ದೇಶ

ನಾನು 'ಸಲಿಂಗಕಾಮಿ' ಎಂಬ ಕಾರಣಕ್ಕೆ ನ್ಯಾಯಾಧೀಶರಾಗಿ ನೇಮಿಸುತ್ತಿಲ್ಲ: ಸೌರಭ್ ಕಿರ್ಪಾಲ್

ತಾವು ನ್ಯಾಯಾಧೀಶರಾಗಿ ನೇಮಕಗೊಳ್ಳಲು ವಿಳಂಬವಾಗುತ್ತಿರುವುದಕ್ಕೆ ಸಲಿಂಗಕಾಮವೇ ಕಾರಣ ಎಂದು ಸಲಿಂಗಕಾಮಿ ಹಿರಿಯ ವಕೀಲ ಮತ್ತು ಲೇಖಕ ಸೌರಭ್ ಕಿರ್ಪಾಲ್ ಅವರು ಹೇಳಿರುವುದಾಗಿ ವರದಿಯಾಗಿದೆ.

ನಾನು 'ಸಲಿಂಗಕಾಮಿ' ಎಂಬ ಕಾರಣಕ್ಕೆ ನ್ಯಾಯಾಧೀಶರಾಗಿ ನೇಮಿಸುತ್ತಿಲ್ಲ: ಸೌರಭ್ ಕಿರ್ಪಾಲ್
ಸೌರಭ್ ಕಿರ್ಪಾಲ್
Published On :

ನವದೆಹಲಿ: ತಾವು ನ್ಯಾಯಾಧೀಶರಾಗಿ ನೇಮಕಗೊಳ್ಳಲು ವಿಳಂಬವಾಗುತ್ತಿರುವುದಕ್ಕೆ ಸಲಿಂಗಕಾಮವೇ ಕಾರಣ ಎಂದು ಸಲಿಂಗಕಾಮಿ ಹಿರಿಯ ವಕೀಲ ಮತ್ತು ಲೇಖಕ ಸೌರಭ್ ಕಿರ್ಪಾಲ್ ಅವರು ಹೇಳಿರುವುದಾಗಿ ವರದಿಯಾಗಿದೆ.

2017 ರಿಂದ ಕಿರ್ಪಾಲ್ ಅವರ ನೇಮಕಾತಿಯನ್ನು ಸ್ಥಗಿತಗೊಳಿಸಲಾಗಿದೆ. ದೆಹಲಿ ಹೈಕೋರ್ಟ್ ಕೊಲಿಜಿಯಂ 2017 ರಲ್ಲಿ ಕಿರ್ಪಾಲ್ ಅವರನ್ನು ನ್ಯಾಯಾಧೀಶರನ್ನಾಗಿ ನೇಮಿಸುವಂತೆ ಶಿಫಾರಸು ಮಾಡಿತ್ತು. ತರುವಾಯ, ಸುಪ್ರೀಂ ಕೋರ್ಟ್ ಕೊಲಿಜಿಯಂ ಅವರ ಹೆಸರನ್ನು ನಾಲ್ಕು ಬಾರಿ ಶಿಫಾರಸು ಮಾಡಿತು. ಆದರೆ ಎಲ್ಲಾ ಸಂದರ್ಭಗಳಲ್ಲಿ ಅವರ ನೇಮಕಾತಿಯನ್ನು ಮುಂದೂಡಲಾಯಿತು.

"ಕಾರಣ ನನ್ನ ಲೈಂಗಿಕತೆ, ಸರ್ಕಾರ ಬಹಿರಂಗವಾಗಿ ಸಲಿಂಗಕಾಮಿ ಎಂದು ಹೇಳಿಕೊಂಡಿರುವ ವ್ಯಕ್ತಿಯನ್ನು ಬೆಂಚ್‌ಗೆ ನೇಮಿಸುತ್ತದೆ ಎಂದು ನನಗೆ ಅನಿಸುತ್ತಿಲ್ಲ" ಎಂದು ಕಿರ್ಪಾಲ್ ಹೇಳಿರುವುದಾಗಿ ಎನ್‌ಡಿಟಿವಿ ವರದಿ ಮಾಡಿದೆ.

ಸುಪ್ರೀಂ ಕೋರ್ಟ್ ಸಲಿಂಗಕಾಮವನ್ನು ಅಪರಾಧವೆಂದು ಪರಿಗಣಿಸಿದ ಮಹತ್ವದ ಪ್ರಕರಣದ ಅರ್ಜಿದಾರರಲ್ಲಿ ಸೌರಭ್ ಕಿರ್ಪಾಲ್ ಸಹ ಒಬ್ಬರಾಗಿದ್ದರು.

ಸೌರಭ್ ಕಿರ್ಪಾಲ್ ಅವರು 2002ರಲ್ಲಿ ಭಾರತದ ಮುಖ್ಯ ನ್ಯಾಯಮೂರ್ತಿಯಾಗಿ ಸೇವೆ ಸಲ್ಲಿಸಿದ ಭೂಪಿಂದರ್ ನಾಥ್ ಕಿರ್ಪಾಲ್ ಅವರ ಪುತ್ರ.

ಅಕ್ಟೋಬರ್ 2017ರಲ್ಲಿ ಮೊದಲ ಬಾರಿಗೆ ನ್ಯಾಯಮೂರ್ತಿ ಗೀತಾ ಮಿತ್ತಲ್ ನೇತೃತ್ವದ ದೆಹಲಿ ಹೈಕೋರ್ಟ್ ಕೊಲಿಜಿಯಂ ಕಿರ್ಪಾಲ್ ಅವರನ್ನು ಶಿಫಾರಸು ಮಾಡಿತು. ಸೆಪ್ಟೆಂಬರ್ 2018ರಲ್ಲಿ, ಸುಪ್ರೀಂ ಕೋರ್ಟ್ ಕೊಲಿಜಿಯಂ ಇದನ್ನು “ಕೆಲವು ಸಮಯದ ನಂತರ” ಪರಿಗಣನೆಗೆ ತೆಗೆದುಕೊಳ್ಳಲು ನಿರ್ಧರಿಸಿತು. ಜನವರಿ 2019ರಲ್ಲಿ ಮತ್ತು ನಂತರ ಏಪ್ರಿಲ್ 2019ರಲ್ಲಿ ಮತ್ತೆ ಹೆಸರು ಮುನ್ನೆಲೆಗೆ ಬಂದಾಗ ಕೊಲಿಜಿಯಂ ತನ್ನ ನಿರ್ಧಾರವನ್ನು ಮುಂದೂಡಿತು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.