ಚುನಾವಣೆ ಎದುರಿಸುತ್ತಿರುವ ಈಶಾನ್ಯ ರಾಜ್ಯಗಳಲ್ಲಿ 148 ಕೋಟಿ ರೂಪಾಯಿ ವಶಕ್ಕೆ
ಚುನಾವಣೆ ಎದುರಿಸುತ್ತಿರುವ ಮೂರು ಈಶಾನ್ಯ ರಾಜ್ಯಗಳಲ್ಲಿ- ತ್ರಿಪುರಾ, ನಾಗಾಲ್ಯಾಂಡ್, ಮೇಘಾಲಯದಲ್ಲಿ ದಾಖಲೆಯ ಪ್ರಮಾಣದ ಅಕ್ರಮ ವಸ್ತು, ನಗದುಗಳನ್ನು ವಶಕ್ಕೆ ಪಡೆಯಲಾಗಿದೆ.

ನವದೆಹಲಿ: ಚುನಾವಣೆ ಎದುರಿಸುತ್ತಿರುವ ಮೂರು ಈಶಾನ್ಯ ರಾಜ್ಯಗಳಲ್ಲಿ- ತ್ರಿಪುರಾ, ನಾಗಾಲ್ಯಾಂಡ್, ಮೇಘಾಲಯದಲ್ಲಿ ದಾಖಲೆಯ ಪ್ರಮಾಣದ ಅಕ್ರಮ ವಸ್ತು, ನಗದುಗಳನ್ನು ವಶಕ್ಕೆ ಪಡೆಯಲಾಗಿದೆ.
ಸುಮಾರು 147.84 ಕೋಟಿ ರೂಪಾಯಿ ಮೌಲ್ಯದ ಮದ್ಯ, ಡ್ರಗ್ಸ್, ಅಮೂಲ್ಯ ಲೋಹಗಳನ್ನು ವಶಕ್ಕೆ ಪಡೆಯಲಾಗಿದೆ ಎಂದು ಚುನಾವಣಾ ಆಯೋಗ ಗುರುವಾರ ತಿಳಿಸಿದೆ.
ಮೂರು ರಾಜ್ಯಗಳಲ್ಲಿ ಚುನಾವಣಾ ಖರ್ಚು ವೆಚ್ಚಗಳ ಮೇಲೆ ನಿಗಾ ಇಡಲಾಗಿದೆ. 2018 ರಲ್ಲಿ ನಡೆದ ವಿಧಾನಸಭೆ ಚುನಾವಣೆ ವೇಳೆ ವಶಕ್ಕೆ ಪಡೆಯಲಾಗಿದ್ದ ಮೊತ್ತಕ್ಕಿಂತ ಈ ಬಾರಿ ವಶಕ್ಕೆ ಪಡೆದ ಮೊತ್ತ 20 ಪಟ್ಟು ಹೆಚ್ಚಾಗಿದೆ ಎಂದು ಆಯೋಗ ಹೇಳಿದೆ.
ಧಲೈ ಜಿಲ್ಲೆಯಲ್ಲಿ 10.58 ಕೋಟಿ ರೂಪಾಯಿ ಮೌಲ್ಯದ 3.52 ಕೆ.ಜಿ ಹೆರಾಯಿನ್ ಇದ್ದು, ಮೇಘಾಲಯದ ಈಸ್ಟ್ ಖಸಿ ಹಿಲ್ಸ್ ಜಿಲ್ಲೆಯಲ್ಲಿ 2.447 ಕೆ.ಜಿ ಹೆರಾಯಿನ್ ನ್ನು ಹಾಗೂ ನಾಗಾಲ್ಯಾಂಡ್ ನ ಚುಮೌಕೆದಿಮಾ ಜಿಲ್ಲೆಯಲ್ಲಿ 2.27 ಕೆಜಿ ಹೆರಾಯಿನ್ ನ್ನು ವಶಕ್ಕೆ ಪಡೆಯಲಾಗಿದೆ.
ತ್ರಿಪುರಾದ ಮತದಾರರು ಇಂದು ಮತಚಲಾಯಿಸಿದ್ದು, ಮಾ.2 ರಂದು ಮತ ಎಣಿಕೆ ನಡೆಯಲಿದೆ. ಈ ವರ್ಷ ಚುನಾವಣೆ ಎದುರಿಸುತ್ತಿರುವ ಮೊದಲ ರಾಜ್ಯ ತ್ರಿಪುರಾ ಆಗಿದೆ. ಫೆ.27 ರಂದು ನಾಗಾಲ್ಯಾಂಡ್, ಮೇಘಾಲಯ ರಾಜ್ಯಗಳು ಚುನಾವಣೆ ಎದುರಿಸಲಿವೆ. ಈ ವರ್ಷ 5 ರಾಜ್ಯಗಳ ವಿಧಾನಸಭಾ ಚುನಾವಣೆ ಇದ್ದು, 2024 ಕ್ಕೆ ಲೋಕಸಭಾ ಚುನಾವಣೆ ನಡೆಯಲಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


