ಕೊನೆಗೂ ಬ್ಯಾಂಕ್ ನೋಟಿಸ್ ಗೆ ಬೆದರಿದ ನಟ ಸನ್ನಿ ಡಿಯೋಲ್: ಬಾಕಿ ಪಾವತಿಸಲು ಮುಂದು!
ಬಾಲಿವುಡ್ ನಟ ಸನ್ನಿ ಡಿಯೋಲ್ ತಮ್ಮ ಮುಂಬೈ ಬಂಗಲೆಗೆ ಸಂಬಂಧಿಸಿದ ಬಾಕಿಯನ್ನು ಪಾವತಿಸಲು ಮುಂದಾಗಿದ್ದಾರೆ ಎಂದು ಬ್ಯಾಂಕ್ ಆಫ್ ಬರೋಡಾ ಹೇಳಿದೆ. ತಾಂತ್ರಿಕ ಕಾರಣಗಳಿಂದ ಪ್ರಕ್ರಿಯೆಯನ್ನು ಹಿಂಪಡೆಯಲಾಗಿದೆ ಎಂದು ಬ್ಯಾಂಕ್ ಆಫ್ ಬರೋಡಾ ಸೋಮವಾರ ತಿಳಿಸಿತ್ತು.

ಮುಂಬೈ: ಬಾಲಿವುಡ್ ನಟ ಸನ್ನಿ ಡಿಯೋಲ್ ತಮ್ಮ ಮುಂಬೈ ಬಂಗಲೆಗೆ ಸಂಬಂಧಿಸಿದ ಬಾಕಿಯನ್ನು ಪಾವತಿಸಲು ಮುಂದಾಗಿದ್ದಾರೆ ಎಂದು ಬ್ಯಾಂಕ್ ಆಫ್ ಬರೋಡಾ ಹೇಳಿದೆ. ತಾಂತ್ರಿಕ ಕಾರಣಗಳಿಂದ ಪ್ರಕ್ರಿಯೆಯನ್ನು ಹಿಂಪಡೆಯಲಾಗಿದೆ ಎಂದು ಬ್ಯಾಂಕ್ ಆಫ್ ಬರೋಡಾ ಸೋಮವಾರ ತಿಳಿಸಿತ್ತು.
ಸೆಪ್ಟೆಂಬರ್ 25 ರಂದು ನಗರದ ಜುಹು ಪ್ರದೇಶದಲ್ಲಿ 'ಸನ್ನಿ ವಿಲ್ಲಾ' ಇ-ಹರಾಜು ಮಾಡುವುದಾಗಿ ಸರ್ಕಾರಿ ಸ್ವಾಮ್ಯದ ಬ್ಯಾಂಕ್ ಭಾನುವಾರ ಸಾರ್ವಜನಿಕ ಪ್ರಕಟಣೆಯಲ್ಲಿ ಹೇಳಿತ್ತು. ಆದರೆ ಸೋಮವಾರ ಇದೇ ರೀತಿಯ ಸೂಚನೆಯಲ್ಲಿ ತಾಂತ್ರಿಕ ಕಾರಣದಿಂದ ಆಗಸ್ಟ್ 20 ರಂದು ಪ್ರಕಟವಾದ ಸೂಚನೆಯನ್ನು ಹಿಂಪಡೆಯಲಾಗಿದೆ ಎಂದು ಬ್ಯಾಂಕ್ ಹೇಳಿದೆ.
ಗುರುದಾಸ್‌ಪುರ ಎಂಪಿಯೂ ಆಗಿರುವ ಸನ್ನಿ ಡಿಯೋಲ್ ಅವರ ಇತ್ತೀಚಿನ "ಗದರ್ 2' ಚಿತ್ರ ಬಿಡುಗಡೆಯಾದಾಗಿನಿಂದ ಗಲ್ಲಾಪೆಟ್ಟಿಗೆಯಲ್ಲಿ ಉತ್ತಮ ಕಲೆಕ್ಷನ್ ಮಾಡುತ್ತಿದ್ದು, ಈಗಾಗಲೇ ರೂ. 300 ಕೋಟಿ ಗಳಿಸಿ ಯಶಸ್ಸನ್ನು ಗಳಿಸಿದೆ. ಆಗಿದ್ದರೂ ಅವರು ಡಿಸೆಂಬರ್ 2022 ರಿಂದ ಬ್ಯಾಂಕ್‌ನಿಂದ ಪಡೆದಿರುವ ರೂ 55.99 ಕೋಟಿ ಸಾಲ ಮತ್ತು ಬಡ್ಡಿ ಮತ್ತು ದಂಡವನ್ನು ಪಾವತಿಸುವಲ್ಲಿ ವಿಫಲರಾಗಿದ್ದಾರೆ ಎಂದು ಎರಡನೇ ಅತಿದೊಡ್ಡ ಸರ್ಕಾರಿ ಸ್ವಾಮ್ಯದ ಬ್ಯಾಂಕ್ ಭಾನುವಾರ ಸಾರ್ವಜನಿಕ ಹೇಳಿಕೆಯಲ್ಲಿ ತಿಳಿಸಿತ್ತು.
ಸನ್ನಿ ಡಿಯೋಲ್ ಅವರನ್ನು ಅಧಿಕೃತವಾಗಿ ಅಜಯ್ ಸಿಂಗ್ ಧರ್ಮೇಂದ್ರ ಡಿಯೋಲ್ ಎಂದು ಕರೆಯಲಾಗುತ್ತದೆ ಮತ್ತು 2019 ರಿಂದ ಪಂಜಾಬ್ ನ ಗುರುದಾಸ್ ಪುರ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿಯಾಗಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


