ಚತ್ತೀಸ್ ಗಢ: ನಕ್ಸಲರ ದಾಳಿಗೆ ಮಾಜಿ ಸರ್ಪಂಚ್ ಬಲಿ!
ಚತ್ತೀಸ್ ಗಢದಲ್ಲಿ ಮತ್ತೆ ನಕ್ಸಲರ ದಾಳಿ ನಡೆದಿದ್ದು, ದಾಂತೇವಾಡ ಜಿಲ್ಲೆಯಲ್ಲಿ ಮಾಜಿ ಸರ್ಪಂಚ್ ನ್ನು ಹತ್ಯೆ ಮಾಡಲಾಗಿದೆ.

ರಾಂಚಿ: ಚತ್ತೀಸ್ ಗಢದಲ್ಲಿ ಮತ್ತೆ ನಕ್ಸಲರ ದಾಳಿ ನಡೆದಿದ್ದು, ದಾಂತೇವಾಡ ಜಿಲ್ಲೆಯಲ್ಲಿ ಮಾಜಿ ಸರ್ಪಂಚ್ ನ್ನು ಹತ್ಯೆ ಮಾಡಲಾಗಿದೆ.
ಮಾಜಿ ಸರ್ಪಂಚ್ ಪೊಲೀಸರಿಗೆ ಮಾಹಿತಿ ನೀಡುತ್ತಿದ್ದ ಹಿನ್ನೆಲೆಯಲ್ಲಿ ನಕ್ಸಲರು ಅವರನ್ನು ಹತ್ಯೆ ಮಾಡಿದ್ದಾರೆ.
ಥುಲ್ಥುಲಿ ಎಂಬ ಗ್ರಾಮದ ಅರಣ್ಯ ಪ್ರದೇಶದಲ್ಲಿ ಈ ಘಟನೆ ವರದಿಯಾಗಿದ್ದು, ಬರ್ಸೂರ್ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ನಡೆದಿದೆ. ಮಾಜಿ ಸರ್ಪಂಚ್ ರಾಮ್ಧರ್ ಅಲಾಮಿ ಮೃತ ಸರ್ಪಂಚ್ ಆಗಿದ್ದು, ಈತ ಪೊಲೀಸ್ ಮಾಹಿತಿದಾರನಾಗಿ ಕಾರ್ಯನಿರ್ವಹಿಸುತ್ತಿದ್ದ ಹಾಗೂ ಹಣಕ್ಕಾಗಿ ಬೋಧ್ಘಾಟ್ ಅಣೆಕಟ್ಟು ಯೋಜನೆಯನ್ನು ಉತ್ತೇಜಿಸುತ್ತಿದ್ದರು.
ಅಲಾಮಿಗೆ ಪದೇ ಪದೇ ಎಚ್ಚರಿಕೆ ನೀಡಲಾಗಿತ್ತು ಎಂದು ನಕ್ಸಲ್ ಕರಪತ್ರದಲ್ಲಿ ತಿಳಿಸಲಾಗಿದೆ. ಕಳೆದ ಕೆಲವು ದಿನಗಳಿಂದ ಈ ಭಾಗದಲ್ಲಿ ನಕ್ಸಲರ ಚಟುವಟಿಕೆ ತೀವ್ರಗೊಂಡಿದ್ದು ರಾಜಕಾರಣಿಗಳ ಹತ್ಯೆ, ಹತ್ಯೆ ಯತ್ನಗಳು ವರದಿಯಾಗಿವೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


