ದೇಶ

ಶಬರಿಮಲೆ ಅಯ್ಯಪ್ಪ ದೇವಸ್ಥಾನಕ್ಕೆ ಹರಿದು ಬಂದ ಭಕ್ತಸಾಗರ: 200 ಕೋಟಿ ರೂಪಾಯಿ ಆದಾಯ

ದಿನದಿಂದ ದಿನಕ್ಕೆ ಶಬರಿಮಲೆಗೆ ಬರುತ್ತಿರುವ ಭಕ್ತರ ಸಂಖ್ಯೆಯಲ್ಲಿ ಏರಿಕೆಯಾಗಿದ್ದು, ಎರಡು ತಿಂಗಳ ವಾರ್ಷಿಕ ತೀರ್ಥಯಾತ್ರೆಯ ಮೊದಲ ಹಂತವು ಡಿಸೆಂಬರ್ 27 ರಂದು ಮಂಡಲ ಪೂಜೆಯೊಂದಿಗೆ ಮುಕ್ತಾಯಗೊಳ್ಳಲಿದೆ. ಈ ಮೂಲಕ ಶಬರಿಮಲೆಯಲ್ಲಿ ಆದಾಯ ಸಂಗ್ರಹವು 200 ಕೋಟಿ ರೂ.ಗಳನ್ನು ದಾಟಿದೆ.

ಶಬರಿಮಲೆ ಅಯ್ಯಪ್ಪ ದೇವಸ್ಥಾನಕ್ಕೆ ಹರಿದು ಬಂದ ಭಕ್ತಸಾಗರ: 200 ಕೋಟಿ ರೂಪಾಯಿ ಆದಾಯ
ಶಬರಿಮಲೆ
Published On :

ಶಬರಿಮಲೆ: ದಿನದಿಂದ ದಿನಕ್ಕೆ ಶಬರಿಮಲೆಗೆ ಬರುತ್ತಿರುವ ಭಕ್ತರ ಸಂಖ್ಯೆಯಲ್ಲಿ ಏರಿಕೆಯಾಗಿದ್ದು, ಎರಡು ತಿಂಗಳ ವಾರ್ಷಿಕ ತೀರ್ಥಯಾತ್ರೆಯ ಮೊದಲ ಹಂತವು ಡಿಸೆಂಬರ್ 27 ರಂದು ಮಂಡಲ ಪೂಜೆಯೊಂದಿಗೆ ಮುಕ್ತಾಯಗೊಳ್ಳಲಿದೆ. ಈ ಮೂಲಕ ಶಬರಿಮಲೆಯಲ್ಲಿ ಆದಾಯ ಸಂಗ್ರಹವು 200 ಕೋಟಿ ರೂ.ಗಳನ್ನು ದಾಟಿದೆ.

ಅಯ್ಯಪ್ಪ ದೇಗುಲದ ಉಸ್ತುವಾರಿ ನೋಡಿಕೊಳ್ಳುವ ತಿರುವಾಂಕೂರು ದೇವಸ್ವಂ ಬೋರ್ಡ್ (ಟಿಡಿಬಿ) ಡಿಸೆಂಬರ್ 25 ರವರೆಗೆ ಕಳೆದ 39 ದಿನಗಳಲ್ಲಿ ದೇವಸ್ಥಾನಕ್ಕೆ 204.30 ಕೋಟಿ ಆದಾಯ ಬಂದಿದೆ ಎಂದು ಮಂಗಳವಾರ ತಿಳಿಸಿದೆ.

ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಟಿಡಿಬಿ ಅಧ್ಯಕ್ಷ ಪಿಎಸ್ ಪ್ರಶಾಂತ್, ಯಾತ್ರಾರ್ಥಿಗಳು ಕಾಣಿಕೆ ಎಂದು ಅರ್ಪಿಸುವ ನಾಣ್ಯಗಳನ್ನು ಎಣಿಸಿದ ನಂತರ ಆದಾಯದ ಮೊತ್ತವು ಹೆಚ್ಚಾಗುತ್ತದೆ.

ಒಟ್ಟು 204.30 ಕೋಟಿ ರೂ. ಆದಾಯದಲ್ಲಿ 63.89 ಕೋಟಿ ರೂ.ಗಳನ್ನು ಭಕ್ತರು 'ಕಾಣಿಕೆ'ಯಾಗಿ ಅರ್ಪಿಸಿದ್ದಾರೆ ಮತ್ತು 'ಅರವಣ' (ಪ್ರಸಾದ) ಮಾರಾಟದ ಮೂಲಕ 96.32 ಕೋಟಿ ರೂ. ಗಳಿಸಲಾಗಿದೆ ಎಂದು ಅವರು ಹೇಳಿದರು.

ಯಾತ್ರಾರ್ಥಿಗಳಿಗೆ ಮಾರಾಟವಾದ ಮತ್ತೊಂದು ಪ್ರಸಾದವಾದ 'ಅಪ್ಪಂ'ನಿಂದ 12.38 ಕೋಟಿ ರೂ. ಆದಾಯ ಲಭ್ಯವಾಗಿದೆ ಎಂದು ಅವರು ಹೇಳಿದರು.

ಈಗ ನಡೆಯುತ್ತಿರುವ ವಾರ್ಷಿಕ ಯಾತ್ರಾ ಋತುವಿನಲ್ಲಿ ಭಾರಿ ಜನದಟ್ಟಣೆ ಕಂಡುಬಂದಿದ್ದು, ಈ ಋತುವಿನಲ್ಲಿ ಡಿಸೆಂಬರ್ 25 ರವರೆಗೆ ಶಬರಿಮಲೆಗೆ 31,43,163 ಭಕ್ತರು ಭೇಟಿ ನೀಡಿ ಪ್ರಾರ್ಥನೆ ಸಲ್ಲಿಸಿದ್ದಾರೆ ಎಂದು ಹೇಳಿದರು.

ಟಿಡಿಬಿ ತನ್ನ ಮಿತಿಗಳ ಹೊರತಾಗಿಯೂ ಯಾತ್ರಾರ್ಥಿಗಳಿಗೆ ಉತ್ತಮ ಸೌಲಭ್ಯಗಳನ್ನು ನೀಡುತ್ತಿದೆ ಎಂದು ಹೇಳಿದ ಪ್ರಶಾಂತ್, ಮಂಡಳಿಯು ತನ್ನ 'ಅನ್ನದಾನ ಮಂಡಲಂ' ಮೂಲಕ ಡಿಸೆಂಬರ್ 25 ರವರೆಗೆ 7,25,049 ಜನರಿಗೆ ಉಚಿತ ಆಹಾರವನ್ನು ನೀಡಿದೆ ಎಂದು ಹೇಳಿದರು.

ಮಂಡಲ ಪೂಜೆಯ ನಂತರ ದೇಗುಲವನ್ನು ಬುಧವಾರ ರಾತ್ರಿ 11 ಗಂಟೆಗೆ ಮುಚ್ಚಲಾಗುವುದು ಮತ್ತು ಡಿಸೆಂಬರ್ 30 ರಂದು ಮಕರವಿಳಕ್ಕು ಆಚರಣೆಗಾಗಿ ಮತ್ತೆ ತೆರೆಯಲಾಗುವುದು. ಶಬರಿಮಲೆ ದೇಗುಲ ಜನವರಿ 15 ರಂದು ಮಕರವಿಳಕ್ಕು ಆಚರಣೆಗೆ ಸಾಕ್ಷಿಯಾಗಲಿದೆ ಎಂದು ಪ್ರಶಾಂತ್ ತಿಳಿಸಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.