ದೇಶ

ಹುಟ್ಟುಹಬ್ಬದ ಪಾರ್ಟಿಗೆ ಬುಕ್ ಮಾಡಿದ ಬಂಗಲೆಯ ಈಜುಕೊಳದಲ್ಲಿ ಬಿದ್ದು 2 ವರ್ಷದ ಮಗು ಸಾವು!

ಹುಟ್ಟುಹಬ್ಬ ಆಚರಣೆಯ ಪಾರ್ಟಿಗೆಂದು ಬುಕ್ ಮಾಡಿದ್ದ ಬಂಗಲೆಯ ಈಜುಕೊಳದಲ್ಲಿ ಮುಳುಗಿ 2 ವರ್ಷದ ಬಾಲಕ ಸಾವನ್ನಪ್ಪಿರುವ ದಾರುಣ ಘಟನೆ ಮಹಾರಾಷ್ಟ್ರ ರಾಜ್ಯದಲ್ಲಿ ವರದಿಯಾಗಿದೆ.

ಹುಟ್ಟುಹಬ್ಬದ ಪಾರ್ಟಿಗೆ ಬುಕ್ ಮಾಡಿದ ಬಂಗಲೆಯ ಈಜುಕೊಳದಲ್ಲಿ ಬಿದ್ದು 2 ವರ್ಷದ ಮಗು ಸಾವು!
ಸಾಂಕೇತಿಕ ಚಿತ್ರ
Published On :

ಪುಣೆ: ಹುಟ್ಟುಹಬ್ಬ ಆಚರಣೆಯ ಪಾರ್ಟಿಗೆಂದು ಬುಕ್ ಮಾಡಿದ್ದ ಬಂಗಲೆಯ ಈಜುಕೊಳದಲ್ಲಿ ಮುಳುಗಿ 2 ವರ್ಷದ ಬಾಲಕ ಸಾವನ್ನಪ್ಪಿರುವ ದಾರುಣ ಘಟನೆ ಮಹಾರಾಷ್ಟ್ರ ರಾಜ್ಯದಲ್ಲಿ ವರದಿಯಾಗಿದೆ. ಮಹಾರಾಷ್ಟ್ರದ ಲೋನಾವಾಲಾದ ಬಂಗಲೆಯ ಈಜುಕೊಳದಲ್ಲಿ ಎರಡು ವರ್ಷದ ಬಾಲಕ ಮುಳುಗಿ ಸಾವನ್ನಪ್ಪಿದ್ದಾನೆ.  ಅಲ್ಲಿ ಅವನ ಕುಟುಂಬವು ಆತನ ಹುಟ್ಟುಹಬ್ಬವನ್ನು ಆಚರಿಸಲು ಒಟ್ಟುಗೂಡಿತ್ತು ಎಂದು ಪೊಲೀಸರು ಮಂಗಳವಾರ ತಿಳಿಸಿದ್ದಾರೆ.

ಈ ಘಟನೆಯು ಜುಲೈ 13 ರಂದು ಬಂಗಲೆಯಲ್ಲಿ ನಡೆದಿದ್ದು, ಮರುದಿನ ಮಗುವಿನ ಎರಡನೇ ಹುಟ್ಟುಹಬ್ಬವನ್ನು ಆಚರಿಸಲು ನಾಸಿಕ್ ಮೂಲದ ಕುಟುಂಬವು ಬುಕ್ ಮಾಡಿತ್ತು. ಪೋಷಕರು ಮತ್ತು ಕುಟುಂಬದ ಇತರ ಸದಸ್ಯರು ಬಂಗಲೆಯ ಮೊದಲ ಮಹಡಿಯಲ್ಲಿ ನಿರತರಾಗಿದ್ದರು. ಬಾಲಕ ಬಂಗಲೆಯ ಹೊರಗಿನ ಈಜುಕೊಳದಲ್ಲಿ ಬಿದ್ದಿ ಸಾವನ್ನಪ್ಪಿದೆ ಎಂದು ಹೇಳಿದರು.

ಬಾಲಕ ನಾಪತ್ತೆಯಾಗಿರುವುದು ಕುಟುಂಬಸ್ಥರಿಗೆ ಗೊತ್ತಾಗಲು 10ರಿಂದ 15 ನಿಮಿಷ ತೆಗೆದುಕೊಂಡಿದ್ದು, ತೀವ್ರ ಹುಡುಕಾಟದ ಬಳಿಕ ಕೊಳದಲ್ಲಿ ಶವ ಪತ್ತೆಯಾಗಿತ್ತು. ಈ ಸಂಬಂಧ ಆಕಸ್ಮಿಕ ಸಾವು ಎಂದು ಪ್ರಕರಣ ದಾಖಲಿಸಿಕೊಳ್ಳಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.