ಕೇರಳದ ಗುರುವಾಯೂರ್ ದೇವಸ್ಥಾನದ ಪ್ರಧಾನ ಅರ್ಚಕರಾಗಲಿರುವ ಯೂಟ್ಯೂಬರ್!
ಯೂಟ್ಯೂಬರ್, ವ್ಲಾಗರ್ ಮತ್ತು ಗಾಯಕರೂ ಆಗಿರುವ ಆಯುರ್ವೇದ ವೈದ್ಯರು ಕೇರಳದ ತ್ರಿಶೂರ್‌ನಲ್ಲಿರುವ ಕೇರಳದ ಪ್ರಸಿದ್ಧ ಗುರುವಾಯೂರ್ ದೇವಸ್ಥಾನದ ಮುಂದಿನ ಪ್ರಧಾನ ಅರ್ಚಕ ಅಥವಾ 'ಮೇಲ್ಶಾಂತಿ' ಆಗಲಿದ್ದಾರೆ.

ತ್ರಿಶೂರ್: ಯೂಟ್ಯೂಬರ್, ವ್ಲಾಗರ್ ಮತ್ತು ಗಾಯಕರೂ ಆಗಿರುವ ಆಯುರ್ವೇದ ವೈದ್ಯರು ಕೇರಳದ ತ್ರಿಶೂರ್‌ನಲ್ಲಿರುವ ಕೇರಳದ ಪ್ರಸಿದ್ಧ ಗುರುವಾಯೂರ್ ದೇವಸ್ಥಾನದ ಮುಂದಿನ ಪ್ರಧಾನ ಅರ್ಚಕ ಅಥವಾ 'ಮೇಲ್ಶಾಂತಿ' ಆಗಲಿದ್ದಾರೆ.
ಆರು ವರ್ಷಗಳಿಂದ ಮಾಸ್ಕೋದ ರಷ್ಯಾದ ಆಯುರ್ವೇದ ಚಿಕಿತ್ಸಾಲಯದಲ್ಲಿ ಆಯುರ್ವೇದ ವೈದ್ಯಕೀಯ ಅಭ್ಯಾಸ ಮಾಡುತ್ತಿದ್ದ ಪುರೋಹಿತರ ಕುಟುಂಬದ 34 ವರ್ಷದ ಡಾ.ಕಿರಣ್ ಆನಂದ್ ಕಕ್ಕಡ್ ಕಳೆದ ವಾರ ಗುರುವಾಯೂರು ದೇವಸ್ಥಾನದ ಮುಂದಿನ ಮೇಲ್ಶಾಂತಿಯಾಗಿ ಆಯ್ಕೆಯಾದರು. ಅವರು ಮುಂದಿನ ತಿಂಗಳಿನಿಂದ ಆರು ತಿಂಗಳ ಅವಧಿಗೆ ಅಧಿಕಾರ ವಹಿಸಿಕೊಳ್ಳುತ್ತಾರೆ. ನಂತರ ಅವರ ಸ್ಥಾನಕ್ಕೆ ಹೊಸ ಮೇಲ್ಶಾಂತಿ ಬರುತ್ತಾರೆ.
ದೇವರ ದಯೆ, ಅವರ ಆಶೀರ್ವಾದದಿಂದ ನನಗೆ ಈ ಭಾಗ್ಯ ಸಿಕ್ಕಿದೆ ಎಂದು ಅವರು ತಿಳಿಸಿದರು. ಆದಾಗ್ಯೂ ಅವರು ಹುದ್ದೆಗೆ ಅರ್ಜಿ ಸಲ್ಲಿಸುವ ಮೊದಲು ಅವರು ಹಲವಾರು ಪರಿಹಾರಗಳು ಮತ್ತು ಪೂಜೆಗಳಿಗೆ ಒಳಗಾಗಬೇಕಾಗಿತ್ತು. ವಿದೇಶದಲ್ಲಿರುವಾಗ ಅವರ ದೇಹದ ಮೇಲಿನ ಕೆಟ್ಟ ಅಥವಾ ದುಷ್ಪರಿಣಾಮಗಳನ್ನು ದೂರ ಮಾಡಲು ಅವರು ಪರಿಹಾರ ಪೂಜೆಗಳನ್ನು ನೆರವೇರಿಸಿದ್ದರು. ಸಂಪ್ರದಾಯಗಳ ಪ್ರಕಾರ ವಿದೇಶದಲ್ಲಿ ನಿತ್ಯಕರ್ಮಗಳನ್ನು ಮಾಡುವುದು ಕಷ್ಟಕರವಾದ ಕಾರಣ ಅವರ ದೇಹವು ಕೆಲವು ದುಷ್ಪರಿಣಾಮಗಳನ್ನು ಅನುಭವಿಸುತ್ತದೆ ಎಂಬ ನಂಬಿಕೆಯಿಂದ ವಿದೇಶಗಳಿಗೆ ಹೋಗುವವರು ದೇವಾಲಯದ ಆಚರಣೆಗಳು ಅಥವಾ ಚಟುವಟಿಕೆಗಳಲ್ಲಿ ಪಾಲ್ಗೊಳ್ಳಲು ಅನುಮತಿಸಲಾಗುವುದಿಲ್ಲ ಎಂದು ಅವರು ಹೇಳಿದರು.
