ದೇಶ

ಬಹಳಷ್ಟು ನೋವು ಮತ್ತು ಸಂಕಟ ಎದುರಿಸಿದ್ದೇವೆ; ಮಂಗಳಯಾನಕ್ಕೂ ಸಜ್ಜು: ಇಸ್ರೋ ಅಧ್ಯಕ್ಷ

ಚಂದ್ರಯಾನ-3 ರ ಯಶಸ್ಸಿನಲ್ಲಿರುವ ಇಸ್ರೋ ಸಂಸ್ಥೆಯ ಅಧ್ಯಕ್ಷರಾದ ಎಸ್ ಸೋಮನಾಥ್ ತಮ್ಮ ತಂಡದ ಯಶಸ್ಸಿನ ಬಗ್ಗೆ ಮಾತನಾಡಿದ್ದಾರೆ.

ಬಹಳಷ್ಟು ನೋವು ಮತ್ತು ಸಂಕಟ ಎದುರಿಸಿದ್ದೇವೆ; ಮಂಗಳಯಾನಕ್ಕೂ ಸಜ್ಜು: ಇಸ್ರೋ ಅಧ್ಯಕ್ಷ
ಇಸ್ರೋ
Published On :

ಬೆಂಗಳೂರು: ಚಂದ್ರಯಾನ-3 ರ ಯಶಸ್ಸಿನಲ್ಲಿರುವ ಇಸ್ರೋ ಸಂಸ್ಥೆಯ ಅಧ್ಯಕ್ಷರಾದ ಎಸ್ ಸೋಮನಾಥ್ ತಮ್ಮ ತಂಡದ ಯಶಸ್ಸಿನ ಬಗ್ಗೆ ಮಾತನಾಡಿದ್ದಾರೆ. ಈ ಹಿಂದೆ ತಮ್ಮ ತಂಡ ಎದುರಿಸಿದ ನೋವು ಮತ್ತು ಸಂಕಟಗಳು, ಅದರ ಮೇಲೆ ಪರಿಶ್ರಮಪಟ್ಟಿದ್ದನ್ನು ಈ ಯಶಸ್ಸಿಗೆ ಕಾರಣವನ್ನಾಗಿ ಇಸ್ರೋ ಅಧ್ಯಕ್ಷರು ನೀಡಿದ್ದಾರೆ. 

ಈ ಯಶಸ್ಸಿನ ಮಾದರಿಯಲ್ಲೇ ಮುಂದಿನ ವರ್ಷಗಳಲ್ಲಿ ಮಂಗಳ ಗ್ರಹದಲ್ಲಿಯೂ ಇದೇ ಮಾದರಿಯ ಬಾಹ್ಯಾಕಾಶ ನೌಕೆಯನ್ನು ಇಳಿಸಲಿದ್ದೇವೆ ಎಂದು ಸೋಮನಾಥ್ ಹೇಳಿದ್ದಾರೆ. 

ಚಂದ್ರಯಾನ-3 ಮಿಷನ್‌ನ ಯಶಸ್ಸಿಗೆ ದೇಶದ ಬಾಹ್ಯಾಕಾಶ ಸಂಸ್ಥೆಯ ವಿಜ್ಞಾನಿಗಳ ನಾಯಕತ್ವದ ಪೀಳಿಗೆಯ ಕೊಡುಗೆಯನ್ನು ಅವರು ಸ್ಮರಿಸಿದ್ದಾರೆ. ಚಂದ್ರನತ್ತ ಪ್ರಯಾಣವು ಕಠಿಣವಾಗಿದೆ ಮತ್ತು ಸಾಫ್ಟ್ ಲ್ಯಾಂಡಿಂಗ್ ಯಾವುದೇ ರಾಷ್ಟ್ರವು ಇಂದು ತಂತ್ರಜ್ಞಾನದ ಪ್ರಗತಿಯೊಂದಿಗೂ ಸಾಧಿಸುವುದು ಕಷ್ಟಕರವಾಗಿದೆ ಎಂದು ಹೇಳಿದ ಅವರು, ಭಾರತವು ಈ ಕಠಿಣ ಕೆಲಸವನ್ನು ಕೇವಲ ಎರಡು ಕಾರ್ಯಾಚರಣೆಗಳಲ್ಲಿ ಸಾಧಿಸಿದೆ ಎಂದು ತಿಳಿಸಿದ್ದಾರೆ.

ಚಂದ್ರಯಾನ-2, ಚಂದ್ರನ ಮೇಲೆ ಸಾಫ್ಟ್ ಲ್ಯಾಂಡಿಂಗ್ ಉದ್ದೇಶದೊಂದಿಗೆ ಮೊದಲ ಮಿಷನ್ ಸಣ್ಣ ತಪ್ಪನ್ನು ಹೊಂದಿತ್ತು, ಆದರೆ ಚಂದ್ರಯಾನ-3 ಮಿಷನ್ ಸಂಪೂರ್ಣವಾಗಿ ಕಾರ್ಯಗತಗೊಳಿಸಲಾಯಿತು ಎಂದು ಸೋಮನಾಥ್ ಹೇಳಿದ್ದಾರೆ. 

ಚಂದ್ರಯಾನ-1 ರ ಉದ್ದೇಶ ಚಂದ್ರನ ಸುತ್ತಲಿನ ಕಕ್ಷೆಯಲ್ಲಿ ಮಾನವರಹಿತ ಬಾಹ್ಯಾಕಾಶ ನೌಕೆಯನ್ನು ಇರಿಸುವುದು ಮಾತ್ರವಾಗಿತ್ತು.

"ಈ ಯಶಸ್ಸು (ಚಂದ್ರಯಾನ-3 ಮಿಷನ್‌ನ ಯಶಸ್ಸು) ಚಂದ್ರನಿಗೆ ಹೋಗಲು ಮಾತ್ರವಲ್ಲ, ಮಂಗಳಕ್ಕೆ ಹೋಗಲು, ಕೆಲವೊಮ್ಮೆ (ಬಹುಶಃ) ಮಂಗಳದ ಮೇಲೆ ಇಳಿಯಲು, ಭವಿಷ್ಯದಲ್ಲಿ ಶುಕ್ರ ಮತ್ತು ಇತರ ಗ್ರಹಗಳಿಗೆ ಹೋಗಲು ಮಿಷನ್‌ಗಳನ್ನು ಕಾನ್ಫಿಗರ್ ಮಾಡಲು ನಮಗೆ ವಿಶ್ವಾಸ ನೀಡುತ್ತದೆ." ಎಂದು ಸೋಮನಾಥ್  ಹೇಳಿದ್ದಾರೆ. 

ಚಂದ್ರಯಾನ-2ರ ಹಿಂದಿರುವ ಪ್ರಮುಖ ವಿಜ್ಞಾನಿಗಳೂ ಚಂದ್ರಯಾನ-3 ತಂಡದ ಭಾಗವಾಗಿದ್ದರು ಎಂದು ಇಸ್ರೋ ಅಧ್ಯಕ್ಷರು ಮಾಹಿತಿ ನೀಡಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.