10 ವರ್ಷಗಳ ಹಿಂದೆ ಪಡೆದ ಆಧಾರ್ ಕಾರ್ಡ್ ದಾಖಲೆ ನವೀಕರಿಸಿ: ಯುಐಡಿಎಐ
10 ವರ್ಷಗಳ ಹಿಂದೆ ಆಧಾರ್ ಕಾರ್ಡ್ ಪಡೆದು, ಅಂದಿನಿಂದ ಇದುವರೆಗೆ ತಮ್ಮ ವಿವರಗಳನ್ನು ನವೀಕರಿಸದಿರುವವರು ತಮ್ಮ ಗುರುತಿನ ಮತ್ತು ವಿಳಾಸದ ದಾಖಲೆಗಳನ್ನು ನವೀಕರಿಸುವಂತೆ ಯುಐಡಿಎಐ ಮಂಗಳವಾರ ಮನವಿ ಮಾಡಿದೆ.

ನವದೆಹಲಿ: 10 ವರ್ಷಗಳ ಹಿಂದೆ ಆಧಾರ್ ಕಾರ್ಡ್ ಪಡೆದು, ಅಂದಿನಿಂದ ಇದುವರೆಗೆ ತಮ್ಮ ವಿವರಗಳನ್ನು ನವೀಕರಿಸದಿರುವವರು ತಮ್ಮ ಗುರುತಿನ ಮತ್ತು ವಿಳಾಸದ ದಾಖಲೆಗಳನ್ನು ನವೀಕರಿಸುವಂತೆ ಯುಐಡಿಎಐ ಮಂಗಳವಾರ ಮನವಿ ಮಾಡಿದೆ.
ಆಧಾರ್ ಸಂಖ್ಯೆಗಳನ್ನು ನೀಡುವ ಸರ್ಕಾರಿ ಸಂಸ್ಥೆ ಯುಐಡಿಎಐ, ಆಧಾರ್ ಅಪ್ಡೇಟ್ ಅನ್ನು ಆನ್ಲೈನ್ನಲ್ಲಿ ಮತ್ತು ಆಧಾರ್ ಕೇಂದ್ರಗಳಲ್ಲಿ ಮಾಡಬಹುದು ಎಂದು ಹೇಳಿದೆ.
10 ವರ್ಷಗಳ ಹಿಂದೆ ವಿಶಿಷ್ಟ ಗುರುತಿನ ಸಂಖ್ಯೆಯನ್ನು ಪಡೆದ ಮತ್ತು ಇದುವರೆಗೆ ಯಾವುದೇ ನವೀಕರಣ ಮಾಡದವರು ತಮ್ಮ ದಾಖಲೆಗಳನ್ನು ನವೀಕರಿಸಬೇಕು ಎಂದು ಯುಐಡಿಎಐ "ವಿನಂತಿ" ಮಾಡಿದೆ.
ಆದಾಗ್ಯೂ, ಈ ನವೀಕರಣವು ಕಡ್ಡಾಯವಾಗಿದೆಯೇ ಎಂಬುದನ್ನು ಮಾತ್ರ ಯುಐಡಿಎಐ ಸ್ಪಷ್ಟಪಡಿಸಿಲ್ಲ.
ಅಗತ್ಯ ಶುಲ್ಕವನ್ನು ಪಾವತಿಸಿದ ನಂತರ ಗುರುತಿನ ದಾಖಲೆ ಮತ್ತು ನಿವಾಸದ ಪುರಾವೆಗಳ ನವೀಕರಣ ಮಾಡಲಾಗುವುದು. ನನ್ನ ಆಧಾರ್ ಪೋರ್ಟಲ್ನಲ್ಲಿ ಅಥವಾ ಹತ್ತಿರದ ಆಧಾರ್ ಕೇಂದ್ರಕ್ಕೆ ಭೇಟಿ ನೀಡುವ ಮೂಲಕ ನವೀಕರಿಸಬಹುದು ಎಂದು ಯುಐಡಿಎಐ ತಿಳಿಸಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


