ಬೆಲೆ ಏರಿಕೆ ನಿಯಂತ್ರಣಕ್ಕೆ ಕ್ರಮ: ಕುಚಲಕ್ಕಿ ರಫ್ತಿಗೆ ಶೇ 20ರಷ್ಟು ಸುಂಕ ವಿಧಿಸಿದ ಕೇಂದ್ರ ಸರ್ಕಾರ
ದೇಶೀಯ ಮಾರುಕಟ್ಟೆಯಲ್ಲಿ ಅಗತ್ಯ ದಾಸ್ತಾನು ಮತ್ತು ಬೆಲೆ ಏರಿಕೆಯನ್ನು ನಿಯಂತ್ರಣದಲ್ಲಿಡುವ ಉದ್ದೇಶದಿಂದ ಕೇಂದ್ರ ಸರ್ಕಾರವು ಕುಚಲಕ್ಕಿ ರಫ್ತಿನ ಮೇಲೆ ಶೇ 20ರಷ್ಟು ಸುಂಕ ವಿಧಿಸಿದೆ.

ನವದೆಹಲಿ: ದೇಶೀಯ ಮಾರುಕಟ್ಟೆಯಲ್ಲಿ ಅಗತ್ಯ ದಾಸ್ತಾನು ಮತ್ತು ಬೆಲೆ ಏರಿಕೆಯನ್ನು ನಿಯಂತ್ರಣದಲ್ಲಿಡುವ ಉದ್ದೇಶದಿಂದ ಕೇಂದ್ರ ಸರ್ಕಾರವು ಕುಚಲಕ್ಕಿ ರಫ್ತಿನ ಮೇಲೆ ಶೇ 20ರಷ್ಟು ಸುಂಕ ವಿಧಿಸಿದೆ.
ಆಗಸ್ಟ್ 25 ರಿಂದ ಜಾರಿಗೆ ಬರುವಂತೆ ರಫ್ತು ಸುಂಕ ವಿಧಿಸಲಾಗಿದ್ದು, ಅಕ್ಟೋಬರ್ 16ರವರೆಗೆ ಜಾರಿಯಲ್ಲಿರುತ್ತದೆ ಎಂದು ಹಣಕಾಸು ಸಚಿವಾಲಯ ಹೊರಡಿಸಿರುವ ಅಧಿಸೂಚನೆಯಲ್ಲಿ ತಿಳಿಸಿದೆ.
ಇನ್ನೂ ಲೆಟ್ ರಫ್ತು ಆದೇಶ (ಎಲ್ಇಒ) ಪಡೆಯದ ಮತ್ತು ಆಗಸ್ಟ್ 25ರ ಮೊದಲು ಮಾನ್ಯವಾದ ಲೆಟರ್ ಆಫ್ ಕ್ರೆಡಿಟ್ (ಎಲ್‌ಸಿ) ನಿಂದ ಬೆಂಬಲಿತವಾಗಿರುವ ಕಸ್ಟಮ್ಸ್ ಪೋರ್ಟ್‌ಗಳಲ್ಲಿ ದಾಸ್ತಾನಿರುವ ಕುಚಲಕ್ಕಿ ಮೇಲೆ ಸುಂಕ ವಿನಾಯಿತಿ ಲಭ್ಯವಿರುತ್ತದೆ.
ಬಾಸ್ಮತಿ ಅಕ್ಕಿಯನ್ನು ಹೊರತುಪಡಿಸಿ ಇತರ ಬಗೆಯ ಎಲ್ಲಾ ಅಕ್ಕಿ ರಫ್ತಿಗೆ ಕೇಂದ್ರ ಸರ್ಕಾರವು ಈಗಾಗಲೇ ನಿಷೇಧ ಹೇರಿದೆ.
