ನೇಮಕಾತಿ 2022: ಅಂಚೆ ಇಲಾಖೆಯಲ್ಲಿ 7 ಹುದ್ದೆಗಳು ಖಾಲಿ, ಕೂಡಲೇ ಅರ್ಜಿ ಸಲ್ಲಿಸಿ
ಭಾರತೀಯ ಅಂಚೆ ಇಲಾಖೆಯಲ್ಲಿ 7 ನುರಿತ ಕುಶಲಕರ್ಮಿ ಹುದ್ದೆಗಳು ಖಾಲಿ ಇದ್ದು, ಆಸಕ್ತರು ಅರ್ಜಿ ಸಲ್ಲಿಸಬಹುದು. ಈ ಹುದ್ದೆಗಳಿಗೆ ಅರ್ಜಿ ಹಾಕಲು 8ನೇ ತರಗತಿ ಪಾಸಾಗಿದ್ರೆ ಸಾಕು.

ಭಾರತೀಯ ಅಂಚೆ ಇಲಾಖೆಯಲ್ಲಿ 7 ನುರಿತ ಕುಶಲಕರ್ಮಿ ಹುದ್ದೆಗಳು ಖಾಲಿ ಇದ್ದು, ಆಸಕ್ತರು ಅರ್ಜಿ ಸಲ್ಲಿಸಬಹುದು. ಈ ಹುದ್ದೆಗಳಿಗೆ ಅರ್ಜಿ ಹಾಕಲು 8ನೇ ತರಗತಿ ಪಾಸಾಗಿದ್ರೆ ಸಾಕು.
ಹುದ್ದೆ: ಎಂ.ವಿ ಮೆಕ್ಯಾನಿಕ್, ಎಂ.ವಿ ಎಲೆಕ್ಟ್ರಿಷಿಯನ್, ಕೂಪರ್ & ಟಿನ್ಸ್ಮಿತ್ (ನುರಿತ), ಅಪ್ಹೋಲ್ಸ್ಟರ್ (ನುರಿತ),
ಒಟ್ಟು ಹುದ್ದೆಗಳು: 7
ಕರ್ತವ್ಯ ಸ್ಥಳ: ತಮಿಳುನಾಡು
ಶೈಕ್ಷಣಿಕ ವಿದ್ಯಾರ್ಹತೆ:
ಅಭ್ಯರ್ಥಿಗಳು ಯಾವುದೇ ಮಾನ್ಯತೆ ಪಡೆದ ವಿಶ್ವವಿದ್ಯಾಲಯ/ಮಂಡಳಿಯಿಂದ ಕಡ್ಡಾಯವಾಗಿ 8ನೇ ತರಗತಿ ಪಾಸಾಗಿರಬೇಕು.
ವಯೋಮಿತಿ: ಅಭ್ಯರ್ಥಿಗಳ ವಯಸ್ಸು ಜುಲೈ, 01, 2022ಕ್ಕೆ ಕನಿಷ್ಠ 18 ವರ್ಷ ಮತ್ತು ಗರಿಷ್ಠ 30 ವರ್ಷ ಮೀರಿರಬಾರದು.
ವಯೋಮಿತಿ ಸಡಿಲಿಕೆ: ಒಬಿಸಿ ಅಭ್ಯರ್ಥಿಗಳಿಗೆ- 3 ವರ್ಷ, ಎಸ್ಸಿ ಅಭ್ಯರ್ಥಿಗಳಿಗೆ- 5 ವರ್ಷ ವಯೋಮಿತಿ ಸಡಿಲಿಕೆ ನೀಡಲಾಗುತ್ತದೆ.
ಅರ್ಜಿ ಸಲ್ಲಿಕೆ ವಿಧಾನ :
ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಬಯಸುವ ಅರ್ಹ ಹಾಗೂ ಆಸಕ್ತ ಅಭ್ಯರ್ಥಿಗಳು ಆನ್‌ಲೈನ್ ಮೂಲಕವೇ ಅರ್ಜಿಯನ್ನು ಸಲ್ಲಿಸಬೇಕು.
ಅಭ್ಯರ್ಥಿಗಳು ಇಲಾಖೆಯ ಅಧಿಕೃತ ವೆಬ್‌ಸೈಟ್ ವಿಳಾಸಕ್ಕೆ ಭೇಟಿ ನೀಡಿ, ಆನ್‌ಲೈನ್ ಅರ್ಜಿಯಲ್ಲಿ ಹುದ್ದೆಗೆ ಅಗತ್ಯವಿರುವ ಎಲ್ಲಾ ಮಾಹಿತಿಯನ್ನು ಭರ್ತಿ ಮಾಡಿ ಅರ್ಜಿ ಸಲ್ಲಿಸಬೇಕು.
ವೇತನ: ತಿಂಗಳಿಗೆ 19,900-63,200 ರೂ. ವೇತನ
ಅರ್ಜಿ ಶುಲ್ಕ: ಅರ್ಜಿ ಶುಲ್ಕ- 100 ರೂ. ಪರೀಕ್ಷೆ ಶುಲ್ಕ- 400 ರೂ. ಎಸ್ಸಿ/ಎಸ್ಟಿ/ಮಹಿಳಾ ಅಭ್ಯರ್ಥಿಗಳಿಗೆ ಯಾವುದೇ ಅರ್ಜಿ ಶುಲ್ಕ ಇಲ್ಲ. ಅರ್ಜಿ ಶುಲ್ಕ ಪಾವತಿಸುವ ಬಗೆ-IPO/UCR ರೆಸಿಪ್ಟ್
ಆಯ್ಕೆ ಪ್ರಕ್ರಿಯೆ: ಅಭ್ಯರ್ಥಿಗಳನ್ನು ಮೆರಿಟ್ ಲಿಸ್ಟ್ ಹಾಗೂ ಟ್ರೇಡ್ ಟೆಸ್ಟ್ ಆಧಾರದ ಮೇಲೆ ಹುದ್ದೆಗಳಿಗೆ ಆಯ್ಕೆ ಮಾಡಿಕೊಳ್ಳಲಾಗುತ್ತದೆ.
ಅರ್ಜಿ ಸಲ್ಲಿಕೆ:
ಅಭ್ಯರ್ಥಿಗಳು ಭರ್ತಿ ಮಾಡಿದ ಅರ್ಜಿ ನಮೂನೆಯನ್ನು ಅಗತ್ಯ ದಾಖಲಾತಿಗಳೊಂದಿಗೆ ಈ ವಿಳಾಸಕ್ಕೆ ಕಳುಹಿಸಬೇಕು.
ಸೀನಿಯರ್ ಮ್ಯಾನೇಜರ್(JAG),
ಮೇಲ್ ಮೋಟಾರ್ ಸರ್ವೀಸ್,
ನಂ.-37, ಗ್ರೀಮ್ಸ್ ರಸ್ತೆ,
ಚೆನ್ನೈ-600006
ಅರ್ಜಿ ಹಾಕಲು ಕೊನೆಯ ದಿನ: ಜನವರಿ 9, 2023
ಅರ್ಜಿ ಸಲ್ಲಿಕೆ ಮತ್ತು ಅಧಿಸೂಚನೆ ಕುರಿತ ಮಾಹಿತಿಗಾಗಿ ಇಲ್ಲಿ ಕ್ಲಿಕ್ ಮಾಡಿ
https://bityl.co/G6hY
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


