100 ಎಲ್ ಸಿಎ ತೇಜಸ್ ಫೈಟರ್ಸ್ ಗಳನ್ನು ಸೇರ್ಪಡೆಗೊಳಿಸಿಕೊಳ್ಳಲು ಐಎಎಫ್ ಮುಂದು
ದೇಶೀಯವಾಗಿ ಅಭಿವೃದ್ಧಿಪಡಿಸಿರುವ ಫೈಟರ್ ಗಳಿಗೆ ಹೆಚ್ಚಿನ ಮಹತ್ವ ನೀಡುವುದರ ಭಾಗವಾಗಿ ಭಾರತೀಯ ವಾಯುಪಡೆ ಎಲ್ ಸಿಎ ತೇಜಸ್ ನ್ನು ಸೇರ್ಪಡೆಗೊಳಿಸುವ ಪ್ರಸ್ತಾವನೆಯತ್ತ ಕಾರ್ಯನಿರ್ವಹಿಸುತ್ತಿದೆ.

ನವದೆಹಲಿ: ದೇಶೀಯವಾಗಿ ಅಭಿವೃದ್ಧಿಪಡಿಸಿರುವ ಫೈಟರ್ ಗಳಿಗೆ ಹೆಚ್ಚಿನ ಮಹತ್ವ ನೀಡುವುದರ ಭಾಗವಾಗಿ ಭಾರತೀಯ ವಾಯುಪಡೆ ಎಲ್ ಸಿಎ ತೇಜಸ್ ನ್ನು ಸೇರ್ಪಡೆಗೊಳಿಸುವ ಪ್ರಸ್ತಾವನೆಯತ್ತ ಕಾರ್ಯನಿರ್ವಹಿಸುತ್ತಿದೆ.
ಮೂಲಗಳ ಪ್ರಕಾರ ಐಎಎಫ್ 100 ಎಲ್ ಸಿಎ ತೇಜಸ್ ಎಂಕೆ-1ಎ ಫೈಟರ್ ಗಳನ್ನು ಸೇರ್ಪಡೆಗೊಳಿಸಿಕೊಳ್ಳಲು ಮುಂದಾಗಿದೆ. ಇದಕ್ಕಾಗಿ ಈಗ ಯೋಜನೆ ರೂಪಿಸಲಾಗುತ್ತಿದೆ.
ಈ ಬಳಿಕ ಸರ್ಕಾರಕ್ಕೆ ಪ್ರಸ್ತಾವನೆಯನ್ನು ಸಲ್ಲಿಸಲಾಗುತ್ತದೆ. ಈ ಐಎಎಫ್ ನ ಈ ಯೋಜನೆಯು ಸ್ಥಳೀಯ ಯುದ್ಧ ವೇದಿಕೆಗಳ ಪ್ರೊಫೈಲ್ ಅನ್ನು ಹೆಚ್ಚಿಸುವುದಾಗಿದೆ. ಜೊತೆಗೆ HAL ತನ್ನ ಅಸೆಂಬ್ಲಿ ಲೈನ್‌ಗಳನ್ನು ಜೀವಂತವಾಗಿಡಲು ಸಂಪನ್ಮೂಲಗಳನ್ನು ಕ್ರೋಡೀಕರಿಸುವುದು ಮಾತ್ರವಲ್ಲದೆ ಹೆಚ್ಚು ಸ್ಥಳೀಯವಾಗಿ ತಯಾರಿಸಿದ ಯುದ್ಧ ವ್ಯವಸ್ಥೆಗಳನ್ನು ಸೇರಿಸುವುದು ದೀರ್ಘಾವಧಿಯ ಯೋಜನೆಯ ಭಾಗವಾಗಿದೆ ಎಂದು ಮೂಲಗಳು ತಿಳಿಸಿವೆ.
ತೇಜಸ್ ನ ಈ ಹೊಸ ವಿಮಾನಗಳು ಮಿಗ್ G 21 ಫೈಟರ್ ಜೆಟ್‌ಗಳ ಸ್ಕ್ವಾಡ್ರನ್‌ಗಳ ಬದಲಿಗೆ ಕಾರ್ಯನಿರ್ವಹಿಸಲಿವೆ.
ನಿಗದಿತ 15 ವರ್ಷಗಳಲ್ಲಿ ಈ ಆದೇಶವನ್ನು ಪೂರ್ಣಗೊಳಿಸಿದ ನಂತರ, IAF 40 LCA, 180 LCA ಮಾರ್ಕ್-1A ಮತ್ತು ಕನಿಷ್ಠ 120 LCA ಮಾರ್ಕ್-2 ವಿಮಾನಗಳನ್ನು ಹೊಂದಿರುತ್ತದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


