ದ್ವೇಷಕ್ಕೆ ಮಾತ್ರ ದ್ವೇಷ ಕಾಣಿಸುವುದು: ನಾ ಹೇಳಿದ್ದು 'ಮಲಯಾಳಿ ಚಾಯ್ವಾಲಾ' ಬಗ್ಗೆ; ಪ್ರಕಾಶ್ ರಾಜ್ ಸ್ಪಷ್ಟನೆ
ಅನ್ಅಕಾಡೆಮಿ ಟ್ರೋಲಿಗರಿಗೆ ಗೊತ್ತಿರುವುದು ಚಾಯ್ ವಾಲಾ ಮಾತ್ರ. ಬೇರೆಯವರ ಬಗ್ಗೆ ತಿಳಿದುಕೊಂಡಿಲ್ಲ. ನಾವು ಹೆಮ್ಮೆ ಪಡುವಂತಹ 1960ರಲ್ಲಿ ನಮ್ಮ ದೇಶದವರೇ ಆದ ಮಲಯಾಳಂನ ಚಾಯ್ವಾಲಾ ಒಬ್ಬರ ಸ್ಫೂರ್ತಿದಾಯಕ ಸ್ಟೋರಿ ಇದೆ.

ಬೆಂಗಳೂರು: ‘ಚಂದ್ರನಿಂದ ಬಂದ ಮೊದಲ ಚಿತ್ರ’ ಎಂದು ಚಾಯ್ವಾಲಾನ ವ್ಯಂಗ್ಯಚಿತ್ರವೊಂದನ್ನು ನಟ ಪ್ರಕಾಶ್ ರಾಜ್ ನಿನ್ನೆ ತಮ್ಮ ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದರು. ಅದು ವೈರಲ್ ಆಗಿದ್ದಲ್ಲದೆ ವಿವಾದಾತ್ಮಕವಾಗಿ ಪರಿಣಮಿಸಿ ತೀವ್ರ ಟೀಕೆಗೂ ಒಳಗಾಗಿದೆ.
ಈ ಸಂಬಂಧ ಮತ್ತೊಂದು ಟ್ವೀಟ್ ಮಾಡಿ, ಸ್ಪಷ್ಟನೆ ನೀಡಿರುವ ಅವರು,‘ದ್ವೇಷಕ್ಕೆ ದ್ವೇಷ ಮಾತ್ರ ಕಾಣಿಸುವುದು. ನಾನು ನಮ್ಮ ಕೇರಳದ ಚಾಯ್ವಾಲಾರನ್ನು ಸಂಭ್ರಮಿಸುವ ಆರ್ಮ್ಸ್ಟ್ರಾಂಗ್ ಕಾಲದ ಜೋಕ್ ಹೇಳಿದ್ದೆ. ಟ್ರೋಲಿಗರಿಗೆ ಕಂಡ ಚಾಯ್ವಾಲಾ ಯಾರು?’ ಎಂದು ಪ್ರಶ್ನಿಸಿರುವ ಪ್ರಕಾಶ್ ರಾಜ್, ‘ನಿಮಗೆ ಜೋಕ್ ಅರ್ಥ ಆಗಲಿಲ್ಲವೆಂದರೆ ಜೋಕು ನಿಮ್ಮ ಬಗ್ಗೆಯೇ.. ಬೆಳೆಯಿರಿ’ ಎಂದು ಟೀಕಿಸಿದವರಿಗೆ ಹೇಳಿದ್ದಾರೆ.
ಅನ್ಅಕಾಡೆಮಿ ಟ್ರೋಲಿಗರಿಗೆ ಗೊತ್ತಿರುವುದು ಚಾಯ್ ವಾಲಾ ಮಾತ್ರ. ಬೇರೆಯವರ ಬಗ್ಗೆ ತಿಳಿದುಕೊಂಡಿಲ್ಲ. ನಾವು ಹೆಮ್ಮೆ ಪಡುವಂತಹ 1960ರಲ್ಲಿ ನಮ್ಮ ದೇಶದವರೇ ಆದ ಮಲಯಾಳಂನ ಚಾಯ್ವಾಲಾ ಒಬ್ಬರ ಸ್ಫೂರ್ತಿದಾಯಕ ಸ್ಟೋರಿ ಇದೆ. ನೀವು ಈ ಬಗ್ಗೆ ತಿಳಿದುಕೊಳ್ಳಲು ಬಯಸಿದರೆ ಪ್ಲೀಸ್ ಇದನ್ನು ಓದಿ ಎಂದು ಟ್ರೋಲಿಗರಿಗೆ ತಿರುಗೇಟು ಕೊಟ್ಟಿದ್ದಾರೆ.
ಪ್ರಕಾಶ್ ರಾಜ್ ನಿನ್ನೆ ಮಾಡಿದ್ದ ಆ ಪೋಸ್ಟ್ಗೆ ವ್ಯಾಪಕ ಟೀಕೆ ವ್ಯಕ್ತವಾಗಿದ್ದು, ಇದು ಇಸ್ರೋಗೆ ಮಾಡಿದ ಅವಮಾನ, ದೇಶಕ್ಕೆ ಮಾಡಿದ ಅಪಮಾನ ಎಂದು ಹಲವರು ಪ್ರಕಾಶ್ ರಾಜ್ ವಿರುದ್ಧ ಕಿಡಿಕಾರಿದ್ದರು. ಇಂದೂ ಟೀಕೆಗಳು ಮುಂದುವರಿದಿದ್ದು, ಅದಕ್ಕೆ ಪ್ರತಿಕ್ರಿಯೆ ಎಂಬಂತೆ ಪ್ರಕಾಶ್ ರಾಜ್ ಈ ಪೋಸ್ಟ್ ಮಾಡಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


