ಸಂಸತ್ತು, ಉಪ ರಾಷ್ಟ್ರಪತಿಗಳ ಹುದ್ದೆಗೆ ಮಾಡಿದ ಅವಮಾನವನ್ನು ಸಹಿಸಲು ಸಾಧ್ಯವಿಲ್ಲ: 'ಮಿಮಿಕ್ರಿ' ಬಗ್ಗೆ ಸಭಾಪತಿ ಧನ್ಕರ್ ಖೇದ
ಸಭಾಪತಿ ಅವರನ್ನು ಅನುಕರಿಸುವ ಕ್ರಮ ಮತ್ತು ಅದರ ವೀಡಿಯೋಗ್ರಫಿಯು ಉಪರಾಷ್ಟ್ರಪತಿಗಳ ಸ್ಥಾನಕ್ಕೆ, ದೇಶದ ರೈತರು ಮತ್ತು ಜಾಟ್ ಸಮುದಾಯಕ್ಕೆ ಅವಮಾನ ಉಂಟುಮಾಡಿದೆ ಎಂದು ರಾಜ್ಯಸಭಾ ಸಭಾಪತಿ ಜಗದೀಪ್ ಧನ್ ಕರ್ ಬುಧವಾರ ಹೇಳಿದ್ದಾರೆ.

ನವದೆಹಲಿ: ಟಿಎಂಸಿ ಸಂಸದ ಕಲ್ಯಾಣ್ ಬ್ಯಾನರ್ಜಿ ಸಂಸತ್ತಿನ ಆವರಣದಲ್ಲಿ ತಮ್ಮನ್ನು ಅಪಹಾಸ್ಯ ಮಾಡಿ ಅಣಕಿಸಿದಾಗ ಅಲ್ಲಿದ್ದ ಉಳಿದ ಸದಸ್ಯರು ನಕ್ಕ ಘಟನೆ ತಮ್ಮ ಮನಸ್ಸಿಗೆ ತೀವ್ರ ನೋವುಂಟುಮಾಡಿದ್ದು ಸಂಸತ್ತು ಮತ್ತು ಸಾಂವಿಧಾನಿಕ ಹುದ್ದೆ ಉಪ ರಾಷ್ಟ್ರಪತಿ ಹಾಗೂ ರಾಜ್ಯಸಭಾ ಸಭಾಪತಿ ಸ್ಥಾನಕ್ಕೆ ಇಂತಹ ಅವಮಾನವಾದ ಘಟನೆಯನ್ನು ಸಹಿಸುವುದಿಲ್ಲ ಎಂದು ರಾಜ್ಯಸಭಾ ಸಭಾಪತಿ ಜಗದೀಪ್ ಧನ್ ಕರ್ ಬುಧವಾರ ಹೇಳಿದ್ದಾರೆ.
ಸಭಾಪತಿ ಅವರನ್ನು ಅನುಕರಿಸುವ ಕ್ರಮ ಮತ್ತು ಅದರ ವೀಡಿಯೋಗ್ರಫಿಯು ಉಪರಾಷ್ಟ್ರಪತಿಗಳ ಸ್ಥಾನಕ್ಕೆ, ದೇಶದ ರೈತರು ಮತ್ತು ಜಾಟ್ ಸಮುದಾಯಕ್ಕೆ ಅವಮಾನ ಉಂಟುಮಾಡಿದೆ ಎಂದು ರಾಜ್ಯಸಭೆಯಲ್ಲಿಂದು ಹೇಳಿದ್ದಾರೆ.
ಮೂರನೇ ಬಾರಿಗೆ ಸದನವನ್ನು ಮುಂದೂಡಿದ ನಂತರ 11.45 ಕ್ಕೆ ಸಭೆ ಸೇರಿದಾಗ, ನಿನ್ನೆಯ ಘಟನೆಯ ಬಗ್ಗೆ ಧಂಖರ್ ಅವರು ತಮ್ಮ ವೇದನೆಯನ್ನು ವ್ಯಕ್ತಪಡಿಸಿದರು. ಪ್ರತಿಪಕ್ಷ ನಾಯಕ ಮಲ್ಲಿಕಾರ್ಜುನ ಖರ್ಗೆ ಸೇರಿದಂತೆ ಕಾಂಗ್ರೆಸ್ ಪಕ್ಷದವರು ಈ ಕೃತ್ಯದ ಬಗ್ಗೆ ಆಲೋಚನೆ ಮಾಡಬೇಕೆಂದರು.
ಜಗದೀಪ್ ಧಂಖರ್ ಅವರನ್ನು ಯಾರಾದರೂ ಅವಮಾನಿಸಿದರೆ ನಾನು ತಲೆಕೆಡಿಸಿಕೊಳ್ಳುವುದಿಲ್ಲ ಆದರೆ ನನ್ನ ಹುದ್ದೆಗೆ ಅವಮಾನ ಮಾಡಿರುವುದನ್ನು ಸಹಿಸಲು ಸಾಧ್ಯವಿಲ್ಲ. ಸದನದ ಗೌರವವನ್ನು ಕಾಪಾಡುವುದು ನನ್ನ ಕರ್ತವ್ಯ ಎಂದು ಧಂಖರ್ ಹೇಳಿದರು. ಇದೊಂದು ದೊಡ್ಡ ಘಟನೆ ನಡೆದಿದೆ. ಹುದ್ದೆಗೆ ಅಗೌರವ, ರೈತ ಸಮುದಾಯಕ್ಕೆ ಅವಮಾನ ಮಾಡಲಾಗಿದೆ. ನನ್ನ ಸಮುದಾಯಕ್ಕೆ ಅವಮಾನ ಮಾಡಿದ್ದೀರಿ ಎಂದು ಸದನದ ಕಲಾಪವನ್ನು ಮತ್ತೆ ಸುಮಾರು 15 ನಿಮಿಷಗಳ ಕಾಲ ಮುಂದೂಡಿದರು.
ಇದಕ್ಕೂ ಮುನ್ನ ರಾಜ್ಯಸಭೆಯ ಕಲಾಪವನ್ನು ಮೂರು ಬಾರಿ ಮುಂದೂಡಲಾಗಿತ್ತು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


