Rape: ಚಲಿಸುತ್ತಿದ್ದ ರೈಲಿನಲ್ಲಿಯೇ 30 ವರ್ಷದ ಯುವತಿ ಮೇಲೆ ಅತ್ಯಾಚಾರ
ಮಧ್ಯಪ್ರದೇಶದಲ್ಲಿ ಚಲಿಸುತ್ತಿದ್ದ ರೈಲಿನಲ್ಲಿಯೇ 30 ವರ್ಷದ ಯುವತಿ ಮೇಲೆ ಅತ್ಯಾಚಾರ ಮಾಡಿರುವ ಘಟನೆ ಮಂಗಳವಾರ ವರದಿಯಾಗಿದೆ.

ಸಾತ್ನಾ: ಮಧ್ಯಪ್ರದೇಶದಲ್ಲಿ ಚಲಿಸುತ್ತಿದ್ದ ರೈಲಿನಲ್ಲಿಯೇ 30 ವರ್ಷದ ಯುವತಿ ಮೇಲೆ ಅತ್ಯಾಚಾರ ಮಾಡಿರುವ ಘಟನೆ ಮಂಗಳವಾರ ವರದಿಯಾಗಿದೆ.
ಮಧ್ಯಪ್ರದೇಶದ ಸಾತ್ನಾ ಜಿಲ್ಲೆಯ ಕಟ್ನಿಯಲ್ಲಿ ಈ ಘಟನೆ ನಡೆದಿದ್ದು, ಚಲಿಸುತ್ತದ್ದ ಮೆಮು ರೈಲಿನಲ್ಲಿ 30 ವರ್ಷದ ಯುವತಿ ಮೇಲೆ ಅತ್ಯಾಚಾರ ಎಸಗಲಾಗಿದೆ ಎಂದು ಸರ್ಕಾರಿ ರೈಲ್ವೆ ಪೊಲೀಸ್ (ಜಿಆರ್ಪಿ ) ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಭಾನುವಾರ ಸಂಜೆ ಸತ್ನಾ ಮತ್ತು ಕಟ್ನಿ ವಿಭಾಗಗಳ ನಡುವಿನ ಪಕಾರಿಯಾ ನಿಲ್ದಾಣದಲ್ಲಿ ಮಹಿಳೆ ಜಬಲ್ಪುರ್-ರೇವಾ ಮೆಮು ರೈಲನ್ನು ಹತ್ತಿದ್ದರು. ಮಾರ್ಗ ಮಧ್ಯದಲ್ಲಿ ಆರೋಪಿಯು ಅತ್ಯಾಚಾರ ಮಾಡಿದ್ದ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಘಟನೆಗೆ ಸಂಬಂಧಿಸಿದಂತೆ ಬಾಂಡಾ (ಉತ್ತರ ಪ್ರದೇಶ) ನಿವಾಸಿ ಪಂಕಜ್ ಕುಶ್ವಾಹ (23) ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ. ಸತ್ನಾ ಜಿಆರ್ಪಿ ಠಾಣೆಯ ಉಸ್ತುವಾರಿ ಎಲ್ ಪಿ ಕಶ್ಯಪ್ ಆರೋಪಿಯ ಬಂಧನ ಮಾಹಿತಿ ನೀಡಿದ್ದು, ಪಂಕಜ್ ಯುವತಿಯನ್ನು ರೈಲಿನ ಶೌಚಾಲಯದಲ್ಲಿ ಅತ್ಯಾಚಾರ ಮಾಡಿದ್ದ. ಅತ್ಯಾಚಾರದ ಬಳಿಕ ತಪ್ಪಿಸಿಕೊಂಡು ಹೊರಗೆ ಬಂದಿದ್ದ ಆಕೆ ಸತ್ನಾ ನಿಲ್ದಾಣದ ಜಿಆರ್ಪಿಗೆ ಮಾಹಿತಿ ನೀಡಿದ್ದಳು. ನಂತರ ವ್ಯಕ್ತಿಯನ್ನು ಬಂಧಿಸಲು ತಂಡವನ್ನು ಕಳುಹಿಸಲಾಯಿತು ಎಂದು ಅವರು ಹೇಳಿದರು.
