ಮುಂದಿನ 5 ದಿನ ಭಾರತದಲ್ಲಿ ಉಷ್ಣಹವೆ ಪರಿಸ್ಥಿತಿ ಇರುವುದಿಲ್ಲ: ಹವಾಮಾನ ಇಲಾಖೆ
ಬೇಸಿಗೆ ಧಗೆಯಲ್ಲಿ ಬೆಂದು ಹೋಗಿರುವ ಜನಕ್ಕೆ ಕೇಂದ್ರ ಹವಾಮಾನ ಇಲಾಖೆ ಕೊಂಚ ಸಮಾಧಾನದ ಮಾಹಿತಿ ನೀಡಿದ್ದು, ಮುಂದಿನ 5 ದಿನ ಭಾರತದಲ್ಲಿ ಉಷ್ಣಹವೆ ಪರಿಸ್ಥಿತಿ ಇರುವುದಿಲ್ಲ ಎಂದು ಹೇಳಿದೆ.

ನವದೆಹಲಿ: ಬೇಸಿಗೆ ಧಗೆಯಲ್ಲಿ ಬೆಂದು ಹೋಗಿರುವ ಜನಕ್ಕೆ ಕೇಂದ್ರ ಹವಾಮಾನ ಇಲಾಖೆ ಕೊಂಚ ಸಮಾಧಾನದ ಮಾಹಿತಿ ನೀಡಿದ್ದು, ಮುಂದಿನ 5 ದಿನ ಭಾರತದಲ್ಲಿ ಉಷ್ಣಹವೆ ಪರಿಸ್ಥಿತಿ ಇರುವುದಿಲ್ಲ ಎಂದು ಹೇಳಿದೆ.
ಈ ವಾರ ಜನರನ್ನು ಬೆಚ್ಚಿಬೀಳಿಸಿದ್ದ ಬಿಸಿಗಾಳಿ ಅಥವಾ ಉಷ್ಣಹವೆ ಪರಿಸ್ಥಿತಿಯಿಂದ ಮುಂದಿನ ಐದು ದಿನಗಳ ಕಾಲ ಭಾರತದ ಬಹುತೇಕ ಭಾಗಗಳು ನೆಮ್ಮದಿಯ ನಿಟ್ಟುಸಿರು ಬಿಡಲಿವೆ. ಈ ಬಗ್ಗೆ ಸ್ವತಃ ಭಾರತೀಯ ಹವಾಮಾನ ಇಲಾಖೆ ಶನಿವಾರ ಮಾಹಿತಿ ನೀಡಿದ್ದು, 'ವಾಯುವ್ಯ ಮಧ್ಯಪ್ರದೇಶದ ಮೇಲೆ ಒಂದು ಟ್ರಫ್ (ಚಂಡಮಾರುತ ಎಂದೂ ಕರೆಯಲ್ಪಡುವ ಇದು ಕಡಿಮೆ ಒತ್ತಡದ ವ್ಯವಸ್ಥೆ) ಅಥವಾ ಚಂಡಮಾರುತದ ಪರಿಚಲನೆ ಮತ್ತು ಇನ್ನೊಂದು ತಮಿಳುನಾಡಿನ ಒಳಭಾಗದಲ್ಲಿ ಚಲನೆ ಇದ್ದು, ಇದು ಉಷ್ಣಹವೆಗೆ ತಾತ್ಕಾಲಿಕ ಬ್ರೇಕ್ ಹಾಕಿದೆ ಎಂದು ಹೇಳಿದೆ.
ಟ್ರಫ್ ಪರಿಣಾಮ ತುಲನಾತ್ಮಕವಾಗಿ ಕಡಿಮೆ ಒತ್ತಡದ ಚಂಡಮಾರುತ ವಾಯುವ್ಯ ಮಧ್ಯಪ್ರದೇಶದಿಂದ ತೆಲಂಗಾಣದ ಮೂಲಕ ದಕ್ಷಿಣ ತಮಿಳುನಾಡಿಗೆ ಹಾದು ಹೋಗುತ್ತದೆ. ಖಾಸಗಿ ಮುನ್ಸೂಚಕ ಸ್ಕೈಮೆಟ್ ಹವಾಮಾನ ಸಂಸ್ಥೆಯ ಮಾಹಿತಿ ಅನ್ವಯ ಈಶಾನ್ಯ ಬಿಹಾರದಿಂದ ಜಾರ್ಖಂಡ್ ಮೂಲಕ ಒಡಿಶಾದವರೆಗೆ ಮತ್ತೊಂದು ಟ್ರಫ್ ಅಥವಾ ಚಂಡಮಾರುತವನ್ನು ವಿಸ್ತರಿಸಿದೆ ಎಂದು ಹೇಳಿದೆ.
ಹವಾಮಾನ ತಜ್ಞರು ಹೇಳುವ ಪ್ರಕಾರ ಒಂದು ಟ್ರಫ್ ಸಾಮಾನ್ಯವಾಗಿ ಮೋಡ ಕವಿದ ವಾತಾವರಣ ಮತ್ತು ಮಳೆಯನ್ನು ತರುತ್ತದೆ, ಇದು ತಾಪಮಾನದಲ್ಲಿ ಕುಸಿತಕ್ಕೆ ಕಾರಣವಾಗುತ್ತದೆ ಎಂದು ಹೇಳಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


