ಮೂರು ರಾಜ್ಯಗಳಲ್ಲಿ ಬಿಜೆಪಿ ಗೆಲುವು: ಇವಿಎಂ ಬೇಡ, ಬ್ಯಾಲೆಟ್ ಬೇಕು ಎಂದ ಅಖಿಲೇಶ್ ಯಾದವ್
ಸಮಾಜವಾದಿ ಪಕ್ಷದ ಮುಖ್ಯಸ್ಥ ಅಖಿಲೇಶ್ ಯಾದವ್ ಅವರು ಶನಿವಾರ ಬ್ಯಾಲೆಟ್ ಪೇಪರ್ ಪರವಾಗಿ ಬ್ಯಾಟಿಂಗ್ ಮಾಡಿದ್ದು, ನೇರವಾಗಿ ಇವಿಎಂಗಳನ್ನು ಹೆಸರಿಸದೆ "ಈ ಯಂತ್ರಗಳು" ಮತ್ತು ಈ ಚುನಾವಣಾ ಫಲಿತಾಂಶ ಜನರ ಮನಸ್ಸಿನಲ್ಲಿ...

ಲಖನೌ: ಸಮಾಜವಾದಿ ಪಕ್ಷದ ಮುಖ್ಯಸ್ಥ ಅಖಿಲೇಶ್ ಯಾದವ್ ಅವರು ಶನಿವಾರ ಬ್ಯಾಲೆಟ್ ಪೇಪರ್ ಪರವಾಗಿ ಬ್ಯಾಟಿಂಗ್ ಮಾಡಿದ್ದು, ನೇರವಾಗಿ ಇವಿಎಂಗಳನ್ನು ಹೆಸರಿಸದೆ "ಈ ಯಂತ್ರಗಳು" ಮತ್ತು ಈ ಚುನಾವಣಾ ಫಲಿತಾಂಶ ಜನರ ಮನಸ್ಸಿನಲ್ಲಿ ಅಪನಂಬಿಕೆಯ ಭಾವನೆಯನ್ನು ಸೃಷ್ಟಿಸಿವೆ ಎಂದು ಹೇಳಿದ್ದಾರೆ.
ಅಮೆರಿಕ ಚುನಾವಣೆಯ ಉದಾಹರಣೆಯನ್ನು ನೀಡಿದ ಯಾದವ್, ಭಾರತ, "ಬರ್ಗರ್, ಪಿಜ್ಜಾ ಮತ್ತು ಜೀನ್ಸ್" ಸೇರಿದಂತೆ ಎಲ್ಲಾ ವಿಚಾರದಲ್ಲೂ ಅಮೆರಿಕನ್ನರನ್ನು ಅನುಸರಿಸುತ್ತಿದೆ. ಹಾಗೆ ಅವರ ಬ್ಯಾಲೆಟ್ ಪೇಪರ್ ಬಳಕೆಯನ್ನು ಸಹ ಅನುಸರಿಸಬೇಕು ಎಂದು ಹೇಳಿದರು.
ಬಿಜೆಪಿ ನಾಯಕ ಸುಬ್ರಮಣಿಯನ್ ಸ್ವಾಮಿ ಸೇರಿದಂತೆ ಇತರ ಹಲವು ನಾಯಕರು, ಡೇಟಾ ದುರ್ಬಳಕೆ ಮತ್ತು ತಿರುಚುವಿಕೆ ಸಾಧ್ಯತೆ ಇರುವುದರಿಂದ ಎಲೆಕ್ಟ್ರಾನಿಕ್ ಯಂತ್ರಗಳನ್ನು ಬಳಸಬಾರದು. ಹಲವು ದೇಶಗಳಲ್ಲಿ ಇವಿಎಂ ಬಳಸುತ್ತಿಲ್ಲ ಎಂದು ಹೇಳಿದ್ದಾರೆ.
ಎಕ್ಸಿಟ್ ಪೋಲ್‌ಗಳು ಪ್ರತಿಪಕ್ಷಗಳ ಗೆಲುವಿನ ಭವಿಷ್ಯ ನುಡಿದಿರುವ ಛತ್ತೀಸ್‌ಗಢದಂತಹ ರಾಜ್ಯಗಳಲ್ಲಿಯೂ ಸಹ ಬಿಜೆಪಿ ಚುನಾವಣೆಯನ್ನು ಗೆದ್ದ ನಂತರ ಇವಿಎಂ ಡೇಟಾದ ದುರ್ಬಳಕೆಯ ಪ್ರಶ್ನೆ ಮತ್ತೆ ಪ್ರಮುವಾಗಿ ಕಾಡುತ್ತಿದೆ.
ಆಡಳಿತಾರೂಢ ಬಿಜೆಪಿಯನ್ನು ಉಲ್ಲೇಖಿಸಿದ ಅಖಿಲೇಶ್ ಯಾದವ್ ಅವರು, ಆ ಪಕ್ಷ ಅಧಿಕಾರದಲ್ಲಿದೆ ಮತ್ತು ಫಲಿತಾಂಶವನ್ನು ಬದಲಿಸುವ ಶಕ್ತಿ ಸಹ ಇದೆ. ಬೇರೆಯವರು ಏನು ಹೇಳಿದರೂ ಅದನ್ನು ತಿರುಚುತ್ತಾರೆ ಎಂದು ಆರೋಪಿಸಿದರು.
ನಾವು ತಂತ್ರಜ್ಞಾನವನ್ನು ಅರ್ಥಮಾಡಿಕೊಳ್ಳುತ್ತೇವೆ ಎಂದು ನಾನು ಹಲವಾರು ಬಾರಿ ಹೇಳಿದ್ದೇನೆ ಮತ್ತು ನಾವು ತಂತ್ರಜ್ಞಾನದೊಂದಿಗೆ ಬೆಳೆದಿದ್ದೇವೆ ಎಂದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


