ಬಿಹಾರ- ಡಿಎನ್‌ಎ ಹೇಳಿಕೆ: ತೆಲಂಗಾಣ ನಿಯೋಜಿತ ಸಿಎಂ ರೇವಂತ್ ರೆಡ್ಡಿ ವಿರುದ್ಧ ಕೇಂದ್ರ ಸಚಿವ ವಾಗ್ದಾಳಿ
ತೆಲಂಗಾಣ ನಿಯೋಜಿತ ಸಿಎಂ ರೇವಂತ್ ರೆಡ್ಡಿ ಅವರ 'ಬಿಹಾರ-ಡಿಎನ್‌ಎ ಟೀಕೆ ವಿರುದ್ಧ ಕೇಂದ್ರ ಗೃಹ ಖಾತೆ ರಾಜ್ಯ ಸಚಿವ ನಿತ್ಯಾನಂದ ರೈ ಬುಧವಾರ ತೀವ್ರ ವಾಗ್ದಾಳಿ ನಡೆಸಿದ್ದಾರೆ. ಇದು ರಾಜ್ಯದ ಜನರಿಗೆ ಮಾಡಿದ ಅವಮಾನ ಎಂದು ಬಣ್ಣಿಸಿದ್ದಾರೆ.

ಪಾಟ್ನಾ: ತೆಲಂಗಾಣ ನಿಯೋಜಿತ ಸಿಎಂ ರೇವಂತ್ ರೆಡ್ಡಿ ಅವರ 'ಬಿಹಾರ-ಡಿಎನ್‌ಎ ಟೀಕೆ ವಿರುದ್ಧ ಕೇಂದ್ರ ಗೃಹ ಖಾತೆ ರಾಜ್ಯ ಸಚಿವ ನಿತ್ಯಾನಂದ ರೈ ಬುಧವಾರ ತೀವ್ರ ವಾಗ್ದಾಳಿ ನಡೆಸಿದ್ದಾರೆ. ಇದು ರಾಜ್ಯದ ಜನರಿಗೆ ಮಾಡಿದ ಅವಮಾನ ಎಂದು ಬಣ್ಣಿಸಿದ್ದಾರೆ.
ರೆಡ್ಡಿಯವರ ಹೇಳಿಕೆಯು ಜಾತಿ ಮತ್ತು ಧರ್ಮದ ಹೆಸರಿನಲ್ಲಿ ಸಮಾಜದಲ್ಲಿ ಒಡಕು ಮೂಡಿಸಲು ಯತ್ನಿಸುತ್ತಿರುವ ಕಾಂಗ್ರೆಸ್ ನಾಯಕರ ಮನಸ್ಥಿತಿಯನ್ನು ಬಯಲು ಮಾಡಿದೆ ಎಂದು ಅವರು ಹೇಳಿಕೆಯಲ್ಲಿ ತಿಳಿಸಿದ್ದಾರೆ.
ರೆಡ್ಡಿ ಹೇಳಿಕೆಯು ರಾಜ್ಯದ ಜನತೆಗೆ ಮಾಡಿದ ಅವಮಾನವಾಗಿದೆ. ರಾಜ್ಯದಲ್ಲಿನ ಮಹಾಮೈತ್ರಿ ಸರ್ಕಾರಕ್ಕೆ ಕಾಂಗ್ರೆಸ್ ಬೆಂಬಲವಿದೆ, ಆದರೂ ಅವರ ನಾಯಕರು ಬಿಹಾರ ಜನರ ವಿರುದ್ಧ ಇಂತಹ ಹೇಳಿಕೆ ನೀಡುತ್ತಿದ್ದಾರೆ. ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಬಿಹಾರದ ಜನರು ಕಾಂಗ್ರೆಸ್ ನಾಯಕರನ್ನು ಕ್ಷಮಿಸುವುದಿಲ್ಲ ಎಂದಿದ್ದಾರೆ.
ಪತ್ರಕರ್ತರೊಂದಿಗಿನ ಸಂವಾದದಲ್ಲಿ ರೆಡ್ಡಿ, ತೆಲಂಗಾಣದ ಮೊದಲ ಸಿಎಂ ಕೆ ಚಂದ್ರಶೇಖರ್ ರಾವ್ ಅವರು 'ಬಿಹಾರಿ ಜೀನ್ ಹೊಂದಿದ್ದಾರೆ ಮತ್ತು ಕೆಸಿಆರ್ ಗಿಂತ ತಾನೂ ರಾಜ್ಯಕ್ಕೆ ಉತ್ತಮ ಆಯ್ಕೆ ಎಂದು ಸೂಚಿಸಿದ್ದಾರೆ ಎಂದು ಹೇಳಿರುವುದಾಗಿ ವರದಿಯಾಗಿದೆ.
"ನನ್ನ ಡಿಎನ್‌ಎ ತೆಲಂಗಾಣ. ಕೆಸಿಆರ್ ಅವರ ಡಿಎನ್‌ಎ ಬಿಹಾರ. ಅವರು ಬಿಹಾರಕ್ಕೆ ಸೇರಿದವರು. ಕೆಸಿಆರ್ ಅವರ ಜಾತಿ ಕುರ್ಮಿ. ಅವರು ಬಿಹಾರದಿಂದ ವಿಜಯನಗರಕ್ಕೆ ಮತ್ತು ಅಲ್ಲಿಂದ ತೆಲಂಗಾಣಕ್ಕೆ ವಲಸೆ ಬಂದಿದ್ದಾರೆ. ಬಿಹಾರದ ಡಿಎನ್‌ಎಗಿಂತ ತೆಲಂಗಾಣ ಡಿಎನ್‌ಎ ಉತ್ತಮವಾಗಿದೆ" ಎಂದು ರೆಡ್ಡಿ ಹೇಳಿರುವುದಾಗಿ ವರದಿಯಾಗಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


