ದೇಶ

ಈ ವರ್ಷ ಗಗನ್ ಯಾನ್ ನ ಮೊದಲ ಪರೀಕ್ಷಾರ್ಥ ಉಡಾವಣೆ: ಸರ್ಕಾರ 

ಭಾರತದ ಮೊದಲ ಮಾನ ಸಹಿತ ಬಾಹ್ಯಾಕಾಶ ಮಿಷನ್ ಗಗನ್ ಯಾನ್ 2024 ರಲ್ಲಿ ಉಡಾವಣೆಯಾಗಲಿದೆ ಎಂದು ಕೇಂದ್ರ ಸಚಿವ ಜಿತೇಂದ್ರ ಸಿಂಗ್ ಹೇಳಿದ್ದಾರೆ.

ಈ ವರ್ಷ ಗಗನ್ ಯಾನ್ ನ ಮೊದಲ ಪರೀಕ್ಷಾರ್ಥ ಉಡಾವಣೆ: ಸರ್ಕಾರ 
ಸಂಗ್ರಹ ಚಿತ್ರ
Published On :

ನವದೆಹಲಿ: ಭಾರತದ ಮೊದಲ ಮಾನ ಸಹಿತ ಬಾಹ್ಯಾಕಾಶ ಮಿಷನ್ ಗಗನ್ ಯಾನ್ 2024 ರಲ್ಲಿ ಉಡಾವಣೆಯಾಗಲಿದೆ ಎಂದು ಕೇಂದ್ರ ಸಚಿವ ಜಿತೇಂದ್ರ ಸಿಂಗ್ ಹೇಳಿದ್ದಾರೆ.

ಕಾರ್ಯಕ್ರಮವೊಂದರಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿರುವ ಕೇಂದ್ರ ಸಚಿವರು, ಸರ್ಕಾರ ಮಾನವ ಸಹಿತ ಬಾಹ್ಯಾಕಾಶ ಮಿಷನ್ ನ್ನು ಭಾರತದ 75 ನೇ ಸ್ವಾತಂತ್ರ್ಯ ದಿನಾಚರಣೆ ವರ್ಷದಲ್ಲೇ ಉಡವಣೆ ಮಾಡಬೇಕೆಂದುಕೊಂಡಿತ್ತು. ಆದರೆ ಕೋವಿಡ್-19 ಕಾರಣದಿಂದಾಗಿ ಅದು ಮುಂದೂಡಲ್ಪಟ್ಟಿತು ಎಂದು ಹೇಳಿದ್ದಾರೆ. 

ಕೋವಿಡ್-19 ಪ್ಯಾಂಡಮಿಕ್ ರಷ್ಯಾದಲ್ಲಿ ಹಾಗೂ ಭಾರತದಲ್ಲಿ ಗಗನಯಾತ್ರಿಗಳಿಗೆ ನೀಡಬೇಕಿದ್ದ ತರಬೇತಿ ಮೇಲೆ ಪರಿಣಾಮ ಬೀರಿತು. ಈ ವರ್ಷ ಗಗನ್ ಯಾನ್ ಮಿಷನ್ ನ ಮೊದಲ ಪರೀಕ್ಷಾರ್ಥ ಪರೀಕ್ಷೆ ನಡೆಯಲಿದೆ ಎಂದು ಸಚಿವರು ಹೇಳಿದ್ದಾರೆ.

ಮೊದಲು ಲೇಡಿ ರೋಬೋಟ್ ನ್ನು ಇಸ್ರೋ ಬಾಹ್ಯಾಕಾಶಕ್ಕೆ ಕಳಿಸಲಾಗುತ್ತದೆ. 'ವ್ಯೋಮಮಿತ್ರ' ಎಂಬ ಹೆಸರನ್ನು ಈ ರೋಬೋಟ್ ಗೆ ಇಡಲಾಗಿದೆ.

ಮಾನವ ಸಹಿತ ಬಾಹ್ಯಾಕಾಶ ಯೋಜನೆಗೆ ಐಎಎಫ್ ನಾಲ್ವರು ಪೈಲಟ್ ಗಳನ್ನು ಗುರುತಿಸಿದೆ. ಸಿಬ್ಬಂದಿಗಳು ಈಗಾಗಲೇ ಪ್ರಾಥಮಿಕ ತರಬೇತಿಯನ್ನು ರಷ್ಯಾದಲ್ಲಿ ಪಡೆದಿದ್ದಾರೆ. 2024 ಕ್ಕೆ ಇಸ್ರೋ ಕನಿಷ್ಟ ಇಬ್ಬರು ಗಗನ ಯಾತ್ರಿಗಳನ್ನು ಭೂಮಿಯ ಕೆಳಕಕ್ಷೆಗೆ ಕಳಿಸಲಿದೆ ಎಂದು ಸಿಂಗ್ ಮಾಹಿತಿ ನೀಡಿದ್ದಾರೆ. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.