ರಾಜ್ಯಸಭೆ: ರಷ್ಯಾ ತೈಲ ಆಮದು ವಿಚಾರ, ಟಿಎಂಸಿ ಸಂಸದ, ಕೇಂದ್ರ ಸಚಿವ ಪುರಿ ನಡುವೆ ಮಾತಿನ ಚಕಮಕಿ
ಜವಾಹರ್ ಸಿರ್ಕಾರ್ ಮತ್ತು ಕೇಂದ್ರ ಸಚಿವ ಹರ್ದೀಪ್ ಸಿಂಗ್ ಪುರಿ ನಡುವೆ ಸೋಮವಾರ ರಾಜ್ಯಸಭೆಯಲ್ಲಿ ತೀವ್ರ ಮಾತಿನ ಚಕಮಕಿ ನಡೆಯಿತು. ಆಗ ಮಧ್ಯ ಪ್ರವೇಶಿಸಿದ ಸಭಾಪತಿ, ಈ ಹಿಂದೆ ಈ ವಿಷಯದ ಬಗ್ಗೆ ಸದಸ್ಯರ ನಡುವೆ ವಿನಿಮಯವಾದ ಪತ್ರಗಳನ್ನು ಮಂಡಿಸಲು ಸದಸ್ಯರಿಗೆ ಸೂಚಿಸಿದರು.

ನವದೆಹಲಿ: ಉಕ್ರೇನ್ ಸಂಘರ್ಷದ ನಡುವೆ ರಷ್ಯಾದ ಅಗ್ಗದ ಕಚ್ಚಾ ತೈಲ ಆಮದು ಮಾಡಿಕೊಳ್ಳುವುದರಿಂದ ಖಾಸಗಿ ತೈಲ ಕಂಪನಿಗಳು ಎಷ್ಟು ಲಾಭ ಗಳಿಸಿವೆ ಎಂದು ಕೇಳಿದ ನಂತರ ಜವಾಹರ್ ಸಿರ್ಕಾರ್ ಮತ್ತು ಕೇಂದ್ರ ಸಚಿವ ಹರ್ದೀಪ್ ಸಿಂಗ್ ಪುರಿ ನಡುವೆ ಸೋಮವಾರ ರಾಜ್ಯಸಭೆಯಲ್ಲಿ ತೀವ್ರ ಮಾತಿನ ಚಕಮಕಿ ನಡೆಯಿತು. ಆಗ ಮಧ್ಯ ಪ್ರವೇಶಿಸಿದ ಸಭಾಪತಿ, ಈ ಹಿಂದೆ ಈ ವಿಷಯದ ಬಗ್ಗೆ ಸದಸ್ಯರ ನಡುವೆ ವಿನಿಮಯವಾದ ಪತ್ರಗಳನ್ನು ಮಂಡಿಸಲು ಸದಸ್ಯರಿಗೆ ಸೂಚಿಸಿದರು.
ಪ್ರಶ್ನೋತ್ತರ ಅವಧಿಯಲ್ಲಿ, ಅಗ್ಗದ ರಷ್ಯಾದ ತೈಲವನ್ನು ಆಮದು ಮಾಡಿಕೊಳ್ಳುವುದರಿಂದ ಎರಡು ಖಾಸಗಿ ತೈಲ ಕಂಪನಿಗಳು ಎಷ್ಟು ಲಾಭ ಗಳಿಸಿವೆ ಎಂದು ಸರ್ಕಾರ್ ಕೇಳಿದರು. ಇದಕ್ಕೆ ಉತ್ತರಿಸಿದ ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವ ಪುರಿ, ಟಿಎಂಸಿ ಸಂಸದರು ತಮಗೆ ಹಲವಾರು ಪತ್ರಗಳನ್ನು ಬರೆದಿದ್ದಾರೆ ಮತ್ತು ಪ್ರತಿ ಪತ್ರದಲ್ಲಿ ಅವರು ಅದೇ ಪ್ರಶ್ನೆಯನ್ನು ಕೇಳಿದ್ದಾರೆ ಎಂದು ಹೇಳಿದರು.
ಸಿರ್ಕಾರ್ ಅವರ ಪ್ರತಿಯೊಂದು ಪ್ರಶ್ನೆಗೆ ಉತ್ತರಿಸುತ್ತಿದ್ದೇನೆ ಮತ್ತು ಅವರೊಂದಿಗಿನ ಪತ್ರ ವಿನಿಮಯದ ದಾಖಲೆಯನ್ನು ಸಾರ್ವಜನಿಕಗೊಳಿಸಲು ಸಿದ್ಧನಾಗಿದ್ದೇನೆ ಎಂದು ಪುರಿ ಹೇಳಿದರು. ಇದು ಆಡಳಿತ ಮತ್ತು ಪ್ರತಿಪಕ್ಷದ ಸದಸ್ಯರ ನಡುವೆ ಮಾತಿನ ಚಕಮಕಿಗೆ ಕಾರಣವಾಯಿತು. ಇಬ್ಬರ ನಡುವಿನ ದಾಖಲೆಯನ್ನು ಸದನದಲ್ಲಿ ಮಂಡಿಸುವಂತೆ ಸಭಾಪತಿ ಜಗದೀಪ್ ಧನಕರ್ ಹೇಳಿದರು.
ಸಾರ್ವಜನಿಕ ವಲಯದ ತೈಲ ಕಂಪನಿಗಳು ದೀರ್ಘಾವಧಿಯ ಒಪ್ಪಂದಗಳಿಗೆ ಬದ್ಧವಾಗಿರುವುದರಿಂದ ರಷ್ಯಾದಿಂದ ಅಗ್ಗದ ತೈಲದ ಲಾಭವನ್ನು ಪಡೆಯಲು ಸಾಧ್ಯವಾಗಿಲ್ಲ. ಆದರೆ ಎರಡು ಖಾಸಗಿ ತೈಲ ಕಂಪನಿಗಳು ಅಗ್ಗದ ಬೆಲೆಗೆ ತೈಲವನ್ನು ಖರೀದಿಸುವ ಮೂಲಕ ಭಾರೀ ಲಾಭ ಗಳಿಸಿವೆ ಎಂದು ಸಿರ್ಕಾರ್ ಆರೋಪಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


