ಜನ ಎಂದಾದರೂ ಮಹಾತ್ಮ ಗಾಂಧಿಯ ಜಾತಿ ಕೇಳಿದ್ದಾರೆಯೇ?: ಧನಕರ್ ವಿರುದ್ಧ ಚಿದಂಬರಂ ವಾಗ್ದಾಳಿ
ಸಂಸತ್ತಿನಲ್ಲಿ ಗಂಭೀರ ಚರ್ಚೆ ನಡೆಯುತ್ತಿರುವ ಸಂದರ್ಭದಲ್ಲಿ ಜಾತಿಯನ್ನು ಪ್ರಸ್ತಾಪಿಸುತ್ತಿರುವುದು ನಿರಾಶಾದಾಯಕ ಎಂದ ಕಾಂಗ್ರೆಸ್‌ನ ಹಿರಿಯ ನಾಯಕ ಪಿ ಚಿದಂಬರಂ ಅವರು, 21ನೇ ಶತಮಾನದಲ್ಲಿ ಈ "ಸಂಕುಚಿತ ಮನೋಭಾವ"ಗಳನ್ನು ಮೀರಿ...

ನವದೆಹಲಿ: ಸಂಸತ್ತಿನಲ್ಲಿ ಗಂಭೀರ ಚರ್ಚೆ ನಡೆಯುತ್ತಿರುವ ಸಂದರ್ಭದಲ್ಲಿ ಜಾತಿಯನ್ನು ಪ್ರಸ್ತಾಪಿಸುತ್ತಿರುವುದು ನಿರಾಶಾದಾಯಕ ಎಂದ ಕಾಂಗ್ರೆಸ್‌ನ ಹಿರಿಯ ನಾಯಕ ಪಿ ಚಿದಂಬರಂ ಅವರು, 21ನೇ ಶತಮಾನದಲ್ಲಿ ಈ "ಸಂಕುಚಿತ ಮನೋಭಾವ"ಗಳನ್ನು ಮೀರಿ ನಡೆಯುವಂತೆ ಜನರಿಗೆ ಕರೆ ನೀಡಿದ್ದಾರೆ.
ಸಂಸದರ ಅಮಾನತು ವಿರೋಧಿಸಿ ಟಿಎಂಸಿ ಸಂಸದ ಕಲ್ಯಾಣ್ ಬ್ಯಾನರ್ಜಿ ಅವರು ತಮ್ಮನ್ನು ಅಪಹಾಸ್ಯ ಮಾಡಿದ ಬಗ್ಗೆ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದ ಉಪರಾಷ್ಟ್ರಪತಿ ಜಗದೀಪ್ ಧನಕರ್ ಅವರು, ತಾವು ಜಾಟ್(ಅವರ ಜಾತಿ) ಎಂಬ ಕಾರಣಕ್ಕೆ ಅವಮಾನ ಮಾಡಲಾಗುತ್ತಿದೆ ಎಂದಿದ್ದರು.
ಸಂಸತ್ತಿನಲ್ಲಿ ಮಹತ್ವದ ವಿಷಯದ ಬಗ್ಗೆ ಚರ್ಚೆ ನಡೆಯುತ್ತಿದ್ದ ವೇಳೆ ‘ಜಾತಿ’ಯನ್ನು ಪ್ರಸ್ತಾಪಿಸಿರುವುದು ತೀವ್ರ ನಿರಾಶಾದಾಯಕ. ಮತ್ತೊಬ್ಬ ವ್ಯಕ್ತಿಯನ್ನು ಟೀಕಿಸಲು ತಮ್ಮ ‘ಹುಟ್ಟಿದ ಸ್ಥಳ’ವನ್ನು ಬಳಸಿರುವುದು ಖಂಡನೀಯ ಎಂದು ಚಿದಂಬರಂ ಅವರು X ನಲ್ಲಿ ಪೋಸ್ಟ್ ಮಾಡಿದ್ದಾರೆ.
"ಮಹಾತ್ಮ ಗಾಂಧಿ ಅಥವಾ ಸರ್ದಾರ್ ವಲ್ಲಭಭಾಯಿ ಪಟೇಲ್ ಅವರ ಜಾತಿ ಅಥವಾ ಸಿ.ಎಫ್. ಆಂಡ್ರ್ಯೂಸ್ ಅಥವಾ ಆನಿ ಬೆಸೆಂಟ್ ಅವರ ಜನ್ಮಸ್ಥಳದ ಬಗ್ಗೆ ಯಾರಾದರೂ ಕೇಳಿದರೆ ಬಗ್ಗೆ ನನಗೆ ನೆನಪಿಲ್ಲ. ಈ ಸಂಕುಚಿತ ಮನೋಭಾವವನ್ನು ಮೀರಿ 21ನೇ ಶತಮಾನದಲ್ಲಿ ನಾವು ಮಾನವೀಯತೆಯ ಮಾನದಂಡಗಳು ಮತ್ತು ಮೌಲ್ಯಗಳನ್ನು ಅಳವಡಿಸಿಕೊಳ್ಳಬಹುದೇ? ಎಂದು ಮಾಜಿ ಕೇಂದ್ರ ಸಚಿವ ಟ್ವೀಟ್ ಮಾಡಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


