ನಾಳೆ ಭಗವಂತ್ ಮಾನ್ ಮದುವೆ: ಪಂಜಾಬ್ ಸಿಎಂ ಕೈಹಿಡಿಯುತ್ತಿರುವ ಅದೃಷ್ಟವಂತೆ ಯಾರು ಗೊತ್ತ?
ಪಂಜಾಬ್ ಮುಖ್ಯಮಂತ್ರಿ ಭಗವಂತ್ ಮಾನ್ ಅವರು ವಿಚ್ಛೇದನವಾದ 6 ವರ್ಷಗಳ ನಂತರ ಜುಲೈ 7ರಂದು ಎರಡನೇ ಮದುವೆಯಾಗುತ್ತಿದ್ದು ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಭಾಗವಹಿಸಲಿದ್ದಾರೆ.

ಪಂಜಾಬ್ ಮುಖ್ಯಮಂತ್ರಿ ಭಗವಂತ್ ಮಾನ್ ಅವರು ವಿಚ್ಛೇದನವಾದ 6 ವರ್ಷಗಳ ನಂತರ ಜುಲೈ 7ರಂದು ಎರಡನೇ ಮದುವೆಯಾಗುತ್ತಿದ್ದು ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಭಾಗವಹಿಸಲಿದ್ದಾರೆ.
ಸಿಎಂ ತಮ್ಮ ಅಧಿಕೃತ ನಿವಾಸದಲ್ಲಿ ವಿವಾಹವಾಗಲಿದ್ದು, ಸಮಾರಂಭದಲ್ಲಿ ಆಪ್ತರು ಹಾಗೂ ಸಂಬಂಧಿಕರು ಮಾತ್ರ ಭಾಗವಹಿಸಲಿದ್ದಾರೆ. ಪಂಜಾಬ್ ಸಿಎಂ ವಿವಾಹವಾಗುತ್ತಿರುವ ವಧು ಡಾ. ಗುರುಪ್ರೀತ್ ಕೌರ್ ಎಂಬಿಬಿಎಸ್ ಮಾಡಿದ್ದಾರೆ.
ಭಗವಂತ್ ಮನ್ ಆರು ವರ್ಷಗಳ ಹಿಂದೆ ಮೊದಲ ಪತ್ನಿ ಇಂದರ್ ಪ್ರೀತ್ ಕೌರ್ ರಿಂದ ವಿಚ್ಛೇದನ ಪಡೆದಿದ್ದರು. ಮೊದಲ ಪತ್ನಿ ಮತ್ತು ಇಬ್ಬರು ಮಕ್ಕಳು ಅಮೇರಿಕಾದಲ್ಲಿ ವಾಸಿಸುತ್ತಿದ್ದಾರೆ. ಮಾನ್ ಮಕ್ಕಳಿಬ್ಬರೂ ತಂದೆಯ ಪ್ರಮಾಣ ವಚನ ಸ್ವೀಕಾರ ಸಮಾರಂಭಕ್ಕೆ ಬಂದಿದ್ದರು.
ವರದಿಯ ಪ್ರಕಾರ, ಭಗವಂತ್ ಮಾನ್ ಅವರ ತಾಯಿ ಮತ್ತು ಸಹೋದರಿ ವಧುವನ್ನು ಆಯ್ಕೆ ಮಾಡಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


