ಪಾಕಿಸ್ತಾನದಲ್ಲಿರುವ ಭಾರತೀಯ ಹೈಕಮಿಷನ್ ಕಚೇರಿಗೆ ಮೊದಲ ಬಾರಿಗೆ ಮಹಿಳಾ ಅಧಿಕಾರಿ ನೇಮಕ
ಪಾಕಿಸ್ತಾನದ ಇಸ್ಲಾಮಾಬಾದ್‌ನಲ್ಲಿರುವ ಭಾರತದ ಹೈಕಮಿಷನ್ ಕಚೇರಿಯ ರಾಯಭಾರ ವ್ಯವಹಾರಗಳ ಪ್ರಭಾರ ಮುಖ್ಯಸ್ಥರಾಗಿ ಗೀತಿಕಾ ಶ್ರೀವಾಸ್ತವ್ ಅವರನ್ನು ನೇಮಿಸಲಾಗಿದೆ.

ನವದೆಹಲಿ: ಪಾಕಿಸ್ತಾನದ ಇಸ್ಲಾಮಾಬಾದ್‌ನಲ್ಲಿರುವ ಭಾರತದ ಹೈಕಮಿಷನ್ ಕಚೇರಿಯ ರಾಯಭಾರ ವ್ಯವಹಾರಗಳ ಪ್ರಭಾರ ಮುಖ್ಯಸ್ಥರಾಗಿ ಗೀತಿಕಾ ಶ್ರೀವಾಸ್ತವ್ ಅವರನ್ನು ನೇಮಿಸಲಾಗಿದೆ.
ಈ ಮೂಲಕ ಆ ಹುದ್ದೆಗೇರಿದ ಪ್ರಥಮ ಭಾರತೀಯ ಮಹಿಳೆ ಎನ್ನುವ ಖ್ಯಾತಿಗೆ ಗೀತಿಕಾ ಪಾತ್ರರಾಗಿದ್ದಾರೆ. 2005ರ ಬ್ಯಾಚ್‌ನ ಐಎಫ್‌ಎಸ್ ಅಧಿಕಾರಿಯಾಗಿರುವ ಗೀತಿಕಾ ಆವರು ಈ ಮೊದಲು ಭಾರತ ವಿದೇಶಾಂಗ ಸಚಿವಾಲಯದಲ್ಲಿ ಜಂಟಿ ಕಾರ್ಯದರ್ಶಿಯಾಗಿ ಕಾರ್ಯನಿರ್ವಹಿಸುತ್ತಿದ್ದರು.
ಪಾಕಿಸ್ತಾನದಲ್ಲಿನ ಭಾರತೀಯ ಹೈಕಮಿಷನ್ ಕಚೇರಿಯ ರಾಯಭಾರ ವ್ಯವಹಾರಗಳ ಪ್ರಭಾರ ಮುಖ್ಯಸ್ಥರಾಗಿ ಕಾರ್ಯನಿರ್ವಹಿಸುತ್ತಿದ್ದ ಡಾ. ಎಂ ಸುರೇಶ್ ಕುಮಾರ್ ಅವರು ದೆಹಲಿಗೆ ಮರಳುವ ಸಾಧ್ಯತೆ ಇರುವ ಕಾರಣ ಅವರ ಹುದ್ದೆಗೆ ಗೀತಿಕಾ ಅವರನ್ನು ನೇಮಕ ಮಾಡಲಾಗಿದೆ.
ಈ ಹುದ್ದೆಯು ಉಪರಾಯಭಾರಿ ಹುದ್ದೆಯಾಗಿದ್ದು, ಹಲವು ಜವಾಬ್ದಾರಿಗಳನ್ನು ಹೊಂದಿರುತ್ತದೆ. ವಿದೇಶದಲ್ಲಿ ರಾಯಭಾರಿ ಅಥವಾ ಹೈಕಮಿಷನರ್ ಅವರ ಅನುಪಸ್ಥಿತಿಯಲ್ಲಿ ರಾಜತಾಂತ್ರಿಕ ಕೆಲಸಗಳನ್ನು ತಾತ್ಕಾಲಿಕವಾಗಿ ನೋಡಿಕೊಳ್ಳಬೇಕಾಗುತ್ತದೆ. ಕಾಮನ್‌ವೆಲ್ತ್ ದೇಶಗಳ ನಡುವಿನ ರಾಜತಾಂತ್ರಿಕತೆ ಕಾರ್ಯಾಚರಣೆಗಳನ್ನು ‘ಹೈಕಮಿಷನ್’ ಎಂದೂ, ಕಾಮನ್‌ವೆಲ್ತ್ ಅಲ್ಲದ ದೇಶಗಳನ್ನು ‘ರಾಯಭಾರಿ’ಗಳೆಂದು ಕರೆಯಲಾಗುತ್ತದೆ.
ಗೀತಿಕಾ ಅವರು ಈಗಾಗಲೇ ಚೀನಾದ ರಾಯಭಾರ ಕಚೇರಿಯಲ್ಲಿ 2007ರಿಂದ 2009ರವರೆಗೆ ಕಾರ್ಯನಿರ್ವಹಿಸಿದ್ದರು. ಅಲ್ಲದೆ ಕೋಲ್ಕತ್ತದಲ್ಲಿ ಪ್ರಾದೇಶಿಕ ಪಾಸ್‌ಪೋರ್ಟ್ ಕಚೇರಿ, ವಿದೇಶಾಂಗ ಸಚಿವಾಲಯದಲ್ಲಿ ಹಿಂದೂ ಮಹಾಸಾಗರ ವಿಭಾಗದ ನಿರ್ದೇಶಕಿಯಾಗಿಯೂ ಕೆಲಸ ಮಾಡಿದ್ದಾರೆ.
ಇಸ್ಲಾಮಾಬಾದ್ ಮತ್ತು ನವದೆಹಲಿಯಲ್ಲಿರುವ ಭಾರತ- ಪಾಕಿಸ್ತಾನಿ ರಾಯಭಾರಿ ಕಚೇರಿಯಲ್ಲಿ ಆಗಸ್ಟ್ 2019ರಿಂದ ಯಾವ ರಾಯಭಾರಿ ಅಧಿಕಾರಿಗಳು ಇಲ್ಲ. ಈ ಎರಡು ರಾಯಭಾರಿ ಕಚೇರಿಗಳು ಚಾರ್ಜ್ ಡಿ’ ಅಫೇರ್‌ಗಳ ನೇತೃತ್ವದಲ್ಲಿ ನಡೆಯುತ್ತಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


