ದೇಶ

ಅಧಿಕಾರಕ್ಕೆ ಬಂದಲ್ಲಿ ಸಚಿವಾಲಯದ ಮೇಲಿನ ಗುಮ್ಮಟ ಧ್ವಂಸ: ತೆಲಂಗಾಣ ಬಿಜೆಪಿ ರಾಜ್ಯಾಧ್ಯಕ್ಷ 

ರಾಜ್ಯದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದಲ್ಲಿ ತಮ್ಮ ಪಕ್ಷ ರಾಜ್ಯದ ಸಚಿವಾಲಯದ ಮೇಲೆ ನಿರ್ಮಿಸಲಾಗಿರುವ ಗುಮ್ಮಟವನ್ನು ಧ್ವಂಸಗೊಳಿಸುತ್ತದೆ ಎಂದು ತೆಲಂಗಾಣ ಬಿಜೆಪಿ ರಾಜ್ಯಾಧ್ಯಕ್ಷ ಬಂಡಿ ಸಂಜಯ್ ಹೇಳಿದ್ದಾರೆ.

ಅಧಿಕಾರಕ್ಕೆ ಬಂದಲ್ಲಿ ಸಚಿವಾಲಯದ ಮೇಲಿನ ಗುಮ್ಮಟ ಧ್ವಂಸ: ತೆಲಂಗಾಣ ಬಿಜೆಪಿ ರಾಜ್ಯಾಧ್ಯಕ್ಷ 
ತೆಲಂಗಾಣ ಸಚಿವಾಲಯದ ಕಟ್ಟಡ (ಸಂಗ್ರಹ ಚಿತ್ರ)
Published On :

ಹೈದರಾಬಾದ್: ರಾಜ್ಯದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದಲ್ಲಿ ತಮ್ಮ ಪಕ್ಷ ರಾಜ್ಯದ ಸಚಿವಾಲಯದ ಮೇಲೆ ನಿರ್ಮಿಸಲಾಗಿರುವ ಗುಮ್ಮಟವನ್ನು ಧ್ವಂಸಗೊಳಿಸುತ್ತದೆ ಎಂದು ತೆಲಂಗಾಣ ಬಿಜೆಪಿ ರಾಜ್ಯಾಧ್ಯಕ್ಷ ಬಂಡಿ ಸಂಜಯ್ ಹೇಳಿದ್ದಾರೆ. 
 
ಎಐಎಂಐಎಂ ಮುಖ್ಯಸ್ಥ ಅಸಾದುದ್ದೀನ್ ಓವೈಸಿ ಮಾತುಗಳಲ್ಲಿ ಹೇಳುವುದಾದರೆ ತೆಲಂಗಾಣದ ಸಚಿವಾಲಯದ ಕಟ್ಟಡ ತಾಜ್ ಮಹಲ್ ನ್ನು ಹೋಲುತ್ತಿದೆ. 

ಹಳೆ ಬೋವೆನ್ಪಲ್ಲಿಯಲ್ಲಿ 11,000 ಜನಮ್ ಘೋಷ-ಬಿಜೆಪಿ ಭರೋಸಾ ಎಂಬ ರಸ್ತೆ ಬದಿಯ ಸಭೆಗಳನ್ನು ಉದ್ಘಾಟಿಸಿ ಮಾತನಾಡಿರುವ ಸಂಜಯ್, ಬಿಜೆಪಿ ಅಧಿಕಾರಕ್ಕೆ ಬಂದಲ್ಲಿ ರಾಜ್ಯದ್ಲಲಿ ನಿಜಾಮರ ಆಡಳಿತದ ಗುಲಾಮಗಿರಿಯ ಗುರುತಾಗಿರುವ ಎಲ್ಲಾ ಕಟ್ಟಡಗಳನ್ನೂ ಧ್ವಂಸ ಮಾಡಲಾಗುತ್ತದೆ ಎಂದು ಹೇಳಿದ್ದಾರೆ.

ಮಾಧ್ಯಮಗಳೊಂದಿಗೆ ಮಾತನಾಡಿರುವ ಬಂಡಿ ಸಂಜಯ್, ಐಟಿ ಸಚಿವ ಕೆಟಿ ರಾಮ ರಾವ್ ಅವರ ಹೇಳಿಕೆಗೆ ಪ್ರತಿಕ್ರಿಯೆ ನೀಡಿದ್ದು, ಇನ್ನೊಂದು ಶತಮಾನ ಉಪಯೋಗಿಸಬಹುದಾಗಿದ್ದ ಹಳೆಯ ಸಚಿವಾಲಯವನ್ನು ನಾನು ಧ್ವಂಸ ಮಾಡಲಿಲ್ಲ. ಸಚಿವಾಲಯಕ್ಕೆ ಸಿಎಂ ಎಂದಿಗೂ ಹೋಗದೇ ಇದ್ದಾಗ, ಹಳೆಯ ಕಟ್ಟಡವನ್ನು ಧ್ವಂಸಗೊಳಿಸುವ ಅಗತ್ಯವೇನಿತ್ತು? ಹೊಸ ಸಚಿವಾಲಯ ಕಟ್ಟಡದ ನಿರ್ಮಾಣಕ್ಕೆ ಅಂದಾಜು ಮೊತ್ತ 400 ಕೋಟಿಯಾಗಿತ್ತು ಈಗ ಅದು 1,700 ಕೋಟಿಯಾಗಿದೆ ಎಂದು ಸಂಜಯ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
 
ಓವೈಸಿಯ ಇಚ್ಛೆಗೆ ತಕ್ಕಂತೆ ಹೊಸ ಸಚಿವಾಲಯವನ್ನು ನಿರ್ಮಾಣ ಮಾಡಲಾಗಿದೆ ಎಂದು ಆರೋಪಿಸಿರುವ ಬಂಡಿ ಸಂಜಯ್, ತಾವು ಪ್ರಧಾನಿ ಮೋದಿ ಅವರೊಂದಿಗೆ ಸೇರಿ ದೇಶದ ಹಳೆಯ ಗುಲಾಮಗಿರಿಯ ನೆನಪುಗಳನ್ನು ಅಳಿಸಿಹಾಕಲು ಯತ್ನಿಸುತ್ತಿದ್ದೇವೆ ಎಂದು ಬಂಡಿ ಸಂಜಯ್ ಹೇಳಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.