ಯೂಟ್ಯೂಬ್ ನೋಡಿ ಎಟಿಎಂ ಗೆ ಕನ್ನ ಹಾಕಲು ಯತ್ನಿಸಿದ ಯುವಕನ ಬಂಧನ!
ಯೂಟ್ಯೂಬ್ ವಿಡಿಯೋ ನೋಡಿ ಎಟಿಎಂ ವಂಚನೆಗೆ ಪ್ರಯತ್ನಿಸಿದ ಯುವಕನೋರ್ವನನ್ನು ಪೊಲೀಸರು ಬಂಧಿಸಿದ್ದಾರೆ.

ರಾಂಚಿ: ಯೂಟ್ಯೂಬ್ ವಿಡಿಯೋ ನೋಡಿ ಎಟಿಎಂ ವಂಚನೆಗೆ ಪ್ರಯತ್ನಿಸಿದ ಯುವಕನೋರ್ವನನ್ನು ಪೊಲೀಸರು ಬಂಧಿಸಿದ್ದಾರೆ.
ಜಾರ್ಖಂಡ್ ನಲ್ಲಿ ಈ ಘಟನೆ ವರದಿಯಾಗಿದೆ. ಬಿಹಾರ ಮೂಲದ ಯುವಕನೋರ್ವ ಯೂಟ್ಯೂಬ್ ನಲ್ಲಿ ವಿಡಿಯೋಗಳನ್ನು ನೋಡಿ, ಎಟಿಎಂ ನಿಂದ ಹಣ ಕಳ್ಳತನ ಮಾಡಲು ಯತ್ನಿಸುತ್ತಿದ್ದಾಗ ಪೊಲೀಸರ ಕೈಗೆ ಸಿಕ್ಕಿಬಿದ್ದಿದ್ದಾನೆ.
ಗಯಾದ ಸಂಜೀವ್ ಕುಮಾರ್ ಬಂಧಿತ ಯುವಕನಾಗಿದ್ದು, ಸುಲಭ ಹಾಗೂ ಶೀಘ್ರವಾಗಿ ಹಣ ಮಾಡುವ ಉದ್ದೇಶದಿಂದ ಈ ಕೃತ್ಯಕ್ಕೆ ಕೈ ಹಾಕಿದ್ದಾಗಿ ತಿಳಿಸಿದ್ದಾನೆ. ತಾನೂ ಹಾಗೂ ತನ್ನ ಸ್ನೇಹಿತ ಯೂಟ್ಯೂಬ್ ನಲ್ಲಿ ಎಟಿಎಂ ಫ್ರಾಡ್ ಡೆಲ್ಲಿ ಶಾಟ್ಸ್ ಎಂಬ ಹೆಸರಿನ ಎಟಿಎಂ ದರೋಡೆ ವೀಡಿಯೋಗಳನ್ನು ನೋಡಿ ಕಲಿತಿದ್ದಾಗಿ ಆರೋಪಿ ತಿಳಿಸಿದ್ದಾನೆ.
“ಸಂಜೀವ್ ಕುಮಾರ್ ಬಿಹಾರಕ್ಕೆ ಸೇರಿದವರು, ಅವರು ಇನ್ನೊಬ್ಬ ಯುವಕ ಸಂಜಯ್ ಕುಮಾರ್ ಸಿಂಗ್ ಅವರೊಂದಿಗೆ ಸಂಪರ್ಕಕ್ಕೆ ಬಂದರು ಮತ್ತು ತ್ವರಿತವಾಗಿ ಮತ್ತು ಸುಲಭವಾಗಿ ಹಣವನ್ನು ಹೇಗೆ ಪಡೆಯುವುದು ಎಂಬುದನ್ನು ಕಂಡುಕೊಳ್ಳುವ ಮಾರ್ಗಗಳ ಕುರಿತು ಕೆಲಸ ಮಾಡಲು ಪ್ರಾರಂಭಿಸಿದರು. "ಎಟಿಎಂ ವಂಚನೆ ದೆಹಲಿ ಶಾಟ್ಸ್”, ಇದು ವಂಚನೆಯ ಬಗ್ಗೆ ವಿವರವಾಗಿ ವಿವರಿಸುವ ಯೂಟ್ಯೂಬ್‌ನಲ್ಲಿ ಲಭ್ಯವಿದೆ,” ಎಂದು ಗಿರಿದಿಹ್ ಎಸ್‌ಪಿ ದೀಪಕ್ ಕುಮಾರ್ ಶರ್ಮಾ ಹೇಳಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


