ದೇಶ

ಲೋಕಸಭೆಯಲ್ಲಿ ಭಾರೀ ಭದ್ರತಾ ವೈಫಲ್ಯ: ಸಂಸದರ ಸಭೆ ಕರೆದ ಲೋಕಸಭಾಧ್ಯಕ್ಷ

ಲೋಕಸಭೆಯ ಸ್ಪೀಕರ್ ಓಂ ಬಿರ್ಲಾ ಅವರು ಸದನದಲ್ಲಿ ಭದ್ರತಾ ಲೋಪವನ್ನು ಕೂಲಂಕಷವಾಗಿ ಪರಿಶೀಲಿಸಲಾಗುತ್ತಿದೆ. ಈ ವಿಷಯದ ತಮ್ಮ ಆತಂಕ, ವಿಚಾರಗಳನ್ನು ತಿಳಿಸಲು ಇಂದು ಸಾಯಂಕಾಲ ಎಲ್ಲಾ ಪಕ್ಷಗಳ ಸಂಸದರ ಸಭೆಯನ್ನು ಕರೆಯಲಾಗಿದೆ ಎಂದು ತಿಳಿಸಿದ್ದಾರೆ.

ಲೋಕಸಭೆಯಲ್ಲಿ ಭಾರೀ ಭದ್ರತಾ ವೈಫಲ್ಯ: ಸಂಸದರ ಸಭೆ ಕರೆದ ಲೋಕಸಭಾಧ್ಯಕ್ಷ
ಲೋಕಸಭೆಯಲ್ಲಿ ಆಶ್ರುವಾಯು ಸಿಡಿಸಿದ ನಂತರದ ದೃಶ್ಯ
Published On :

ನವದೆಹಲಿ: ಲೋಕಸಭೆಯ ಸ್ಪೀಕರ್ ಓಂ ಬಿರ್ಲಾ ಅವರು ಸದನದಲ್ಲಿ ಭದ್ರತಾ ಲೋಪವನ್ನು ಕೂಲಂಕಷವಾಗಿ ಪರಿಶೀಲಿಸಲಾಗುತ್ತಿದೆ. ಈ ವಿಷಯದ ತಮ್ಮ ಆತಂಕ, ವಿಚಾರಗಳನ್ನು ತಿಳಿಸಲು ಇಂದು ಸಾಯಂಕಾಲ ಎಲ್ಲಾ ಪಕ್ಷಗಳ ಸಂಸದರ ಸಭೆಯನ್ನು ಕರೆಯಲಾಗಿದೆ ಎಂದು ತಿಳಿಸಿದ್ದಾರೆ. 

ಲೋಕಸಭೆಯಲ್ಲಿ ಭಾರೀ ಭದ್ರತಾ ವೈಫಲ್ಯವಾಗುತ್ತಿದ್ದಂತೆ ಸದನವು ಮಧ್ಯಾಹ್ನ 2 ಗಂಟೆಗೆ ಸೇರುತ್ತಿದ್ದಂತೆ, ಇತ್ತೀಚೆಗೆ ನಿಯೋಜಿತ ಭಯೋತ್ಪಾದಕ ಗುರುಪತ್‌ವಂತ್ ಸಿಂಗ್ ಪನ್ನು ಬಿಡುಗಡೆ ಮಾಡಿದ ಬೆದರಿಕೆ ವಿಡಿಯೋ ಸೇರಿದಂತೆ ವಿವಿಧ ನಾಯಕರು ಎತ್ತಿರುವ ಕಳವಳಗಳ ನಡುವೆ, ಸ್ಪೀಕರ್ ಬಿರ್ಲಾ ಅವರು ಈ ವಿಷಯವನ್ನು ಸದನದಲ್ಲಿ ಚರ್ಚಿಸುವುದು ಸರಿಯಲ್ಲ, ಸಭೆ ಕರೆದು ಅಲ್ಲಿ ಪ್ರಸ್ತಾಪಿಸೋಣ ಎಂದರು. 

ಸಂಸತ್ತಿನ ಭಯೋತ್ಪಾದನಾ ದಾಳಿಯ 22 ನೇ ವಾರ್ಷಿಕೋತ್ಸವದಂದು ಇಂದು ಈ ಘಟನೆ ನಡೆದಿದ್ದು,  ಪ್ರಮುಖ ಭದ್ರತಾ ಉಲ್ಲಂಘನೆಯಲ್ಲಿ, ಶೂನ್ಯ ವೇಳೆಯಲ್ಲಿ ಇಬ್ಬರು ಒಳನುಗ್ಗಿ ಸಾರ್ವಜನಿಕ ಗ್ಯಾಲರಿಯಿಂದ ಲೋಕಸಭೆಯ ಚೇಂಬರ್‌ಗೆ ಜಿಗಿದರು. ಡಬ್ಬಿಗಳಿಂದ ಹಳದಿ ಅನಿಲವನ್ನು ಸೂಸುತ್ತಾ ಧಿಕ್ಕಾರ, ಘೋಷಣೆ ಕೂಗಿದರು.

ಅದೇ ಸಮಯದಲ್ಲಿ, ಒಬ್ಬ ಮಹಿಳೆ ಸೇರಿದಂತೆ ಇಬ್ಬರು ವ್ಯಕ್ತಿಗಳು ಸಂಸತ್ತಿನ ಆವರಣದ ಹೊರಗೆ ಘೋಷಣೆಗಳನ್ನು ಕೂಗುತ್ತಾ ಡಬ್ಬಿಗಳಿಂದ ಹಳದಿ ಬಣ್ಣದ ಅನಿಲವನ್ನು ಎರಚಿದರು. ಘಟನೆಗೆ ಸಂಬಂಧಿಸಿದಂತೆ ನಾಲ್ವರನ್ನು ಬಂಧಿಸಲಾಗಿದೆ ಎಂದು ಲೋಕಸಭಾಧ್ಯಕ್ಷ ಬಿರ್ಲಾ ಸದನಕ್ಕೆ ತಿಳಿಸಿದರು.

ಲೋಕಸಭೆಯು ತನಿಖೆ ನಡೆಸುತ್ತಿದೆ. ದೆಹಲಿ ಪೊಲೀಸರಿಗೂ ಈ ಬಗ್ಗೆ ಸೂಚನೆ ನೀಡಲಾಗಿದೆ ಎಂದು ಅವರು ಹೇಳಿದರು. ಒಳನುಗ್ಗುವವರು ಬಿಡುಗಡೆ ಮಾಡಿದ ಹೊಗೆಯು ಆರಂಭಿಕ ತನಿಖೆಯಲ್ಲಿ ನಿರುಪದ್ರವವಾಗಿ ಕಂಡುಬಂದಿದೆ ಎಂದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.