ನಟ ಸನ್ನಿ ಡಿಯೋಲ್ ಬಂಗಲೆ ಹರಾಜು ಹಿಂಪಡೆದ ಬ್ಯಾಂಕ್ ಆಫ್ ಬರೋಡಾ: ಕಾರಣ ಕೇಳಿದ ಕಾಂಗ್ರೆಸ್
ಸಾಲ ಮರುಪಾವತಿಸದ ಹಿನ್ನಲೆ ಬ್ಯಾಂಕ್ ಬಾಲಿವುಡ್ ನಟ ಸನ್ನಿ ಡಿಯೋಲ್ ಮನೆಯನ್ನು ಹರಾಜಿಗೆ ಇಟ್ಟಿತ್ತು. ಈ ಬಗ್ಗೆ ಜಾಹೀರಾತನ್ನು ನೀಡಿತ್ತು. ಆದರೀಗ ಅದೇ ಬ್ಯಾಂಕ್ ಮನೆ ಹರಾಜಿನ ನೋಟೀಸ್ ಹಿಂಪಡೆದಿದೆ

ಮುಂಬೈ: ಸಾಲ ಮರುಪಾವತಿಸದ ಹಿನ್ನಲೆ ಬ್ಯಾಂಕ್ ಬಾಲಿವುಡ್ ನಟ ಸನ್ನಿ ಡಿಯೋಲ್ ಮನೆಯನ್ನು ಹರಾಜಿಗೆ ಇಟ್ಟಿತ್ತು. ಈ ಬಗ್ಗೆ ಜಾಹೀರಾತನ್ನು ನೀಡಿತ್ತು. ಆದರೀಗ ಅದೇ ಬ್ಯಾಂಕ್ ಮನೆ ಹರಾಜಿನ ನೋಟೀಸ್ ಹಿಂಪಡೆದಿದೆ. ತಾಂತ್ರಿಕ ಕಾರಣಗಳ ಹಿನ್ನಲೆಯಲ್ಲಿ ಮನೆ ಹರಾಜಿನ ನೋಟೀಸ್ ವಾಪಸ್ ಪಡೆದುಕೊಂಡಿದೆ.
ಬಾಲಿವುಡ್ ನಟ ಸನ್ನಿ ಡಿಯೋಲ್ ಮುಂಬೈನ ಜುಹು ಬಂಗಲೆಯ ಮೇಲೆ 56 ಕೋಟಿ ರೂಪಾಯಿಯನ್ನು ಬ್ಯಾಂಕ್ ಆಪ್ ಬರೋಡಾದ ಮೂಲಕ ಸಾಲ ಪಡೆದುಕೊಂಡಿದ್ದರು. ಬ್ಯಾಂಕ್ ಆಫ್ ಬರೋಡಾಗೆ ಸನ್ನಿ ಡಿಯೋಲ್ 56 ಕೋಟಿ ರೂಪಾಯಿ ಸಾಲ ಮರುಪಾವತಿ ಮಾಡಬೇಕಿತ್ತು. ಆದರೆ ಸಾಲ ಮರುಪಾವತಿಸದೇ ಇರುವ ಕಾರಣ ಸೆಪ್ಟೆಂಬರ್ 25 ರಂದು ಮನೆಯನ್ನು ಹರಾಜು ಹಾಕುವುದಾಗಿ ಬ್ಯಾಂಕ್ ಜಾಹೀರಾತು ನೀಡಿತ್ತು.
ಇನ್ನು ಈ ಬಗ್ಗೆ ಕಾಂಗ್ರೆಸ್ ವಕ್ತಾರ ಜೈರಾಮ್ ರಮೇಶ್ ಟ್ವೀಟ್ ಮಾಡಿದ್ದು, ಯಾರ ಕಾರಣದಿಂದ ಮನೆ ಹರಾಜಿನ ನೋಟೀಸ್ ವಾಪಸ್ ಪಡೆಯಲಾಯ್ತು, ಇದನ್ನೂ ದೇಶದ ಜನತೆ ತಿಳಿಯಬೇಕು ಎಂದು ಹೇಳಿದ್ದಾರೆ. ನಿನ್ನೆ ಹರಾಜು ನೋಟಿಸ್ ನೀಡಲಾಗಿತ್ತು, 24 ಗಂಟೆಗಳಿಗಿಂತ ಕಡಿಮೆ ಅವಧಿಯಲ್ಲಿ, 'ತಾಂತ್ರಿಕ ಕಾರಣಗಳಿಂದ' ಬ್ಯಾಂಕ್ ಆಫ್ ಬರೋಡಾ ಹರಾಜು ನೋಟಿಸ್ ಹಿಂಪಡೆದಿದೆ ಎಂದು ಟ್ವಿಟ್ಟರ್ ನಲ್ಲಿ ಬರೆದು ಕೊಂಡಿದ್ದಾರೆ.
ಸನ್ನಿ ಡಿಯೋಲ್ ಅಭಿನಯದ ಗದ್ದರ್-2 ಸಿನಿಮಾ ಬಿಡುಗಡೆಗೊಂಡು ಭರ್ಜರಿಯಾಗಿ ಪ್ರದರ್ಶನ ಕಾಣುತ್ತಿದೆ. ಆದರೆ ಇದರ ನಡುವೆ ಸನ್ನಿ ಡಿಯೋಲ್ ಮನೆ ಹರಾಜಿಗೆ ಬಂದು ಸಂಕಷ್ಟ ಎದುರಿಸುತ್ತಿದ್ದಾರೆ ಎಂಬ ಸುದ್ದಿಯೂ ಹರಿದಾಡಿತ್ತು. ಬೇಗನೇ 56 ಕೋಟಿ ರೂಪಾಯಿ ಬ್ಯಾಂಕ್ ಸಾಲ ಮರುಪಾವತಿ ಮಾಡಿದರೆ ಮನೆಯನ್ನು ಹಿಂತಿರುಗಿ ಪಡೆಯಬಹುದು ಎಂದು ಹೇಳಲಾಗಿತ್ತು. ಆದರೆ ಈ ಮಾತುಗಳ ನಡುವೆ ಬ್ಯಾಂಕ್ ಆಫ್ ಬರೋಡಾ ತಾನು ಹೊರಡಿಸಿದ್ದ ಹರಾಜು ಜಾಹೀರಾತನ್ನು ಹಿಂಪಡೆದುಕೊಂಡಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


