ಜಾರ್ಖಂಡ್: ಸೇತುವೆಯಿಂದ ಬಿದ್ದ 50 ಪ್ರಯಾಣಿಕರಿದ್ದ ಬಸ್, 6 ಸಾವು, ಹಲವರಿಗೆ ಗಾಯ
50 ಪ್ರಯಾಣಿಕರಿದ್ದ ಬಸ್ ಸೇತುವೆ ಮೇಲಿಂದ ಬಿದ್ದ ಪರಿಣಾಮ 6 ಮಂದಿ ಸಾವನ್ನಪ್ಪಿದ್ದು, ಹಲವರಿಗೆ ಗಾಯಗಳಾಗಿರುವ ಘಟನೆ ಜಾರ್ಖಂಡ್ ನ ಹಜಾರಿಬಾಗ್ ಜಿಲ್ಲೆಯಲ್ಲಿ ನಡೆದಿದೆ.

ರಾಂಚಿ: 50 ಪ್ರಯಾಣಿಕರಿದ್ದ ಬಸ್ ಸೇತುವೆ ಮೇಲಿಂದ ಬಿದ್ದ ಪರಿಣಾಮ 6 ಮಂದಿ ಸಾವನ್ನಪ್ಪಿದ್ದು, ಹಲವರಿಗೆ ಗಾಯಗಳಾಗಿರುವ ಘಟನೆ ಜಾರ್ಖಂಡ್ ನ ಹಜಾರಿಬಾಗ್ ಜಿಲ್ಲೆಯಲ್ಲಿ ನಡೆದಿದೆ.
ಇದನ್ನೂ ಓದಿ: ಬಿಹಾರದಿಂದ ಸಾರಾಯಿ ಹುಡುಕಿಕೊಂಡು ಬರುವ 'ಕುಡುಕರಿಗೆ' ಪ್ರವೇಶ ನಿಷೇಧಿಸಿದ ಜಾರ್ಖಂಡ್ ಗ್ರಾಮ!
ಗಿರಿದಿಹ್ ಜಿಲ್ಲೆಯಿಂದ ರಾಂಚಿಗೆ ತೆರಳುತ್ತಿದ್ದ ಬಸ್ ಇದಾಗಿದ್ದು, ಸೇತುವೆ ತಡೆ ಕಂಬಿಯನ್ನು ಮುರಿದು, ಸಿವಾನ್ನೆ ನದಿಯ ಒಣ ಪ್ರದೇಶಕ್ಕೆ ಬಿದ್ದಿದೆ ಎಂದು ತತಿಜಾರಿಯಾ ಪೊಲೀಸ್ ಠಾಣೆ ಪ್ರದೇಶದ ಪೊಲೀಸ್ ಅಧೀಕ್ಷಕ ಮನೋಜ್ ರತನ್ ಚೋಥೆ ಹೇಳಿದ್ದಾರೆ.
ಕೆಲವು ಪ್ರಯಾಣಿಕರು, ಬಸ್ ನಲ್ಲೇ ಸಿಲುಕಿಕೊಂಡಿದ್ದು, ರಕ್ಷಣಾ ಕಾರ್ಯಾಚರಣೆ ಮುಂದುವರೆದಿದೆ. ಘಟನೆಯಲ್ಲಿ ಇಬ್ಬರು ಸ್ಥಳದಲ್ಲೇ ಮೃತಪಟ್ಟರೆ, ಇನ್ನೂ ನಾಲ್ವರು ಹಜಾರಿಬಾಗ್ ನ ಸದರ್ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ. ಹಲವರಿಗೆ ಗಂಭೀರ ಗಾಯಗಳಾಗಿದ್ದು, ಅವರನ್ನು ರಾಜೇಂದ್ರ ಇನ್ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸ್ (ಆರ್ ಐಎಂಎಸ್) ಗೆ ಹೆಚ್ಚಿನ ಚಿಕಿತ್ಸೆಗಾಗಿ ಕರೆದೊಯ್ಯಲಾಗುತ್ತಿದೆ.
ಒಂದು ವೇಳೆ ಬಸ್ ನದಿಯ ಮಧ್ಯ ಭಾಗದಲ್ಲಿ ನೀರಿದ್ದ ಭಾಗಕ್ಕೆ ಬಿದ್ದಿದ್ದರೆ, ಹೆಚ್ಚು ಹಾನಿ ಉಂಟಾಗುತ್ತಿತ್ತು ಎಂದು ಅಧಿಕಾರಿಯೊಬ್ಬರು ಹೇಳಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


