ಇದೇ ಮಾದರಿಯನ್ನು ಅನ್ವಯಿಸಿದರೆ ಬಿಜೆಪಿಯಲ್ಲಿ ಕೆಲವೇ ಕೆಲವು ಸಂಸದರು ಉಳಿಯುತ್ತಾರೆ: ಮಹುವಾ ಉಚ್ಚಾಟನೆ ಬಗ್ಗೆ ಅಖಿಲೇಶ್
ಇದೇ ಮಾದರಿಯ ಕ್ರಮ ಬೇರೆಯವರಿಗೂ ಅನ್ವಯಿಸುವುದಾದರೆ ಬಿಜೆಪಿಯಲ್ಲಿ ಕೆಲವೇ ಕೆಲವು ಸಂಸದರು ಉಳಿಯಲಿದ್ದಾರೆ ಅಷ್ಟೇ ಎಂದು ಹೇಳಿದ್ದಾರೆ.

ನವದೆಹಲಿ: ಸಮಾಜವಾದಿ ಪಕ್ಷದ ನಾಯಕ ಅಖಿಲೇಶ್ ಯಾದವ್ ಟಿಎಂಸಿ ಸಂಸದೆ ಮಹುವಾ ಮೊಯಿತ್ರಾ ಉಚ್ಚಾಟನೆ ಬಗ್ಗೆ ಪ್ರತಿಕ್ರಿಯೆ ನೀಡಿದ್ದು, ಇದೇ ಮಾದರಿಯ ಕ್ರಮ ಬೇರೆಯವರಿಗೂ ಅನ್ವಯಿಸುವುದಾದರೆ ಬಿಜೆಪಿಯಲ್ಲಿ ಕೆಲವೇ ಕೆಲವು ಸಂಸದರು ಉಳಿಯಲಿದ್ದಾರೆ ಅಷ್ಟೇ ಎಂದು ಹೇಳಿದ್ದಾರೆ.
ಆಡಳಿತಾರೂಢ ಪಕ್ಷಕ್ಕೂ ಇದೇ ಮಾದರಿಯ ಕ್ರಮ ಅನ್ವಯಿಸುವುದಾದರೆ, ಉಭಯ ಸದನಗಳಲ್ಲಿಯೂ ಕೆಲವೇ ಕೆಲವು ಬಿಜೆಪಿ ಸಂಸದರು ಉಳಿಯಲಿದ್ದಾರೆ ಎಂದು ಹೇಳಿದ್ದಾರೆ.
ತೃಣಮೂಲ ಕಾಂಗ್ರೆಸ್ ಸಂಸದೆ (TMC MP) ಮಹುವಾ ಮೊಯಿತ್ರಾ (Mahua Moitra) ವಿರುದ್ಧದ 'ಪ್ರಶ್ನೆಗಾಗಿ ಲಂಚ' ಪಡೆದ ಪ್ರಕರಣದ ಕುರಿತು ಸದನ ನೈತಿಕ ಸಮಿತಿಯು ತಯಾರಿಸಿರುವ ವರದಿಯನ್ನು ಲೋಕಸಭೆಯಲ್ಲಿ ಮಂಡಿಸಿದ ಹಿನ್ನೆಲೆಯಲ್ಲಿ ಸಮಾಜವಾದಿ ಪಕ್ಷ ಈ ಪ್ರತಿಕ್ರಿಯೆ ನೀಡಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


