ದೇಶ

ದೋಹಾದಲ್ಲಿ ಭಾರತೀಯ ಕರೆನ್ಸಿ ಬಳಸಿ ಪ್ರಧಾನಿ ಮೋದಿಗೆ ಮಿಕಾ ಸಿಂಗ್ ಸೆಲ್ಯೂಟ್!

ಕತಾರ್‌ನ ದೋಹಾ ವಿಮಾನ ನಿಲ್ದಾಣದಲ್ಲಿ ಭಾರತೀಯ ಕರೆನ್ಸಿ ಬಳಸಲು ನಮಗೆ ಅನುವು ಮಾಡಿಕೊಡ್ಡ ಪ್ರಧಾನಮಂತ್ರಿ ನರೇಂದ್ರ ಮೋದಿಯವರಿಗೆ, ಖ್ಯಾತ ಗಾಯಕ ಮಿಕಾ ಸಿಂಗ್ ಅವರು ಸೆಲ್ಯೂಟ್ ಹೊಡೆದಿದ್ದಾರೆ.

ದೋಹಾದಲ್ಲಿ ಭಾರತೀಯ ಕರೆನ್ಸಿ ಬಳಸಿ ಪ್ರಧಾನಿ ಮೋದಿಗೆ ಮಿಕಾ ಸಿಂಗ್ ಸೆಲ್ಯೂಟ್!
ಮಿಕಾ ಸಿಂಗ್
Published On :

ನವದೆಹಲಿ: ಕತಾರ್‌ನ ದೋಹಾ ವಿಮಾನ ನಿಲ್ದಾಣದಲ್ಲಿ ಭಾರತೀಯ ಕರೆನ್ಸಿ ಬಳಸಲು ನಮಗೆ ಅನುವು ಮಾಡಿಕೊಡ್ಡ ಪ್ರಧಾನಮಂತ್ರಿ ನರೇಂದ್ರ ಮೋದಿಯವರಿಗೆ, ಖ್ಯಾತ ಗಾಯಕ ಮಿಕಾ ಸಿಂಗ್ ಅವರು ಸೆಲ್ಯೂಟ್ ಹೊಡೆದಿದ್ದಾರೆ.

ಮಿಕಾ ಸಿಂಗ್‌ ಕತಾರ್ ಅವರು, ದೋಹಾ ವಿಮಾನ ನಿಲ್ದಾಣದಲ್ಲಿರುವ ಮಳಿಗೆಗೆ ಭೇಟಿ ನೀಡಿದ್ದು, ಈ ವೇಳೆ ಹಲವು ವಸ್ತುಗಳನ್ನು ಖರೀದಿಸಿದ್ದಾರೆ. ನಂತರ ಭಾರತೀಯ ಕರೆನ್ಸಿ ರೂಪಾಯಲ್ಲಿಯೇ ಬಿಲ್‌ ಪಾವತಿಸಿದ್ದಾರೆ. ಕತಾರ್‌ನಂತಹ ಮುಂದುವರಿದ ದೇಶದಲ್ಲಿ ಭಾರತದ ಕರೆನ್ಸಿಗೆ ಅನುವು ಮಾಡಿಕೊಟ್ಟಿರುವುದಕ್ಕೆ ಮಿಕಾ ಸಿಂಗ್ ಅವರು ಬಹಳ ಸಂತಸ ವ್ಯಕ್ತಪಡಿಸಿದ್ದಾರೆ.

ಈ ಕುರಿತು ದೋಹಾ ವಿಮಾನ ನಿಲ್ದಾಣದಿಂದ ಮಿಕಾ ಸಿಂಗ್ ಅವರು, ಸಾಮಾಜಿಕ ಜಾಲತಾಣ ಟ್ವಿಟರ್ ನಲ್ಲಿ ವೀಡಿಯೋವೊಂದನ್ನು ಪೋಸ್ಟ್ ಮಾಡಿದ್ದಾರೆ.

ದೋಹಾ ಏರ್ ಪೋರ್ಟ್‌ನಲ್ಲಿ ಶಾಪಿಂಗ್ ಮಾಡುವಾಗ ಭಾರತೀಯ ರೂಪಾಯಿಗಳನ್ನು ಬಳಸಲು ನನಗೆ ತುಂಬಾ ಹೆಮ್ಮೆ ಎನಿಸಿತು… ನೀವು ಇಲ್ಲಿನ ಯಾವುದೇ ರೆಸ್ಟೊರೆಂಟ್‌ನಲ್ಲೂ ರೂಪಾಯಿಗಳನ್ನು ಬಳಸಬಹುದು…ಇದು ಅದ್ಭುತವಲ್ಲವೇ?. ನಮ್ಮ ಹಣವನ್ನು ಡಾಲರ್‌ನಂತೆ ಬಳಸಲು ನಮಗೆ ಅನುವು ಮಾಡಿಕೊಟ್ಟಿದ್ದಕ್ಕಾಗಿ ನರೇಂದ್ರ ಮೋದಿ ಅವರಿಗೆ ಒಂದು ದೊಡ್ಡ ನಮಸ್ಕಾರ ಎಂದು ಮಿಕಾ ಸಿಂಗ್ ತಮ್ಮ ಟ್ವೀಟ್‌ನಲ್ಲಿ ತಿಳಿಸಿದ್ದಾರೆ.

ಮಿಕಾ ಸಿಂಗ್ ಅವರ ಈ ಟ್ವೀಟ್‌ಗೆ ಅನೇಕರಿಂದ ಮೆಚ್ಚುಗೆ ವ್ಯಕ್ತವಾಗಿದೆ. ಭಾರತೀಯ ಕರೆನ್ಸಿ ಬಲಗೊಳ್ಳುತ್ತಿದೆ ಎಂದು ಅನೇಕರು ಅಭಿಪ್ರಾಯಿಸಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.