ಅಮರನಾಥ ಮೇಘಸ್ಫೋಟ ದುರಂತ: ಐಎಎಫ್ ನಿಂದ 8 ಹೆಲಿಕಾಫ್ಟರ್ ಗಳ ನಿಯೋಜನೆ
ಅಮರನಾಥ ಮೇಘಸ್ಫೋಟ ದುರಂತದ ಹಿನ್ನೆಲೆಯಲ್ಲಿ ಭಾರತೀಯ ವಾಯುಪಡೆ ರಕ್ಷಣಾ ಕಾರ್ಯಾಚರಣೆಗಾಗಿ 8 ಹೆಲಿಕಾಫ್ಟರ್ ಗಳನ್ನು ನಿಯೋಜಿಸಿದೆ.

ಶ್ರೀನಗರ: ಅಮರನಾಥ ಮೇಘಸ್ಫೋಟ ದುರಂತದ ಹಿನ್ನೆಲೆಯಲ್ಲಿ ಭಾರತೀಯ ವಾಯುಪಡೆ ರಕ್ಷಣಾ ಕಾರ್ಯಾಚರಣೆಗಾಗಿ 8 ಹೆಲಿಕಾಫ್ಟರ್ ಗಳನ್ನು ನಿಯೋಜಿಸಿದೆ. ಅಮರನಾಥ ಗುಹೆ ದೇವಾಲಯದ ಬಳಿ ಮಳೆಯ ಕಾರಣದಿಂದಾಗಿ ಸಾವನ್ನಪ್ಪಿರುವವರ ಸಂಖ್ಯೆ 16 ಕ್ಕೆ ಏರಿಕೆಯಾಗಿದೆ.
ನಾಲ್ಕು ಎಂಐ-17v5 ಹಾಗೂ ನಾಲ್ಕು ಚೀತಾಲ್ ಹೆಲಿಕಾಫ್ಟರ್ ಗಳನ್ನು ರಕ್ಷಣಾ ಕಾರ್ಯಾಚರಣೆಗೆ ನಿಯೋಜಿಸಿರುವುದಾಗಿ ಐಎಎಫ್ ಹೇಳಿದೆ. ಗುಹೆ ದೇವಾಲಯವಿರುವ ಪ್ರದೇಶದಿಂದ ಚೀತಾಲ್ ಹೆಲಿಕಾಫ್ಟರ್ ಗಳ ಮೂಲಕ ಐವರು ಎನ್ ಡಿಆರ್ ಎಫ್ ಹಾಗೂ ಸೇನಾ ಸಿಬ್ಬಂದಿಗಳ ಸಹಾಯ, 3.5 ಟನ್ ಗಳ ಪರಿಹಾರ ಸಾಮಾಗ್ರಿಗಳನ್ನು ಕೊಂಡೊಯ್ದು 45 ಮಂದಿಯನ್ನು ರಕ್ಷಿಸಲಾಗಿದೆ ಎಂದು ಐಎಎಫ್ ವಕ್ತಾರರು ಹೇಳಿದ್ದಾರೆ.
ಎಂಐ-17v5 ಹೆಲಿಕಾಫ್ಟರ್ ಗಳು 9.5 ಟನ್ ಗಳ ಪರಿಹಾರ ಸಾಮಗ್ರಿಗಳನ್ನು ತಲುಪಿಸಿದ್ದು,64 ಮಂದಿಯನ್ನು ರಕ್ಷಿಸಲಾಗಿದ್ದು, 7 ಮಂದಿಯ ಮೃತ ದೇಹವನ್ನು ಇದೇ ಹೆಲಿಕಾಫ್ಟರ್ ಗಳ ಸಹಾಯದಿಂದ ಘಟನಾ ಸ್ಥಳದಿಂದ ಹೊರತರಲಾಗಿದೆ. 32 ಸಾರಿಗೆ ವಿಮಾನಗಳು ಹಾಗೂ ಡಾರ್ನಿಯರ್ ವಿಮಾನವನ್ನೂ ರಕ್ಷಣಾ ಕಾರ್ಯಾಚರಣೆಗಳಿಗೆ ಬಳಕೆ ಮಾಡಿಕೊಳ್ಳಲಾಗುತ್ತಿದೆ.
ಜಮ್ಮು-ಕಾಶ್ಮೀರ ಹಾಗೂ ಲಡಾಖ್ ಪ್ರದೇಶದಲ್ಲಿ ಎಲ್ಲಾ ಪ್ರಮುಖ ವಾಯುನೆಲೆಗಳಲ್ಲಿ ವಿಮಾನಗಳು ಸನ್ನದ್ಧಗೊಂಡಿವೆ ಎಂದು ವಕ್ತಾರರು ತಿಳಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