ನಿತ್ಯಕರ್ಮಗಳು ಹಿಂದೂಗಳು ಪ್ರತಿದಿನ ಮಾಡಬೇಕಾದ ಆಚರಣೆಗಳು!
ಅದಕ್ಕೆ ಪರಿಹಾರವೆಂದರೆ ದುಷ್ಪರಿಣಾಮಗಳನ್ನು ಶೂನ್ಯಗೊಳಿಸಲು ಕೆಲವು ಆಚರಣೆಗಳು ಅಥವಾ ಪರಿಹಾರಗಳು. ನಾನು ರಷ್ಯಾದಲ್ಲಿದ್ದಾಗಲೂ ಪೂಜೆಗಳನ್ನು ಮಾಡುತ್ತಿದ್ದೆ, ಆದರೆ ನಾನು ಭಾರತಕ್ಕೆ ಹಿಂದಿರುಗಿದ ನಂತರ ಪರಿಹಾರ ಪೂಜೆಗಳನ್ನು ಮಾಡಿದ್ದೇನೆ ಎಂದು ಅವರು ಹೇಳಿದರು. ರಷ್ಯಾದಲ್ಲಿ ಯಶಸ್ವಿ ಆರು ವರ್ಷಗಳ ಸುದೀರ್ಘ ವೃತ್ತಿಜೀವನವನ್ನು ಆನಂದ್ ಅವರು ತಮ್ಮ ತಂದೆಯ ಇಚ್ಛೆಯಂತೆಯೇ ಮಾಡಿದ್ದೇನೆ ಎಂದರು.
ನಾನು ವಂಶಪಾರಂಪರ್ಯ ಅರ್ಚಕ. ನನ್ನ ತಂದೆಯೂ ಅರ್ಚಕರು. ಗುರುವಾಯೂರು ದೇವಸ್ಥಾನದ ನಾಲ್ಕು ಓತಿಕ್ಕನ ಕುಟುಂಬಗಳಲ್ಲಿ ನಾವು ಒಬ್ಬರಾಗಿದ್ದೇವೆ . ಆದ್ದರಿಂದ ನನ್ನ ತಂದೆಗೆ ವಯಸ್ಸಾಗುತ್ತಿದ್ದಂತೆ, ಓತಿಕ್ಕನ ಕರ್ತವ್ಯವನ್ನು ವಹಿಸಿಕೊಳ್ಳಲು ನನ್ನನ್ನು ಹಿಂತಿರುಗುವಂತೆ ಹೇಳಿದರು. ನಾನು ಹಿಂತಿರುಗಿ ಬಂದಿದ್ದೇನೆ ಎಂದು ಅವರು ಹೇಳಿದರು. ಓತಿಕ್ಕನ್ನರು ದೇವಾಲಯದಲ್ಲಿ ಅಭಿಷೇಕ ಅಥವಾ ಪಂತೀರಾದಿ ಪೂಜೆಯಂತಹ ದೈನಂದಿನ ಆಚರಣೆಗಳನ್ನು ಮಾಡುವ ಪುರೋಹಿತರ ವರ್ಗವಾಗಿದೆ.ತನ್ನ ತಂದೆಯಿಂದ ಅಧಿಕಾರ ವಹಿಸಿಕೊಳ್ಳುವುದರ ಜೊತೆಗೆ ಅವರು ಆಯುರ್ವೇದ ಕ್ಲಿನಿಕ್ ಅನ್ನು ತೆರೆಯುವ ಯೋಜನೆಯನ್ನು ಸಹ ಹೊಂದಿದ್ದರು.
ಅವರನ್ನು ಮೇಲ್ಶಾಂತಿಯಾಗಿ ನೇಮಕ ಮಾಡುವುದರೊಂದಿಗೆ, ಅವರ ಕ್ಲಿನಿಕ್ ಯೋಜನೆಗಳನ್ನು ಸದ್ಯಕ್ಕೆ ಸ್ಥಗಿತಗೊಳಿಸಲಾಗಿದೆ. ಏಕೆಂದರೆ ಅವರ ಆರು ತಿಂಗಳ ಸುದೀರ್ಘ ಅಧಿಕಾರಾವಧಿಯಲ್ಲಿ ಅವರು ಎಲ್ಲಾ ಸಮಯದಲ್ಲೂ ದೇವಸ್ಥಾನದೊಳಗೆ ಇರುತ್ತಾರೆ.ಇದೀಗ ಅವರು ಮನೆಗೆ ಮರಳಿದ್ದು, ಮೇಲ್ಶಾಂತಿ ಆಗಿರುವುದರಿಂದ ಅವರ ಕುಟುಂಬದಲ್ಲಿ ಸಂತಸ ಮೂಡಿದೆ ಎಂದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