ದೇಶದಿಂದ ರಫ್ತಾಗುವ ಒಟ್ಟು ಅಕ್ಕಿಯ ಸರಿಸುಮಾರು ಶೇ 25 ರಷ್ಟು ಬಾಸುಮತಿ ಅಲ್ಲದ ಬಿಳಿ ಅಕ್ಕಿಯಾಗಿದೆ.
ಕಳೆದ ತಿಂಗಳು, ಮುಂಬರುವ ಹಬ್ಬದ ಋತುವಿನಲ್ಲಿ ದೇಶೀಯ ಮಾರುಕಟ್ಟೆಯಲ್ಲಿ ಪೂರೈಕೆ ಹೆಚ್ಚಿಸಲು ಮತ್ತು ಬೆಲೆ ಏರಿಕೆಯನ್ನು ನಿಯಂತ್ರಣದಲ್ಲಿಡಲು ಸರ್ಕಾರವು ಬಾಸ್ಮತಿಯೇತರ ಬಿಳಿ ಅಕ್ಕಿಯ ರಫ್ತನ್ನು ನಿಷೇಧಿಸಿತು. ಕಳೆದ ವರ್ಷ ಸೆಪ್ಟೆಂಬರ್‌ನಲ್ಲಿ ಒಡೆದ ಅಕ್ಕಿಯನ್ನು ರಫ್ತು ಮಾಡುವುದನ್ನು ನಿಷೇಧಿಸಲಾಗಿತ್ತು.
ಈ ಆರ್ಥಿಕ ವರ್ಷದ ಏಪ್ರಿಲ್-ಜೂನ್ ಅವಧಿಯಲ್ಲಿ, ಸುಮಾರು 15.54 ಲಕ್ಷ ಟನ್ ಬಾಸ್ಮತಿ ಅಲ್ಲದ ಬಿಳಿ ಅಕ್ಕಿಯನ್ನು ರಫ್ತು ಮಾಡಲಾಗಿದ್ದು, ಹಿಂದಿನ ವರ್ಷದ ಅವಧಿಯಲ್ಲಿ ಕೇವಲ 11.55 ಲಕ್ಷ ಟನ್ ರಫ್ತು ಮಾಡಲಾಗಿತ್ತು. ಆಹಾರ ಧಾನ್ಯಗಳ ಬೆಲೆ ಏರಿಕೆ ಮತ್ತು ಹೆಚ್ಚಿನ ರಫ್ತಿನ ಕಾರಣ ಬಾಸ್ಮತಿ ಅಲ್ಲದ ಬಿಳಿ ಅಕ್ಕಿ ರಫ್ತಿನ ಮೇಲೆ ನಿಷೇಧ ಹೇರಲಾಯಿತು.
ಒಂದು ವಾರದ ಹಿಂದೆ, ದೇಶೀಯ ಮಾರುಕಟ್ಟೆಯಲ್ಲಿ ಈರುಳ್ಳಿ ಪೂರೈಕೆಯನ್ನು ಸುಧಾರಿಸುವ ಉದ್ದೇಶದಿಂದ ಭಾರತವು ಈರುಳ್ಳಿ ರಫ್ತಿನ ಮೇಲೆ ಶೇ 40ರಷ್ಟು ರಫ್ತು ಸುಂಕ ವಿಧಿಸಿತ್ತು.
ಕೃಷಿ ಸಚಿವಾಲಯದ ಅಂಕಿಅಂಶಗಳ ಪ್ರಕಾರ, ಭಾರತದ ಅಕ್ಕಿ ಉತ್ಪಾದನೆಯು ಹಿಂದಿನ ವರ್ಷದಲ್ಲಿ 129.47 ಮಿಲಿಯನ್ ಟನ್‌ಗಳಿಂದ 2022-23 ಬೆಳೆ ವರ್ಷದಲ್ಲಿ (ಜುಲೈ-ಜೂನ್) 135.54 ಮಿಲಿಯನ್ ಟನ್‌ಗಳಿಗೆ ಏರಿದೆ ಎಂದು ಅಂದಾಜಿಸಲಾಗಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