ಯುವತಿ ದೂರು ನೀಡುತ್ತಿದ್ದಂತೆ ಬೆದರಿದ ಅರೋಪಿ ರೈಲಿನ ಶೌಚಾಲಯದಲ್ಲಿಯೇ ಬಾಗಿಲು ಹಾಕಿ ಬಚ್ಚಿಟ್ಟುಕೊಂಡಿದ್ದ. ರೈಲು ರೇವಾ ತಲುಪಿದಾಗ ಅಧಿಕಾರಿಗಳು ಶೌಚಾಲಯದ ಬೀಗ ಮುರಿದು ಆತನನ್ನು ಬಂಧಿಸಿದ್ದಾರೆ. ಆರೋಪಿಗಳ ಕ್ರಿಮಿನಲ್ ದಾಖಲೆಯ ಬಗ್ಗೆ ತನಿಖೆ ನಡೆಸಲಾಗುತ್ತಿದೆ ಎಂದು ಉಪ ಪೊಲೀಸ್ ವರಿಷ್ಠಾಧಿಕಾರಿ (ಡಿಎಸ್ಪಿ) ಸಾರಿಕಾ ಪಾಂಡೆ ಹೇಳಿದ್ದಾರೆ.
ಹೇಗಾಯ್ತು ಘಟನೆ
ಪ್ಯಾಸೆಂಜರ್ ರೈಲಿನಲ್ಲಿ ಪ್ರಯಾಣಿಸುತ್ತಿದ್ದ ಯುವತಿ ಪಕಾರಿಯ ರೈಲು ನಿಲ್ದಾಣದಲ್ಲಿ ಪಕ್ಕದಲ್ಲಿ ನಿಂತಿದ್ದ ವಿಶೇಷ ರೈಲಿನ ಒಳಗೆ ಶೌಚಕ್ಕಾಗಿ ಹೋಗಿದ್ದರು. ಆಕೆಯನ್ನು ಹಿಂಬಾಲಿಸಿಕೊಂಡು ಬಂದ ಕಮಲೇಶ್ ನಿರ್ಜನವಾಗಿದ್ದ ಎಸಿ ಕೋಚ್ ಬಾಗಿಲು ಹಾಕಿ ಅತ್ಯಾಚಾರವೆಸಗಿದ್ದಾನೆ. 40 ಕಿಲೋಮೀಟರ್ ವರೆಗೂ ರೈಲು ಚಲಿಸಿದ್ದು, ಸತ್ನಾ ನಿಲ್ದಾಣದಲ್ಲಿ ನಿಂತಾಗ ಯುವತಿ ರೈಲಿನಿಂದ ಹಾರಿ ರೈಲ್ವೆ ಪೊಲೀಸ್ ಠಾಣೆಗೆ ತೆರಳಿ ವಿಷಯವನ್ನು ವಿವರಿಸಿದ್ದಾರೆ. ಕೂಡಲೇ ರೈಲ್ವೆ ಪೊಲೀಸ್ ಒಬ್ಬರು ವಿಶೇಷ ರೈಲಿನ ಎಸಿ ಕೋಚ್ ಏರಿದ್ದು, ಈ ಸಂದರ್ಭದಲ್ಲಿ ಕಮಲೇಶ್, ಬಾಗಿಲು ಹಾಕಿಕೊಂಡು ಅಡಗಿ ಕುಳಿತಿದ್ದಾನೆ. ಅಷ್ಟರೊಳಗೆ ಇತರೆ ನಿಲ್ದಾಣಗಳ ರೈಲ್ವೆ ಪೊಲೀಸರಿಗೂ ಮಾಹಿತಿ ತಲುಪಿದ್ದು, ಅಂತಿಮವಾಗಿ ಎಸಿ ಕೋಚ್ ಬಾಗಿಲು ಮುರಿದು ಆರೋಪಿಯನ್ನು ಬಂಧಿಸಲಾಗಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


