರಣೆಯ ವೇಳೆ ಮೀಸಲು ಅರಣ್ಯ ಪ್ರದೇಶದಲ್ಲಿ ಬಿಯರ್ ಬಾಟಲಿ ಒಳಗೆ ಸುಧಾರಿತ ಸ್ಫೋಟಕ ಹಾಕಿರುವುದನ್ನು ಪತ್ತೆ ಮಾಡಿದ್ದಾರೆ. ವೆಂಕಟಾಪುರಂ ಮಂಡಲದ ಪಾಮುನೂರು ಗ್ರಾಮದ ಬಳಿಯ ಮೀಸಲು ಅರಣ್ಯದಲ್ಲಿ ನಿಷೇಧಿತ ಮಾವೋವಾದಿಗಳು ಅಳವಡಿಸಿದ್ದ ಐಇಡಿ ವಶಪಡಿಸಿಕೊಳ್ಳಲಾಗಿದ್ದು, ಬಾಂಬ್ ನಿಷ್ಕ್ರಿಯ ದಳ ಸ್ಫೋಟಕವನ್ನು ನಿಷ್ಕ್ರಿಯಗೊಳಿಸಿದೆ ಎಂದು ಪೊಲೀಸರು ಮಂಗಳವಾರ ತಿಳಿಸಿದ್ದಾರೆ.
ಫೆಬ್ರವರಿ 17 ರಂದು ಗ್ರಾಮಗಳಿಗೆ ಭೇಟಿ ನೀಡುವ ಪೊಲೀಸರನ್ನು ಕೊಲ್ಲುವ ಉದ್ದೇಶದಿಂದ ನಿಷೇಧಿತ ಮಾವೋವಾದಿ ಪಕ್ಷದ ಉನ್ನತ ನಾಯಕರು ಯೋಜನೆ ರೂಪಿಸಿ ಕಾಡಿನಲ್ಲಿ ಐಇಡಿ ಸ್ಫೋಟಕ ಇಟ್ಟಿದ್ದಾರೆ ಎಂಬ ಖಚಿತ ಮಾಹಿತಿ ಸಿಕ್ಕಿತು ಎಂದು ಏತೂರ್ನಗರಂ ಸಹಾಯಕ ಪೊಲೀಸ್ ವರಿಷ್ಠಾಧಿಕಾರಿ ಸಿರಿಸೆಟ್ಟಿ ಸಂಕೀರ್ತ್ ಹೇಳಿದ್ದಾರೆ. ಕೇಂದ್ರ ಮೀಸಲು ಪೊಲೀಸ್ ಪಡೆ ಸಿಬ್ಬಂದಿ ಮತ್ತು ಬಿಡಿ ತಂಡದೊಂದಿಗೆ ಪೊಲೀಸ್ ತಂಡವು ಐಇಡಿ ಪತ್ತೆ ಮಾಡಲು ಪಾಮುನೂರು ಗ್ರಾಮದ ಪಶ್ಚಿಮ ಮೀಸಲು ಪ್ರದೇಶಕ್ಕೆ ತೆರಳಿತು.
ಅರಣ್ಯದಲ್ಲಿ ಶೋಧ ಕಾರ್ಯಾಚರಣೆ ನಡೆಸುವಾಗ ರಸ್ತೆಯಲ್ಲಿ ವಿದ್ಯುತ್ ತಂತಿ ಕಂಡುಬಂದಿದೆ. ನಂತರ ಒಂದು ಬಿಯರ್ ಬಾಟಲ್ ನಲ್ಲಿ ಐಇಡಿ ಪತ್ತೆಯಾಗಿದೆ. ತಕ್ಷಣವೇ,ತಂಡವು ಬಾಂಬ್ ನಿಷ್ಕ್ರಿಯ ತಂಡದ ಸಹಾಯ ಪಡೆದು ಐಇಡಿ ವಶಕ್ಕೆ ಪಡೆಯಿತು ಎಂದು ಪ್ರಕಟಣೆ ತಿಳಿಸಿದೆ. ಆರೋಪಿಗಳ ವಿರುದ್ಧ ಸೂಕ್ತ ಕಾನೂನು ಸೆಕ್ಷನ್‌ಗಳ ಅಡಿಯಲ್ಲಿ ವೆಂಕಟಾಪುರಂ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ ಎಂದು ಎಎಸ್ಪಿ ತಿಳಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


